janadhvani

Kannada Online News Paper

ಕರಾವಳಿಯಾದ್ಯಂತ ಆವರಿಸಿದ ಡೆಂಗ್ಯೂ ಜ್ವರ- ನಿರ್ಲಕ್ಷ್ಯ ತೋರಿದರೆ ಕಾದಿದೆ ಅಪಾಯ..!!

ಕರಾವಳಿಯಾದ್ಯಂತ ಆವರಿಸಿದ ಡೆಂಗ್ಯೂ ಜ್ವರ,ಭಯದಿಂದ ದಿನಕಳೆಯುತ್ತಿರುವ ಜನತೆ..!!ನಿರ್ಲಕ್ಷ್ಯ ತೋರಿದರೆ ಕಾದಿದೆ ಅಪಾಯ..!!

#ಸ್ನೇಹಜೀವಿ ಅಡ್ಕ

ಮುಂಗಾರಿನ ಆಗಮನದೊಂದಿಗೆ ಕರಾವಳಿಗೆ ಕಾಲಿಡುವ ರೋಗವಾಗಿದೆ ಡೆಂಗ್ಯೂ..
ಸಣ್ಣ ಮಕ್ಕಳಿಂದ ಹಿಡಿದು, ವಯಸ್ಕರ ತನಕ ಹರಡುವ ಈ ಡೆಂಗ್ಯೂ ಜ್ವರವು ಕರಾವಳಿಯಾದ್ಯಂತ ಹಲವರನ್ನು ಬಲಿ ಪಡೆದುಕೊಂಡಿದೆ. ಪುತ್ತೂರು ತಾಲ್ಲೂಕಿನಲ್ಲೇ ಹಲವಾರು ಡೆಂಗ್ಯೂ ಪೀಡಿತರು ಆಸ್ಪತ್ರೆಗಳಲ್ಲಿ ದಿನಕಳೆಯುತ್ತಿದ್ದಾರೆ,ಕಳೆದ ಕೆಲ ವರ್ಷಗಳಿಂದ ಕೆಲವರನ್ನು ಈ ಡೆಂಗ್ಯೂ ಬಲಿ ಪಡೆದುಕೊಂಡಿದೆ..!!

1953-1954 ರ ಅವಧಿಯಲ್ಲಿ ಫಿಲಿಪೈನ್ ನಿಂದ ಈ ಸಾಂಕ್ರಾಮಿಕ ರೋಗವು ಭಾರತಕ್ಕೆ ಬಂದಿದೆಯೆಂದು ಹೇಳುವುದಾದರೂ,1970 ರಲ್ಲಿ ಭಾರತದಲ್ಲಿ ಡೆಂಗ್ಯೂ ಜ್ವರದ ಅಪಾಯವನ್ನು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು.ಹೆಮರಾಜಿಕ್ ಜ್ವರ,ಡೆಂಗೀ ಶಾಕ್ ಸಿಂಡ್ರೋಮ್ 1993 ರಲ್ಲಿ ಮೊದಲ ಬಾರಿಗೆ ವರದಿಯಾಯಿತು. ಈ ಅಪಾಯಕಾರಿಯಾದ ಡೆಂಗ್ಯೂ ಸೋಂಕಿಗೆ 2010 ರಿಂದ ಇದುವರೆಗೂ ಮೂರುಲಕ್ಷಕ್ಕಿಂತಲೂ ಅಧಿಕವಾದ ಪ್ರಕರಣದಲ್ಲಿ ಒಂದು ಸಾವಿರಕ್ಕಿಂತಲೂ ಅಧಿಕ ಮಂದಿ ಪ್ರಾಣ ಕಳೆದುಕೊಂಡ ವಿವರಗಳನ್ನು ಅಂಕಿ ಅಂಶಗಳು ಸೂಚಿಸುತ್ತದೆ..!!

ಡೆಂಗಿ ಈಡಿಸ್ ಎಂಬ ಸೊಳ್ಳೆಗಳಿಂದ ಹರಡುವ ಸೋಂಕು ಹೂವಿನ ಕುಂಡ,ಬಿಸಾಕಿದ ಟಯರ್,ಹಳೆಯ ಎಣ್ಣೆ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿ ಇವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ.ಆದ್ದರಿಂದಲೇ ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತದೆ.ಆದ್ದರಿಂದ ಇಂತಹ ಜಾಗಗಳನ್ನು ಶುಚಿಗೊಳಿಸಿ,ಸೊಳ್ಳೆ ಮೊಟ್ಟೆ ಇಡದಂತೆ ಜಾಗೃತಿ ವಹಿಸಬೇಕಾಗಿದೆ.

_ಡೆಂಗ್ಯೂ ಸೋಂಕಿನ ಲಕ್ಷಣಗಳು_

  • ತೀವ್ರ ತಲೆ ನೋವು
  • ಕಣ್ಣು ನೋವು
  • ಗಂಟು ಮತ್ತು ಸ್ನಾಯು ನೋವು
  • ಹಸಿವಾಗದಿರುವುದು,ಉದರ ಅಸ್ವಸ್ಥತೆ
  • ತುರಿಕೆ
  • ರೋಗಿಗಳಿಗೆ 103 ಹೆಚ್ಚಿನ ಜ್ವರ
  • ಚಿಕ್ಕ ಮಕ್ಕಳಿಗೆ ಶೀತ,ಬೇದಿ,ತುರಿಕೆ ಮತ್ತು ತೀವ್ರ ಸಂದರ್ಭಗಳಲ್ಲಿ ರೋಗಗ್ರಸ್ತವಾಗುವಿಕೆಗಳ ಲಕ್ಷಣಗಳು ತೋರುತ್ತಾರೆ
  • ಡೆಂಗ್ಯೂ ಜ್ವರ ಮುದ್ರೆ ಪ್ಲೇಟ್ಲೆಟ್ ಕೌಂಟ್ ಇಳಿಕೆಯಾಗುವುದು

ಇಂತಹ ಲಕ್ಷಣಗಳು ಕಂಡುಬಂದಲ್ಲಿ ಎಂಟು ಗಂಟೆಗಳ ಮೊದಲೇ ಹತ್ತಿರದ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಿ,ಚಿಕಿತ್ಸೆ ಮಾಡಿಸಿಕೊಳ್ಳಬೇಕು.

ಡೆಂಗ್ಯೂ ಜ್ವರ ಪೀಡಿತರು ಪಾಲಿಸಬೇಕಾದ ಜಾಗರೂಕತೆಗಳು

  • ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಂಡಾಗ ದಿನಕ್ಕೆ 2-3 ಎಳನೀರು ಸೇವನೆ ಇರಲಿ.ಇದು ದೇಹಕ್ಕೆ ಪುಷ್ಟಿ ನೀಡುತ್ತದೆ.
  • ಪಪ್ಪಾಯಿ ಹಣ್ಣಿನಲ್ಲಿ ಪ್ಲೇಟ್ಲೆಟ್ ಗಳನ್ನು ಹೆಚ್ಚಿಸಿ ಜ್ವರ ಕಡಿಮೆ ಮಾಡುವ ಗುಣವಿದೆ.ಪ್ರತೀ ದಿನವು ಪಪ್ಪಾಯಿ ಎಲೆಯನ್ನು ಅರೆದು, ಆ ರಸವನ್ನು ಒಂದು ಚಮಚದಷ್ಟು ಸೇವಿಸಿದರೆ ಜ್ವರವು ಅತೀ ಬೇಗನೆ ಕಡಿಮೆಯಾಗುವುದು.ರಸದೊಂದಿಗೆ ಪಪ್ಪಾಯಿ ಹಣ್ಣೂ ಇರಲಿ.
  • ಜ್ವರ ಬಂದಾಗ ಸಾಮಾನ್ಯ ಆಹಾರಕ್ಕಿಂತ ಗಂಜಿ ಸೇವನೆ ಒಳ್ಳೆಯದು.ಇದರೊಂದಿಗೆ ಹಣ್ಣುಗಳು ಸೇವಿಸಿದರೆ ದೇಹಕ್ಕೆ ಹೆಚ್ಚಿನ ದ್ರವ ಸಿಗುತ್ತದೆ.ಇದು ಸುಸ್ತನ್ನೂ ಕಡಿಮೆಗೊಳಿಸುತ್ತದೆ.
  • ಡೆಂಗಿ ಜ್ವರ ಕಡಿಮೆ ಮಾಡುವಲ್ಲಿ ಟೀ ಪಾತ್ರವೂ ಇದೆ.ಆದರೆ ಸಾಮಾನ್ಯ ಟೀ ಅಲ್ಲದೆ ಮಸಾಲ ಟೀ ತಯಾರಿಸಿ ಕುಡಿಯಬಹುದು.ಏಲಕ್ಕಿ ಬೆರೆಸಿದ ಟೀ ಈ ಸಮಯದಲ್ಲಿ ಆರೋಗ್ಯಕ್ಕೆ ಒಳ್ಳೆಯದು.
  • ಹಣ್ಣಿನ ಜ್ಯೂಸ್ ನೊಂದಿಗೆ ಸೂಪ್ ಕುಡಿಯಿರಿ.ಡೆಂಗಿ ಜ್ವರ ಬಂದರೆ ಪ್ರೋಟೀನ್ ಹೊಂದಿರುವ ಆಹಾರ ಒಳ್ಳೆಯದು*
  • ನಿಂಬೆ ಜ್ಯೂಸ್ ನಿಮ್ಮಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಹಾಗೂ ಡೆಂಗಿ ವೈರಸನ್ನು ನಾಶಪಡಿಸಲು ಸಹಕಾರಿ.ನಿಂಬೆಯೊಂದಿಗೆ ತರಕಾರಿ ಜ್ಯೂಸ್ ಕುಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.
  • ಡೆಂಗ್ಯೂ ಜ್ವರ ಬಂದರೆ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಭಯವಿಲ್ಲ.ವಿಳಂಬ ಮಾಡಿದರೆ ಮಾತ್ರ ಕಷ್ಟ .ಡೆಂಗ್ಯೂ ಜ್ವರ ಒಮ್ಮೆ ಬಂತೆಂದರೆ ಚೇತರಿಸಿಕೊಳ್ಳಲು ವಾರಗಟ್ಟಲೆ ಸಮಯ ಬೇಕು.ಈ ಸಮಯದಲ್ಲಿ ಚಿಕಿತ್ಸೆ ಮಾತ್ರವಲ್ಲ, ನಿಮ್ಮ ಆಹಾರ ಕ್ರಮ ಕೂಡ ಸರಿಯಾಗಿದ್ದರೆ ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬಹುದು.
  • ಡೆಂಗ್ಯೂ ಬಂದವರು ತಿನ್ನಬೇಕಾದ ಮುಖ್ಯ ಹಣ್ಣೆಂದರೆ ಕಿತ್ತಳೆ.ಇದರಲ್ಲಿ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ಇದ್ದು,ಜೀರ್ಣಕ್ರಿಯೆಗೆ ಸಹಾಯ,ಮೂತ್ರ ವಿಸರ್ಜನೆ ಆಗಾಗ್ಗೆ ಹೋಗುವಂತೆ ಮಾಡುವುದು.ಇದರಿಂದ ಡೆಂಗ್ಯೂ ಬ್ಯಾಕ್ಟೀರಿಯಾಗಳು ಹೊರಹೋಗುತ್ತದೆ

