ರಿಯಾದ್: ಸೌದಿಯಲ್ಲಿ ಇನ್ನು ಮುಂದೆ ಆರೋಗ್ಯ ವಿಮಾ ಕಾರ್ಡ್ಗೆ ಬದಲಾಗಿ ನಿವಾಸ ದಾಖಲೆಯಾದ ಇಕಾಮಾ ಸಾಕಾಗಲಿದೆ. ಜನವರಿ 1 ರಿಂದ ಆರೋಗ್ಯ ವಿಮೆಯನ್ನು ವಿದೇಶಿಯರ ಇಖಾಮಾ ಮತ್ತು ಸ್ಥಳೀಯ ಜನರ ರಾಷ್ಟ್ರೀಯ ಐಡಿಯೊಂದಿಗೆ ಜೋಡಿಸಲಾಗುವುದು ಎಂದು ಕೌನ್ಸಿಲ್ ಆಫ್ ಕೋಆಪರೇಟಿವ್ ಹೆಲ್ತ್ ಇನ್ಶುರೆನ್ಸ್ ಘೋಷಿಸಿದೆ.
ಆರೋಗ್ಯ ವಿಮೆ ಮತ್ತು ಗುರುತಿನ ದಾಖಲೆಗಳನ್ನು ವಿದೇಶಿ ರಾಷ್ಟ್ರೀಯರ ಗುರುತಿನ ಚೀಟಿ ಮತ್ತು ಸ್ಥಳೀಯ ರಾಷ್ಟ್ರೀಯ ಗುರುತಿನ ಚೀಟಿಯೊಂದಿಗೆ ಜೋಡಿಸುವ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಿಗೆ ಜನವರಿಯಿಂದ ವಿಶೇಷ ಆರೋಗ್ಯ ವಿಮೆ ಕಾರ್ಡ್ ಅಗತ್ಯವಿರುವುದಿಲ್ಲ. ವಿದೇಶಿ ಪ್ರಜೆಗಳು ಚಿಕಿತ್ಸೆಗಾಗಿ ಇಕಾಮಾ ಮತ್ತು ಸ್ಥಳೀಯರು ಗುರುತಿನ ಚೀಟಿಗಳನ್ನು ಸಲ್ಲಿಸಬೇಕು.
ಆರೋಗ್ಯ ವಿಮೆ ಮತ್ತು ಇ-ಆರೋಗ್ಯ ವಿಮಾ ಕಾರ್ಡ್ನ ಪ್ರಾರಂಭಕ್ಕೆ ಸಂಬಂಧಿಸಿದ ಸ್ಮಾರ್ಟ್ ಅಪ್ಲಿಕೇಶನ್ಗಳನ್ನು ಪ್ರಾರಂಭಿಸಿದ ಹಿನ್ನೆಲೆಯಲ್ಲಿ, ಆರೋಗ್ಯ ವಿಮೆ ಕಾರ್ಡ್ಗೆ ಬದಲಾಗಿ ಗುರುತಿನ ಚೀಟಿಯನ್ನು ಸ್ವೀಕರಿಸಲಾಗುತ್ತದೆ. ಕೌನ್ಸಿಲ್ ಆಫ್ ಕೋಆಪರೇಟಿವ್ ಹೆಲ್ತ್ ಇನ್ಶುರೆನ್ಸ್ ಈ ಬಗ್ಗೆ ಸ್ಪಷ್ಟಪಡಿಸಿ, ಇದು ಆರೋಗ್ಯ ವಿಮಾ ಸೇವೆಗಳನ್ನು ವೇಗವಾಗೊಳಿಸುತ್ತದೆ ಮತ್ತು ಸುಧಾರಣೆಗೊಳಿಸಲಿದೆ ಎಂದು ಅಂದಾಜಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು