ಪ್ರವಾದಿ ನಿಂದನೆ ಪೋಲೀಸ್ ಇಲಾಖೆಯಿಂದ ಸ್ವಯಂ ಪ್ರೇರಿತ ಕೇಸು ದಾಖಲಾಗಲಿ

ಮಂಗಳೂರು: ಮಧುಗಿರಿ ಮೋದಿ ಎಂಬವ ಸಾಮಾಜದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಜನರನ್ನು ಪರಸ್ಪರ ಕಚ್ಚಾಡಿಸಿ ಅಶಾಂತಿ ಹರಡಲು ಉದ್ದೇಶ ಪೂರ್ವಕವಾಗಿ ಜಾಗತಿಕ ಮು ಸಲ್ಮಾನರ ಪ್ರವಾದಿಯನ್ನು ನಿಂದಿಸಿದ ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾ ಮೂಲಕ ಹರಡಿದ್ದಾನೆ
ಈ ವಿಷಯದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ತುಂಬಾ ನೋವು ಉಂಟುಮಾಡಿದೆ.

ರಾಜ್ಯಾದ್ಯಂತ ಇಡೀ ಮುಸ್ಲಿಮ್ ಸಮುದಾಯ ರೊಚ್ಚಿಗೆದ್ದು ಪ್ರತಿಭಟನೆ ಹೋರಾಟಗಳಿಗೆ ಬೀದಿಗಿಳಿಯುವ ಮುಂಚೆ ರಾಜ್ಯ ಸರಕಾರ ಎಚ್ಚೆತ್ತು ಅಪರಾಧಿಯನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೋಲೀಸ್ ಇಲಾಖೆಗೆ ಆದೇಶ ಮಾಡಬೇಕಾಗಿ ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರವನ್ನು ಅಶ್ರಫ್ ಕಿನಾರ ಮಂಗಳೂರು ಆಗ್ರಹಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!