ಕರಾವಳಿಯಾದ್ಯಂತ ಅಪಾಯಕಾರಿ ಡೆಂಗ್ಯೂ ಜ್ವರಗಳು ಹಲವರ ಜೀವಗಳಿಗೆ ಕುತ್ತು ತರುತ್ತಿರುವ ಪ್ರಸಕ್ತವಾದ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಈ ಜ್ವರದ ಬಗ್ಗೆ ಎಚ್ಚರಿಕೆಯಿಂದ ಇದ್ದು,ಮನೆಯ ಪರಿಸರಗಳನ್ನು ಶುಚಿಯಾಗಿಟ್ಟುಕೊಳ್ಳುವಲ್ಲಿ ಶ್ರಮಿಸಬೇಕು.ಜ್ವರ ಕಾಣಿಸಿಕೊಂಡಾಗ ನಿರ್ಲಕ್ಷ್ಯ ತೋರದೆ ಆದಷ್ಟು ಬೇಗ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗಿದೆ.

ಡೆಂಗ್ಯೂ ಜ್ವರ ಬಾಧಿಸಿ, ಅಪಾಯಕಾರಿ ಸ್ಥಿತಿ ತಲುಪಿದಾಗ ಅಂತಹ ರೋಗಿಗಳಿಗೆ ರಕ್ತದ ಅಗತ್ಯತೆ ಕಂಡು ಬರುತ್ತದೆ .ಈಗಾಗಲೇ ಹಲವು ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವುದರಿಂದ ರಕ್ತದ ಕೊರತೆಯು ಕಾಣಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ಜಾತಿ,ಧರ್ಮವನ್ನು ನೋಡದೆ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದರ ಮೂಲಕ ಡೆಂಗ್ಯೂ ಪೀಡಿತರ ಜೀವವನ್ನು ಉಳಿಸಿಕೊಳ್ಳುವ ಮಾನವೀಯ ಸೇವೆಗಳನ್ನು ಮಾಡಲೇಬೇಕಾಗಿದೆ

ಆರೋಗ್ಯ ಇಲಾಖೆ ಹಾಗೂ ಪ್ರತಿಯೊಂದು ಗ್ರಾಮ ಪಂಚಾಯತ್ ಗಳು ಸಹ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತಹ ಪರಿಸ್ಥಿತಿಗಳು ನಿರ್ಮಾಣ ಮಾಡಿ,ಡೆಂಗ್ಯೂ ಅನ್ನುವ ಅಪಾಯಕಾರಿ ರೋಗವನ್ನು ಇಲ್ಲವಾಗಿಸುವಲ್ಲಿ ಪ್ರಯತ್ನಿಸಬೇಕಾಗಿದೆ.

ಇಂತಹ ಅಪಾಯಕಾರಿ ರೋಗಗಳಿಂದ ಜೀವವನ್ನು ಕಳೆದುಕೊಂಡ ಕುಟುಂಬಕ್ಕೆ ಸರ್ವಶಕ್ತನು ಸಹನೆಯನ್ನು ದಯಪಾಲಿಸಲಿ,ಡೆಂಗ್ಯೂ ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿರುವವರ ರೋಗಗಳನ್ನು ಆದಷ್ಟು ಬೇಗ ಗುಣಪಡಿಸುವಂತಾಗಲಿ ಅನ್ನುವ ಮನತುಂಬಿದ ಪ್ರಾರ್ಥನೆಯೊಂದಿಗೆ..

error: Content is protected !! Not allowed copy content from janadhvani.com