janadhvani

Kannada Online News Paper

ಸೌದಿಯಿಂದ ಭಾರತಕ್ಕೆ ವಿಮಾನ: ನಕಲಿ ಸಂದೇಶ ವಿರುದ್ಧ ರಾಯಭಾರ ಕಚೇರಿ ಎಚ್ಚರಿಕೆ

ರಿಯಾದ್: ಭಾರತಕ್ಕೆ ವಿಮಾನ ಹಾರಾಟ ನಡೆಸುವುದಾಗಿ ನಂಬಿಸಿ ಪ್ರಯಾಣಿಕರಿಂದ ಹಣ ದೋಚುವ ಗುಂಪಿನ ಬಗ್ಗೆ ಎಚ್ಚರವಹಿಸಬೇಕು ಎಂದು ರಿಯಾದ್‌ನ ಭಾರತೀಯ ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ರಾಯಭಾರ ಕಚೇರಿಯ ಹೆಸರಿನಲ್ಲಿ @SupportindianEmbassy ಎಂಬ ನಕಲಿ ಟ್ವಿಟರ್ ಖಾತೆ ತೆರೆದು indianhighcommission20@yahoo.com ಎಂಬ ಇಮೇಲ್ ಮೂಲಕ ಈ ಗುಂಪು ವಂಚನೆ ನಡೆಸುತ್ತಿದೆ. ಅಂತಹ ಖಾತೆಗಳೊಂದಿಗೆ ರಾಯಭಾರ ಕಚೇರಿಗೆ ಯಾವುದೇ ಸಂಬಂಧವಿಲ್ಲ ಎಂದು ರಾಯಭಾರ ಕಚೇರಿ ತಿಳಿಸಿದೆ.

ರಾಯಭಾರ ಕಚೇರಿಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳಿಗೆ ಕಚೇರಿಯ ಅಧಿಕೃತ ವೆಬ್‌ಸೈಟ್ https://www.eoiriyadh.gov.in ನಲ್ಲಿ ಒದಗಿಸಲಾದ ದೂರವಾಣಿ, ಟ್ವಿಟರ್, ಫೇಸ್‌ಬುಕ್ ಮತ್ತು ಇ-ಮೇಲ್ ಅನ್ನು ದೃಢೀಕರಿಸಿಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೆದ ಒಂದು ವಾರದಿಂದ ಹಲವು ಮಂದಿಗೆ ಈ ರೀತಿಯ ನಕಲಿ ಸಂದೇಶಗಳು ಲಭಿಸಿದ್ದು, ಜನರು ರಾಯಭಾರ ಕಚೇರಿಗೆ ಕರೆಮಾಡಿ ವಿಚಾರಿಸಿದ ಹಿನ್ನೆಲೆಯಲ್ಲಿ ಈ ವಂಚನೆ ಬೆಳಕಿಗೆ ಬಂದಿದೆ.

error: Content is protected !! Not allowed copy content from janadhvani.com