janadhvani

Kannada Online News Paper

ಪ್ರವಾಸೋದ್ಯಮವನ್ನು ಉತ್ತೇಜಿಸಲು ಮದ್ಯ ಮಾರಾಟವಿಲ್ಲ- ಸೌದಿ ಅರೇಬಿಯಾ

ರಿಯಾದ್: ಸೌದಿ ಅರೇಬಿಯಾ ಮದ್ಯ ನಿಷೇಧವನ್ನು ಮುಂದುವರಿಸಲಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಮದ್ಯದ ಅಗತ್ಯವಿಲ್ಲ ಎಂದು ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆಯ ಆಯೋಗದ ಅಧ್ಯಕ್ಷ ಅಹ್ಮದ್ ಅಲ್-ಖತೀಬ್ ಹೇಳಿದ್ದಾರೆ. ಪ್ರಸ್ತುತ ಎಲೆಕ್ಟ್ರಾನಿಕ್ ಪ್ರವಾಸಿ ವೀಸಾ ದೇಶೀಯ ಪ್ರವಾಸೋದ್ಯಮದಲ್ಲಿ ಹುರುಪನ್ನು ಸೃಷ್ಟಿಸಿದೆ. ಯುಕೆ ಮತ್ತು ಚೀನಾದಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಈವರೆಗೆ 1.5 ಲಕ್ಷ ಪ್ರವಾಸಿ ವೀಸಾ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇದು ನಿರೀಕ್ಷೆಗಿಂತಲೂ ಹೆಚ್ಚಿನದ್ದಾಗಿದೆ ಎಂದು ಅಹ್ಮದ್ ಅಲ್-ಖತೀಬ್ ಹೇಳಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ದೇಶವು ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಾಕಷ್ಟು ಮೂಲಸೌಕರ್ಯ ಮತ್ತು ಹೋಟೆಲ್‌ಗಳನ್ನು ಹೊಂದಿದೆ.

ಸೌದಿಯ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ರೀತಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುವುದು. ಮಸೀದಿಯ ಪ್ರಾರ್ಥನೆಯ ಸಮಯದಲ್ಲಿ ಅಂಗಡಿಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ಮುಚ್ಚಲಾಗುವುದು. ಆ ಸಂಸ್ಥೆಗಳ ನೌಕರರ ಪ್ರಾರ್ಥನೆ ಮಾಡುವ ಅವಕಾಶವನ್ನು ನಿರಾಕರಿಸಲಾಗುವುದಿಲ್ಲ. ಇದು ವ್ಯಾಪಾರಕ್ಕೆ ಅಡ್ಡಿಯಾಗುವುದಿಲ್ಲ ಎಂದು ಅಹ್ಮದ್ ಅಲ್-ಖತೀಬ್ ಹೇಳಿದ್ದಾರೆ.

error: Content is protected !! Not allowed copy content from janadhvani.com