janadhvani

Kannada Online News Paper

ವಕ್ಫ್ ಸಂಸ್ಥೆಗಳು ಮಾದರಿ ನಿಯಮಾವಳಿ ಅನುಷ್ಠಾನಕ್ಕೆ ಸೂಚನೆ

ಜಿಲ್ಲೆಯ ಎಲ್ಲ ವಕ್ಫ್ ಸಂಸ್ಥೆಗಳು ಮಾದರಿ ನಿಯಮಾವಳಿಯ ನಮೂನೆ 42ನ್ನು ಅಂಗೀಕರಿಸಿಕೊಳ್ಳುವುದು ಕಡ್ಡಾಯ
ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ ಜಿಲ್ಲೆಯ ಎಲ್ಲಾ ವಕ್ಸ್ ಸಂಸ್ಥೆಗಳು ಕರ್ನಾಟಕ ರಾಜ್ಯ ಹೈಕೋರ್ಟ್‌ 2024 ಏಪ್ರಿಲ್ 23 ರ ಆದೇಶದಂತೆ ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಮಾವಳಿಯ ನಮೂನೆ ನಂ.42 ನ್ನು (ಬೈಲಾ) ಅಂಗೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ. ಎಂದು ಚಿಕ್ಕಮಗಳೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ರವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 517 ವಕ್ಫ್ ಸಂಸ್ಥೆಗಳ ಪೈಕಿ ಇದುವರೆಗೂ ಮಾದರಿ ನಿಯಮಾವಳಿಯನ್ನು ಅಂಗೀಕರಿಸಿಕೊಳ್ಳದ ವಕ್ಫ್ ಸಂಸ್ಥೆಗಳ ಆಡಳಿತ ಸಮಿತಿಯವರು ಸಂಬಂಧಪಟ್ಟ ದಾಖಲೆಗಳೊಂದಿಗೆ ಚಿಕ್ಕಮಗಳೂರು ಜಿಲ್ಲಾ ವಕ್ಸ್ ಕಚೇರಿಯ ಮೂಲಕ ರಾಜ್ಯ ವಕ್ಫ್ ಮಂಡಳಿಯ ಅಂಗೀಕಾರಕ್ಕಾಗಿ ಕೂಡಲೇ ಸಲ್ಲಿಸಬೇಕು ಎಂದು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com