janadhvani

Kannada Online News Paper

ಹೊಸ ಸೇವಾ ನಿಯಮಗಳು -ಒಪ್ಪದಿದ್ದಲ್ಲಿ ವಾಟ್ಸಾಪ್ ಖಾತೆ ಡಿಲೀಟ್

ನವದೆಹಲಿ:ವಾಟ್ಸಾಪ್ ತನ್ನ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸುತ್ತಿದೆ ಎಂದು ಕಂಪನಿಯು ಅಧಿಸೂಚನೆಯಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ತಿಳಿಸಿದೆ. ಜ.5 ರಿಂದ ತನ್ನ ಬಳಕೆದಾರರಿಗೆ ಅದರ ಸೇವಾ ನಿಯಮಗಳಲ್ಲಿನ ಬದಲಾವಣೆ ಮತ್ತು ಗೌಪ್ಯತೆ ನೀತಿಯ ಬಗ್ಗೆ ತಿಳಿಸಲು ನೋಟಿಫಿಕೇಶನ್ ಗಳನ್ನು ಕಳುಹಿಸಲು ಆರಂಭಿಸಿದೆ. ಕಂಪನಿಯು ಬಳಕೆದಾರರ ಡೇಟಾವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಮುಂತಾದ ಪ್ರಮುಖ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ವಾಟ್ಸಾಪ್ ನ ಈ ಹೊಸ ನಿಯಮಗಳು ಫೆಬ್ರವರಿ 8, 2021 ರಿಂದ ಜಾರಿಗೆ ಬರಲಿದೆ. ಒಂದು ವೇಳೆ ಈ ನೀತಿಗಳನ್ನು ಬಳಕೆದಾರರು ಒಪ್ಪದಿದ್ದರೆ ಅಥವಾ Agree ಆಯ್ಕೆಯನ್ನು ಕ್ಲಿಕ್ ಮಾಡದಿದ್ದರೇ ವಾಟ್ಸಾಪ್ ಖಾತೆ ಡಿಲೀಟ್ ಆಗುತ್ತದೆ. ಸರಳವಾಗಿ ಹೇಳುವುದಾದರೇ ಈ ಬದಲಾವಣೆಗಳನ್ನು ಸ್ವೀಕರಿಸದ ಬಳಕೆದಾರರನ್ನು ವಾಟ್ಸಾಪ್ ನಿಂದ ಬಹಿಷ್ಕರಿಸಲಾಗುತ್ತದೆ ಎಂದೇ ವರದಿಯಾಗಿದೆ.

ವಾಟ್ಸಾಪ್ ತನ್ನ ವೆಬ್ ಸೈಟ್ ಅನ್ನು ಕೂಡ ಅಪ್ ಡೇಟ್ ಮಾಡಿದ್ದು, ಇಲ್ಲಿ ಹೊಸ ನಿಯಮಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ನೀಡಲಾಗಿದೆ. ಬಳಕೆದಾರರು ಹೊಸ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಬೇಕಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

error: Content is protected !! Not allowed copy content from janadhvani.com