janadhvani

Kannada Online News Paper

ಬಾಬರಿ ಮಸೀದಿ: ಸುಪ್ರೀಂ ತೀರ್ಪನ್ನು ಮುಸ್ಲಿಮರು ಸ್ವಾಗತಿಸಬೇಕು-ಇಂಡಿಯನ್ ಗ್ರಾಂಡ್ ಮುಫ್ತಿ

ಮಂಗಳೂರು, ನ.7: ಬಾಬರಿ ಮಸೀದಿ ವಿವಾದದ ಕುರಿತ ತೀರ್ಪು ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಎಲ್ಲಾ ಮುಸ್ಲಿಮರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಬೇಕು ಎಂದು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಕರೆ ನೀಡಿದ್ದಾರೆ.

ಮಂಗಳೂರಿನ ನೆಹರೂ ಮೈದಾನದ ಶರಫುಲ್ ಉಲಮಾ ವೇದಿಕೆಯಲ್ಲಿ ಎಸ್ ವೈಎಸ್ ನಿಂದ ನಡೆದ ‘ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ಹೇಗಿದ್ದರೂ ಅದನ್ನು ಮುಕ್ತವಾಗಿ ಸ್ವೀಕರಿಸಬೇಕು. ಯಾರೂ ಆವೇಶಕ್ಕೊಳಗಾಗಬಾರದು. ಎಲ್ಲರೂ ಸಂಯಮ ಪಾಲಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾದಿ ಪ್ರೇಮ, ಪ್ರವಾದಿ ಸ್ನೇಹಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಪ್ರವಾದಿ ಚರ್ಯೆಗೆ ವಿರುದ್ಧವಾಗಿ ಯಾರಾದರೂ, ಏನಾದರೂ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದರು.ರಾಜ್ಯ ಜಮೀಯ್ಯತುಲ್ ಉಲಮಾದ ಅಧ್ಯಕ್ಷ ತಾಜುಲ್ ಫುಖಹಾ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.

ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ನೇರವೇರಿಸಿದರು. ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಹುಬ್ಬುರ್ರಸೂಲ್ ಭಾಷಣ ಮಾಡಿದರು. ಝೈನುಲ್ ಉಲಮಾ ಮಾಣಿ ಉಸ್ತಾದ್, ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್, ತೋಕೆ ಮುಹಿಯುದ್ದೀನ್ ಸಂದೇಶ ಭಾಷಣ ಮಾಡಿದರು.

ಶಾಸಕ ಯು.ಟಿ. ಖಾದರ್, ಯೆನೆಪೊಯ ವಿಶ್ವವಿದ್ಯಾನಿಲಯ ಕುಲಪತಿ ವೈ.ಅಬ್ದುಲ್ಲಾ ಕುಂಞಿ ಹಾಜಿ, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಡಾ. ಹಾಜಿ ಶೇಖ್ ಬಾವ ಅಬುಧಾಬಿ, ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಜಿಲ್ಲಾ ಕಾರ್ಯಾಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಎಸ್‌ಎಂಎ ಕರ್ನಾಟಕ ರಾಜ್ಯಾಧ್ಯಕ್ಷ ಸೈಯದ್ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಉಜಿರೆ, ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾದ ಕೋಶಾಧಿಕಾರಿ ಅಲ್‌ ಹಾಜ್ ಕೆ.ಎ. ಮಹ್ಮೂದ್ ಮುಸ್ಲಿಯಾರ್ ಎಡಪ್ಪಾಲ, ಸುನ್ನೀ ಜಂ ಇಯ್ಯತುಲ್ ಉಲಮಾದ ಉಪಾಧ್ಯಕ್ಷ ಅಲ್‌ ಹಾಜ್ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್, ಡಾ. ಮೌಲಾನಾ ಫಾಝಿಲ್ ರಝ್ವಿ ಕಾವಲ್ ಕಟ್ಟೆ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮುಹಮ್ಮದ್ ಶಾಫಿ ಸಅದಿ ಬೆಂಗಳೂರು, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸೈಯದ್ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್, ಎಸ್‌ಇಡಿಸಿ ಕರ್ನಾಟಕ ರಾಜ್ಯಾಧ್ಯಕ್ಷ ಕೆ.ಕೆ. ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ, ಎಸ್‌ ಜೆಎಂ ಕರ್ನಾಟಕ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್, ರಾಜ್ಯ ಹಜ್ ಕಮಿಟಿಯ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ, ಕರ್ನಾಟಕ ಬ್ಯಾರಿ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ಹುಬ್ಬುರ್ರಸೂಲ್ ಸಮಿತಿಯ ಮಾಧ್ಯಮ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು ಅಬೂಸುಫಿಯಾನ್ ಮದನಿ, ಹಾಫಿಳ್ ಹನೀಫ್ ಮಿಸ್ಬಾಹಿ, ಸಿರಾಜ್ ಸಖಾಫಿ ಕನ್ಯಾನ, ಅಬ್ದುಲ್ ಹಮೀದ್ ಬಜ್ಪೆ ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯಾ, ಇಸ್ಮಾಯೀಲ್ ಸ ಅದಿ ಉರುಮಣೆ, ಹಮೀದ್ ಹಾಜಿ‌ ಕರಾವಳಿ, ಅಬ್ದುರ್ರಹ್ಮಾನ್ ರಝ್ವಿ‌ ಕಲ್ಕಟ್ಟ, ಸುಫ್ ಯಾನ್ ಸಖಾಫಿ ಕಾವಳಕಟ್ಟೆ, ಸೈಯದ್ ಇಸ್ಮಾಯೀಲ್ ಹಾಜಿ ಉಜಿರೆ, ಎಪಿಎಸ್ ತಂಙಳ್ ಉಪ್ಪಳ್ಳಿ, ಹಕೀಂ‌ ಕೊಡ್ಲಿಪೇಟೆ, ಹಾಮಿದ್ ತಂಙಳ್ ಬಾಳೆಹೊನ್ನೂರು, ನ್ಯಾಯವಾದಿ ಇಲ್ಯಾಸ್ ನಾವುಂದ, ಇಬ್ರಾಹೀಂ ಸಖಾಫಿ ಸೆರ್ಕಳ, ಕೆಎಚ್ ಇಸ್ಮಾಯೀಲ್ ಸಅದಿ ಕಿನ್ಯ, ಹೈದರ್ ಪರ್ತಿಪ್ಪಾಡಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಅಬ್ದುಲ್ ರಹ್ಮಾನಿ ಮದನಿ‌ ಜೆಪ್ಪು, ಅನ್ವರ್ ಮಾಣಿಪ್ಪಾಡಿ, ಎನ್ ಎಸ್ ಕರೀಂ, ಮುಹಮ್ಮದ್ ಮೋನು ಮತ್ತಿತರರು ಉಪಸ್ಥಿತರಿದ್ದರು.

