janadhvani

Kannada Online News Paper

ಸೌದಿ: ಮೂಡಬಿದ್ರೆಯ ಕುಟುಂಬದ ವಾಸಸ್ಥಳದಲ್ಲಿ ಅಗ್ನಿ ಅನಾಹುತ- 3 ವರ್ಷದ ಮಗು ಮೃತ್ಯು

ಘಟನೆಯಲ್ಲಿ ಫಹದ್‌ ಅವರ ಪುತ್ರ ಸಾಯಿಕ್ ಶೇಖ್ ಮೃತಪಟ್ಟಿದ್ದು, ಫಹದ್‌, ಅವರ ಪತ್ನಿ ಸಲ್ಮಾ ಮತ್ತು ಇನ್ನೋರ್ವ ಪುತ್ರ ಶಾಹಿದ್‌ ಶೇಖ್‌ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ದಮ್ಮಾಮ್: ಸೌದಿ ಅರೇಬಿಯಾದ ದಮಾಮ್ ನಲ್ಲಿ ನೆಲೆಸಿರುವ ಕರಾವಳಿಯ ಅನಿವಾಸಿ ಭಾರತೀಯ ಕುಟುಂಬವೊಂದು ವಾಸಿಸುತ್ತಿದ್ದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ, ಮೂರು ವರ್ಷದ ಮಗುವೊಂದು ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

ಅದಮಾದ ಲುಲು ಮಾಲ್ ಹಿಂಭಾಗದಲ್ಲಿರುವ ಅಲ್ ಹುಸೇನಿ ಕಂಪೌಂಡ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮೂಡಬಿದಿರೆಯ ಕೋಟೆಬಾಗಿಲು ಮೂಲದ ಶೇಖ್‌ ಫಹದ್‌ ಎಂಬವರ ಮಗು ಮೃತಪಟ್ಟಿದೆ.

ಫಹದ್‌ ಅವರ ಕುಟುಂಬವು ಕಳೆದ ಆರು ತಿಂಗಳಿನಿಂದ ಇಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಫಹದ್‌ ಅವರ ಪುತ್ರ ಸಾಯಿಕ್ ಶೇಖ್ ಮೃತಪಟ್ಟಿದ್ದು, ಫಹದ್‌, ಅವರ ಪತ್ನಿ ಸಲ್ಮಾ ಮತ್ತು ಇನ್ನೋರ್ವ ಪುತ್ರ ಶಾಹಿದ್‌ ಶೇಖ್‌ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಬೆಂಕಿ ಅವಘಡಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.

error: Content is protected !! Not allowed copy content from janadhvani.com