janadhvani

Kannada Online News Paper

ದೆಹಲಿ ಹಿಂಸಾಚಾರದ ಕರಾಳ ಮುಖವನ್ನು ಜಗತ್ತಿಗೆ ಸಾರಿದ ‘ಫೋಟೋ’ ಪ್ರಶಸ್ತಿಗೆ ಆಯ್ಕೆ

ನವದೆಹಲಿ: ಜಾಗತಿಕ ಸುದ್ದಿಸಂಸ್ಥೆಯಾಗಿರುವ ರಾಯ್ಟರ್ಸ್‌‌ 2020 ರ ವರ್ಷದ ಪೋಟೋ ಪ್ರಶಸ್ತಿಗೆ ಆಯ್ಕೆಯಾಗಿರುವ ಛಾಯಾಚಿತ್ರಗಳ ಪಟ್ಟಿಯನ್ನು ಹೊರಹಾಕಿದೆ. ಈ ಪಟ್ಟಿಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ದೆಹಲಿ ಹಿಂಸಾಚಾರದ ವೇಳೆ ತೆಗೆದ ಪೋಟೋ ಸಹ ಸ್ಥಾನ ಪಡೆದಿದೆ.

ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಗುಂಪೊಂದು ಅಮಾನವೀಯವಾಗಿ ಥಳಿಸುತ್ತಿರವ ಫೋಟೋವನ್ನು ದಾನೀಶ್ ಸಿದ್ದಿಕಿ ಎಂಬ ವ್ಯಕ್ತಿ ಪೋಟೋ ಕ್ಲಿಕ್ಕಿಸಿದ್ದರು. ಈ ಪೋಟೋ ದೆಹಲಿ ಹಿಂಸಾಚಾರದ ಕರಾಳ ಮುಖವನ್ನು ಜಗತ್ತಿಗೆ ಸಾರುವಂತಿತ್ತು. ಅಲ್ಲದೆ, ಈ ಚಿತ್ರ ಹಲವರ ಮನ ಕಲಕಿತ್ತು. ಹೀಗಾಗಿ ಈ ಪೋಟೋವನ್ನು 2020 ವರ್ಷದ ಶ್ರೇಷ್ಠ ಛಾಯಾಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಈ ಚಿತ್ರವಷ್ಟೇ ಅಲ್ಲದೆ, ದಾನೀಶ್ ದೆಹಲಿ ಗಲಭೆ ಸಮಯದಲ್ಲಿ 100ಕ್ಕೂ ಅಧಿಕ ಪೋಟೋಗಳನ್ನು ತೆಗೆದಿದ್ದಾರೆ ಈ ಎಲ್ಲಾ ಪೋಟೋಗಳೂ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ ಅಲ್ಲದೆ, ದೆಹಲಿ ಹಿಂಸಾಚಾರದ ಕರಾಳ ಮುಖವನ್ನು ಸಾಕ್ಷೀಕರಿಸಿದೆ ಎಂದರೆ ತಪ್ಪಾಗಲಾರದು.

ಅಸಲಿಗೆ ಕೇಂದ್ರ ಸರ್ಕಾರ ಪೌರತ್ವದ ತಿದ್ದುಪಡಿ ಕಾಯ್ದೆಯನ್ನು ಜಾರಿ ತರಲು ಮುಂದಾಗಿತ್ತು. ಸಂಸತ್ನ ಎರಡೂ ಮನೆಯಲ್ಲಿ ಸಿಎಎ ಕಾಯ್ದೆಯನ್ನು ಮಂಡಿಸಿದ್ದ ಕೇಂದ್ರ ಸರ್ಕಾರ ಬಹುಮತದಿಂತ ಅಂಗೀಕಾರವನ್ನೂ ಪಡೆದಿತ್ತು. ಆದರೆ, ಈ ಕಾಯ್ದೆ ಪ್ರಜಾಪ್ರಭುತ್ವಕ್ಕೆ ಮಾರಕ ಮತ್ತು ಸಂವಿಧಾನದ ಆಶಯಗಳಿಗೆ ವಿರೋಧಿಯಾಗಿದೆ ಎಂಬ ಕಾರಣಕ್ಕೆ ಹಲವರು ಈ ಕಾಯ್ದೆಯನ್ನು ವಿರೋಧಿಸಿದ್ದರು.

ಇಡೀ ದೇಶದಾದ್ಯಂತ ಈ ಕಾಯ್ದೆಯ ವಿರುದ್ಧ ಪ್ರತಿಭಟನೆ ಭುಗಿಲೆದ್ದಿತ್ತು. ಇನ್ನೂ ದೆಹಲಿಯ ಶಾಹೀನ್ ಭಾಗ್ ಪ್ರಮುಖ ಪ್ರತಿಭಟನಾ ಕೇಂದ್ರವಾಗಿ ಬದಲಾಗಿತ್ತು. ಈ ವೇಳೆ ಹೋರಾಟ ಬಲವಾಗುತ್ತಿದ್ದದ್ದನ್ನು ಮನಗಂಡಿದ್ದ ಬಿಜೆಪಿ ಕಾರ್ಯಕರ್ತರು ಸಿಎಎ ಕಾಯ್ದೆಯನ್ನೂ ಬೆಂಬಲಿಸಿ ಇದೇ ಶಾಹೀನ್ ಭಾಗ್ ಬಳಿ ಅವರೂ ಪ್ರತಿಭಟನೆಗೆ ಮುಂದಾದರು ಈ ವೇಳೆ ಭುಗಿಲೆದ್ದ ಗಲಭೆ ನಂತರ ಹಿಂಸಾಚಾರವಾಗಿ ಬದಲಾದದ್ದು ಎರಡು ವಾರಗಳಿಗೂ ಹೆಚ್ಚು ಕಾಲ ದೆಹಲಿ ಬೂದಿ ಮುಚ್ಚಿದ ಕೆಂಡದಂತೆ ಇದ್ದದ್ದು ಇಂದು ಇತಿಹಾಸ.

ದೆಹಲಿ ಗಲಭೆಯಲ್ಲಿ ಸುಮಾರು 60ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಅಲ್ಲದೆ, 300ಕ್ಕೂ ಅಧಿಕ ಜನ ತೀವ್ರತರನಾದ ಗಾಯಕ್ಕೊಳಗಾಗಿದ್ದರು. ಇನ್ನು ಈ ಗಲಭೆಯಲ್ಲಿ ಮನೆಮಠ ಕಳೆದುಕೊಂಡವರ ಬದುಕು ಈವರೆಗೆ ಹಳಿಗೆ ಮರಳಿಲ್ಲ.

error: Content is protected !! Not allowed copy content from janadhvani.com