janadhvani

Kannada Online News Paper

ಸೌದಿ: ಮತ್ತೆ ಒಂದು ವಾರ ವಿಮಾನ ಯಾನ ರದ್ದು

ರಿಯಾದ್: ಸೌದಿ ಅರೇಬಿಯಾ ಮತ್ತೆ ತನ್ನ ರಸ್ತೆ,ಸಮುದ್ರ ಮತ್ತು ವಾಯು ಮಾರ್ಗವನ್ನು ಒಂದು ವಾರ ಮುಚ್ಚಲಾಗಿದೆ. ಅಗತ್ಯವಿದ್ದರೆ ಮತ್ತೆ ನಿಷೇಧವನ್ನು ವಿಸ್ತರಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

ಕೋವಿಡ್ ಅದರ ಹೊಸ ರೂಪದಲ್ಲಿ ವಿವಿಧ ದೇಶಗಳಲ್ಲಿ ಹರಡಲಾಗುತ್ತಿದ್ದು, ದೇಶದ ಜನತೆ ಮತ್ತು ವಿದೇಶಿಯರ ಸುರಕ್ಷತೆಯನ್ನು ಖಾತರಿಪಡಿಸುವ ಗುರಿಯಿಂದ ಈ ನಡೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಸೌದಿ ಅರೇಬಿಯಾದಿಂದ ವಿದೇಶಗಳಿಗೆ ಮತ್ತು ವಿದೇಶಗಳಿಂದ ಸೌದಿ ಅರೇಬಿಯಾಕ್ಕೆ ಒಂದು ವಾರ ಪ್ರಯಾಣ ನಿಷೇಧ ಹೇರುವ ಸಚಿವಾಲಯದ ಆದೇಶ ಈ ಕೆಳಗಿನಂತಿದೆ.

1. ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ಒಂದು ವಾರ ರದ್ದುಪಡಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಸೇರಿದಂತೆ ತುರ್ತು ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಅಲ್ಲದೆ, ಪ್ರಸ್ತುತ ಸೌದಿಗೆ ಆಗಮಿಸಿರುವ ವಿದೇಶಿ ವಿಮಾನಗಳು ಮರಳಬಹುದು.

2. ಮುಂದಿನ ಒಂದು ವಾರದವರೆಗೆ ಜಲಮಾರ್ಗ ಮತ್ತು ರಸ್ತೆ ಮಾರ್ಗಗಳನ್ನು ರದ್ದುಪಡಿಸಲಾಗಿದೆ. ಅಗತ್ಯವಿದ್ದರೆ ಇನ್ನೊಂದು ವಾರ ಮುಂದುವರಿಯಲಿದೆ.

3. ಡಿಸೆಂಬರ್ 8 ರ ನಂತರ ಯುರೋಪಿಯನ್ ದೇಶಗಳಿಂದ ಸೌದಿ ಅರೇಬಿಯಾಕ್ಕೆ ಬಂದಿರುವವರು ಎರಡು ವಾರ ಕ್ವಾರಂಟೈನ್ ನಲ್ಲಿ ಕಳೆಯಬೇಕು. ಪ್ರತಿ ಐದು ದಿನಗಳಿಗೊಮ್ಮೆ ಪರೀಕ್ಷಿಸಬೇಕು.

4. ಕಳೆದ ಮೂರು ತಿಂಗಳಲ್ಲಿ ಯುರೋಪಿಗೆ ಭೇಟಿ ನೀಡಿದವರು ಸಹ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು.

5. ಸರಕುಗಳ ಸಾಗಣೆ ಮತ್ತು ವೈರಸ್ ಇಲ್ಲದ ದೇಶಗಳಿಗೆ ನೆರವು ವಿತರಣೆ ಕಾರ್ಯವು ನಿರಂತರವಾಗಿ ಮುಂದುವರಿಯಲಿದೆ.

6. ಈ ತೀರ್ಮಾನವನ್ನು ಪುನಃಪರಿಶೀಲಿಸುವ ಅಧಿಕಾರ ಆರೋಗ್ಯ ಸಚಿವಾಲಯಕ್ಕೆ ಇರುವುದು.

ಹೆಚ್ಚಿನ ಮಾಹಿತಿಯನ್ನು ನವೀಕರಿಸಲಾಗುವುದು.

error: Content is protected !! Not allowed copy content from janadhvani.com