ದುಬೈ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ತಾನಾಗಿಯೇ ರೀಚಾರ್ಜ್ ಆಗಲಿದೆ

ದುಬೈ: ಇನ್ನು ಮುಂದೆ ಇಲ್ಲಿನ ರಸ್ತೆಗಳಲ್ಲಿ ಓಡಾಡುವ ಎಲೆಕ್ಟ್ರಿಕ್ ವಾಹನಗಳು ತಾನಾಗಿಯೇ ರೀಚಾರ್ಜ್ ಆಗಲಿದೆ. ಅತ್ಯಾಧುನಿಕ ವೈರ್‌ಲೆಸ್ ಚಾರ್ಜರ್ ಆಗಿ ರಸ್ತೆಯನ್ನೇ ಬದಲಾಯಿಸುವ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ರೀಚಾರ್ಜ್ ವ್ಯವಸ್ಥೆಯನ್ನು ದುಬೈ ಸಿಲಿಕಾನ್ ಓಯಸಿಸ್ನಲ್ಲಿ ಪ್ರಾರಂಭಿಸಲಾಗಿದೆ. ಹಾದುಹೋದ ವಾಹನಗಳಿಗೆ ಶೇಪ್ಡ್ ಮ್ಯಾಗ್ನೆಟಿಕ್ ಫೀಲ್ಡ್ ಇನ್ ರೆಸೋನೆನ್ಸ್ ಅಥವಾ ಎಸ್‌ಎಂಎಫ್‌ಐಆರ್ ತಂತ್ರಜ್ಞಾನ ಬಳಸಿ ರೀಚಾರ್ಜ್ ಮಾಡಲಾಗುತ್ತದೆ. 60 ಮೀಟರ್ ಉದ್ದದ ಈ ರಸ್ತೆಯಲ್ಲಿ ಸಂಚರಿಸುವ ಎಲೆಕ್ಟ್ರಿಕ್ ಬಸ್ ಮತ್ತು ಕಾರಿನ ಬ್ಯಾಟರಿಗಳು ತಾನಾಗಿಯೇ ರೀಚಾರ್ಜ್ ಆಗಲಿದೆ. ಕೇಬಲ್ ಬಳಸಿ ವಾಹನಗಳನ್ನು ಚಾರ್ಜ್ ಮಾಡುವುದಕ್ಕಿಂತ ಈ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ ಎಂದು ಆರ್‌ಟಿಎ ಅಧಿಕಾರಿಗಳು ಹೇಳುತ್ತಾರೆ.

ಈ ರೀಚಾರ್ಜಿಂಗ್ ರಸ್ತೆಗಳನ್ನು ದುಬೈ ಸರ್ಕಾರ ಕೈಗೊಂಡ ಸುಸ್ಥಿರ ಅಭಿವೃದ್ಧಿ ಉಪಕ್ರಮಗಳ ಭಾಗವಾಗಿ ಜಾರಿಗೆ ತರಲಾಗಿದ್ದು, ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸುವ ಯೋಜನೆಗಳ ಒಂದು ಭಾಗವಾಗಿದೆ. ರಸ್ತೆಯ ಸಮೀಪವಿರುವ ವಿದ್ಯುತ್ಕಾಂತೀಯ ಅಲೆಗಳು ಅಂತರರಾಷ್ಟ್ರೀಯ ಗುಣಮಟ್ಟವನ್ನು ಪಾಲಿಸುತ್ತವೆ ಎಂದು ಆರ್‌ಟಿಎ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!