ನಾಳೆ ಅಡ್ಯಾರಿನಲ್ಲಿ CAA ವಿರುದ್ಧ ಬೃಹತ್ ಪ್ರತಿಭಟನೆ- ಯಶಸ್ವಿಗೆ ಎ.ಪಿ.ಉಸ್ತಾದ್ ಕರೆ

ಕಲ್ಲಿಕೋಟೆ,ಜ.14: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಅಸಾಂವಿಧಾನಿಕ ಮತ್ತು ಧರ್ಮದ ಹೆಸರಲ್ಲಿ ದೇಶದ ಜನರನ್ನು ವಿಭಜಿಸುವ ಕಾಯ್ದೆಯಾಗಿದೆ.

ಇದರ ವಿರುದ್ಧ ದೇಶಾದ್ಯಂತ ಪ್ರಜಾಪ್ರಭುತ್ವ ಸಂರಕ್ಷಕರಿಂದ ಪ್ರತಿಭಟನೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ಸರ್ವ ಸಮಾನ ಮನಸ್ಕ ಸಂಘಟನೆಗಳ ಸಹಕಾರದೊಂದಿಗೆ ಜನವರಿ 15 ಬುಧವಾರದಂದು ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿ ಐತಿಹಾಸಿಕ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿಭಟನೆಗೆ ಜಾತಿ, ಮತ, ಪಥ ಬೇಧ ವಿಲ್ಲದೆ ಎಲ್ಲರೂ ಸೇರಿ ಯಶಸ್ವಿ ಗೊಳಿಸಬೇಕೆಂದು ಇಂಡಿಯನ್ ಗ್ಯಾಂಡ್ ಮುಪ್ತಿ ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!