janadhvani

Kannada Online News Paper

ನಾಳೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಬಂದ್‌

ಬೆಂಗಳೂರು,ನ.7: ನಾಳೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು 24 ಗಂಟೆಗಳ ಕಾಲ ಮುಚ್ಚಲಿದ್ದು, ಐಎಂಎ ಖಾಸಗಿ ಆಸ್ಪತ್ರೆಗಳು ಬಂದ್‌ಗೆ ಕರೆ ನೀಡಿದೆ.

ಅಲ್ಲದೇ, ನಾಳೆ ಖಾಸಗಿ ಆಸ್ಪತ್ರೆಯಲ್ಲಿ ಓಪಿಡಿ ಸೇವೆ ಕೂಡ ಸ್ಥಗಿತಗೊಳ್ಳಲಿದೆ. ರಾಜ್ಯದಲ್ಲಿರೋ 23 ಸಾವಿರ ಖಾಸಗಿ ಆಸ್ಪತ್ರೆಗಳು ಬಂದ್ ಆಗಲಿದ್ದು, ಬೆಂಗಳೂರಿನ 5 ಸಾವಿರಕ್ಕೂ ಹೆಚ್ಚು ಆಸ್ಪತ್ರೆ ಕ್ಲೋಸ್ ಆಗಲಿದೆ.

ಕ್ಲಿನಿಕ್ಗಳಲ್ಲಿ ಸೇವೆ ಸಿಗೋದು ಭಾಗಶಃ ಡೌಟ್ ಆಗಿದ್ದು, ಎರ್ಮಜೆನ್ಸಿ ಸೇವೆ ಸಿಗುವ ಸಾಧ್ಯತೆ ಇದೆ. ಕೆಲ ನಿಗದಿತ ಸರ್ಜರಿಗಳು ನಡೆಯುತ್ತೆ. ಇನ್ನು ಮೆಡಿಕಲ್ ಶಾಪ್ಗಳು ಎಂದಿನಂತೆ ತೆರೆದಿರುತ್ತೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಓಪನ್ ಇರುತ್ತೆ.

ಭಾರತೀಯ ವೈದ್ಯಕೀಯ ಸಂಘ ಮತ್ತು ‘ಫನಾ’ದಡಿ ಒಟ್ಟು 23 ಸಾವಿರಕ್ಕೂ ಅಧಿಕ ಆಸ್ಪತ್ರೆಗಳು ಭಾಗಿಯಾಗಲಿದ್ದು, ವಿಕ್ಟೋರಿಯಾ, ವಾಣಿ ವಿಲಾಸ್, ಮಿಂಟೋದಲ್ಲಿ ಪ್ರತಿಭಟನೆ ನಡೆಯಲಿದೆ. ಕರವೇ ಕಾರ್ಯಕರ್ತರ ಬಂಧಿಸುವರೆಗೂ ವೈದ್ಯರ ಹೋರಾಟ ಮುಂದುವರೆಯಲಿದ್ದು, ನಾಳೆಯಿಂದ ವೈದ್ಯರ ಮುಷ್ಕರ ತೀವ್ರಗೊಳ್ಳಲಿದೆ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!