janadhvani

Kannada Online News Paper

ತೀವ್ರ ಗತಿಯಲ್ಲಿ ಹರಡುತ್ತಿದೆ ಕೊರೋನಾ- ಮಂಗಳೂರಲ್ಲಿ ಮೊದಲ ಕೇಸ್ ದೃಢ

ಬೆಂಗಳೂರು :ಮಂಗಳೂರಲ್ಲಿ ಮೊದಲ ಕರೋನ ಕೇಸ್ ದೃಢಪಟ್ಟಿದ್ದು ದುಬೈನಿಂದ ಆಗಮಿಸಿದ್ದ ವ್ಯಕ್ತಿಗೆ ಕೋರೋಣ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

ಮಾರ್ಚ್ 19, 2020ರಂದು 165 ಪ್ರಯಾಣಿಕರೊಂದಿಗೆ ಸ್ಪೈಸ್ ಜೆಟ್ ವಿಮಾನದ ಮೂಲಕ, ಭಟ್ಕಳಕ್ಕೆ ಮಂಗಳೂರು ಮೂಲಕ ಆಗಮಿಸಿದ್ದನು. ಈ ಯುವಕನನ್ನು ಶಂಕೆಯ ಹಿನ್ನಲೆಯಲ್ಲಿ ನಗರ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಯುವಕನಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ.

ರಾಜ್ಯದಲ್ಲಿ ಮೂರನೇ ವಾರದಲ್ಲಿ ತೀವ್ರ ಗತಿಯಲ್ಲಿ ಕರೋನಾ ಹರಡುತ್ತಿದ್ದು ನಿನ್ನೆಂದೀಚೆಗೆ ಹಲವು ಮಂದಿಗೆ ಸೋಂಕು ತಗಲಿದೆ. ಇಂದು ಮತ್ತೆ 6 ಪ್ರಕರಣ ಬೆಳಕಿಗೆ ಬಂದಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 26 ಜನರಿಗೆ ಸೋಂಕು ತಗುಲಿದಂತಾಗಿದೆ.

ಮಾರಕ ಕೊರೋನಾ ವೈರಸ್ ಧಾರಾವಾಡಕ್ಕೂ ಕಾಲಿಟ್ಟಿದ್ದು ವ್ಯಕ್ತಿಯೊಬ್ಬನಲ್ಲಿ ಕೊರೊನಾ ಸೋಂಕು ಧೃಡಪಟ್ಟಿದೆ. ಹುಬ್ಬಳ್ಳಿ-ಧಾರವಾಡ ಮೂಲದ ವ್ಯಕ್ತಿಯೊಬ್ಬ ದುಬೈನಿಂದ ಹುಬ್ಬಳ್ಳಿಗೆ ಬಂದಿದ್ದಾನೆ ಎನ್ನಲಾಗಿದೆ. ಸ್ವಯಂ ಪ್ರೇರಿತವಾಗಿ ಆ ವ್ಯಕ್ತಿ ಖಾಸಗಿ ಆಸ್ಪತ್ರೆಗೆ ದಾಖಲು ಆಗಿದ್ದಾನೆ.

ಆದರೆ ಈ ವೇಳೆ ಖಾಸಗಿ ಆಸ್ಪತ್ರೆ ವೈದ್ಯರು ಕೂಡಲೇ ಆ ವ್ಯಕ್ತಿಯ ರಕ್ತದ ಮಾದರಿಯನ್ನು ಶಿವಮೊಗಕ್ಕೆ ಕಳುಹಿಕೊಟ್ಟಿದ್ದರು, ಇಂದು ವರದಿಯಲ್ಲಿ ಪಾಸಿಟಿವ್‌ ಬಂದಿದ್ದು, ಈ ವೇಳೇ ಜಿಲ್ಲಾಡಳಿತ ಕೂಡಲೇ ಆತನನ್ನು ಹುಬ್ಬಳ್ಳಿಯಿಂದ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !! Not allowed copy content from janadhvani.com