ಎಸ್ ವೈಎಸ್ ರಾಜ್ಯ ಉಪಾಧ್ಯಕ್ಷ ಡಿಕೆ ಉಮರ್ ಸಖಾಫಿ ಸ್ವಾಗತಿಸಿದರು. ಅಶ್ರಫ್ ಕಿನಾರ ಮಂಗಳೂರು ವಂದಿಸಿದರು.

ಬೃಹತ್ ಮೀಲಾದ್ ಜಾಥಾ

ಹುಬ್ಬುರ್ರಸೂಲ್ ಕಾನ್ಫರೆನ್ಸ್‌ಗೆ ಮುನ್ನ ಎಸ್‌ವೈಎಸ್, ಎಸ್ಸೆಸ್ಸೆಫ್, ಮುಅಲ್ಲಿಮ್ ಸಂಘಟನೆಗಳ ವತಿಯಿಂದ ನಗರದ ಜ್ಯೋತಿ ವೃತ್ತದಿಂದ ಆರಂಭಗೊಂಡ ಮೀಲಾದ್ ಜಾಥಾಕ್ಕೆ ಸುನ್ನಿ ಕೋ ಆರ್ಡಿನೇಶನ್ ಕಮಿಟಿಯ ಅಧ್ಯಕ್ಷ ಎಸ್‌ಪಿ ಹಂಝ ಸಖಾಫಿ ಗುರುವಾರ ಅಪರಾಹ್ನ ಚಾಲನೆ ನೀಡಿದರು. ಈ ಸಂದರ್ಭ ಡಾ. ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ, ಎಂಜಿಎಂ ಅಶ್ರಫ್ ಸಅದಿ ಮಲ್ಲೂರು, ಹಾಫಿಳ್ ಯಾಕೂಬ್ ಸಅದಿ ನಾವೂರು, ಯೂಸುಫ್ ಹಾಜಿ ಉಪ್ಪಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಕೆ. ಖಾದರ್ ಹಾಜಿ ಮುಡಿಪು ನೆಹರೂ ಮೈದಾನದಲ್ಲಿ ಧ್ವಜಾರೋಹಣಗೈದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಸೌದಿ ಅರೇಬಿಯಾ ಕೇಂದ್ರ ಸಮಿತಿ ಮತ್ತು ವಿವಿಧ ಘಟಕಗಳ ವತಿಯಿಂದ ಮನೆ‌ ನಿರ್ಮಾಣ, ಆ್ಯಂಬುಲೆನ್ಸ್ ಸೇವೆ ಮತ್ತು ನೆರೆ ಸಂತ್ರಸ್ತರಿಗೆ, ರೋಗಿಗಳಿಗೆ ಸಹಾಯಧನದ ಚೆಕ್ ವಿತರಿಸಲಾಯಿತು. ಸೈಯದ್ ಝೈನುಲ್ ಆಬಿದೀನ್ ಅಲ್‌ ಹಾದಿ ಅಳದಂಗಡಿ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಿತು.

error: Content is protected !! Not allowed copy content from janadhvani.com