janadhvani

Kannada Online News Paper

ಬಾಬರಿ ತೀರ್ಪು: ಶಾಂತಿ ಕಾಪಾಡಲು ಮುಸ್ಲಿಂ ಜಮಾಅತ್ ಕರೆ

ಮಂಗಳೂರು :ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಪಟ್ಟು ರಾಷ್ಟ್ರದ ಘನವೆತ್ತ ಸುಪ್ರೀಂ ಕೋರ್ಟ್ ಕೆಲವೇ ದಿನಗಳಲ್ಲಿ ಅಂತಿಮ ತೀರ್ಪು ನೀಡಲಿದೆ. ತೀರ್ಪು ಯಾವ ರೂಪದಲ್ಲಿದ್ದರೂ ಸಮಾಜದ ಎಲ್ಲ ಬಾಂಧವರು ಸಂಯಮದಿಂದರಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಕರೆ ನೀಡಿದೆ‌.

ಮುಸ್ಲಿಂ ಸಮುದಾಯದ ಪ್ರಸಕ್ತ ಆಗು ಹೋಗುಗಳ ಬಗ್ಗೆ ಚರ್ಚಿಸಲು; ಅಖಿಲ ಭಾರತ ಉಲಮಾ ಒಕ್ಕೂಟದ ಪ್ರ‌.ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಇಂದು ನಡೆದ ಮುಸ್ಲಿಂ ಜಮಾಅತ್ ವಿಶೇಷ ಸಭೆಯಲ್ಲಿ ಈ ಕರೆ ನೀಡಲಾಯಿತು.

ಯಾವುದೇ ಸಂಭ್ರಮಾಚರಣೆ, ಶೋಕಾಚಾರಣೆಗಳನ್ನು ಯಾರೂ ಆಯೋಜಿಸಬಾರದೆಂಬ ಪೋಲಿಸ್ ಇಲಾಖೆಯು ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಶಾಂತಿಸ್ಥಾಪನೆಗೆ ಸಹಕರಿಸಬೇಕು. ಸೋಷಿಯಲ್ ಮೀಡಿಯಾ ಬಳಕೆದಾರರು ಅತಿರೇಕದ ಪ್ರತಿಕ್ರಿಯೆಗಳನ್ನು ಪ್ರಕಟಿಸಬಾರದು ಎಂದು ಸಭೆ ಕರೆ ನೀಡಿತು‌.

ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಮುಫ್ತಿ-ಎ-ಕರ್ನಾಟಕ ಮೌಲಾನಾ ಅನ್ವರಲಿ, ಕೋಶಾಧ್ಯಕ್ಷ ಯೆನೆಪೋಯ ವೈ ಅಬ್ದುಲ್ಲ್ಹಾ ಕುಂಞಿ, ಉಪಾಧ್ಯಕ್ಷ ಎಚ್.ಐ.ಅಬೂಸುಫ್ಯಾನ್ ಇಬ್ರಾಹೀಂ ಮದನಿ, ಪ್ರ.ಕಾರ್ಯದರ್ಶಿ ಎನ್.ಕೆ.ಎಂ.ಶಾಫಿ ಸ‌ಅದಿ, ಕಾರ್ಯದರ್ಶಿಗಳಾದ ಯ‌ಅ್‌ಕೂಬ್ ಯೂಸೂಫ್ ಶಿವಮೊಗ್ಗ, ಎಮ್ಮೆಸ್ಸೆಮ್ ಅಬ್ದುರ್ರಶ್ಶೀದ್ ಝೈನಿ ಕಾಮಿಲ್ , ಕೆ.ಎಂ.ಅಬೂಬಕರ್ ಸಿದ್ದೀಖ್ ಮೋಂಟುಗೋಳಿ, ಉಮರ್ ಹಾಜಿ ಬೆಂಗಳೂರು, ನ್ಯಾಷನಲ್ ಅಬ್ದುರ್ರಹ್ಮಾನ್ ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com