janadhvani

Kannada Online News Paper

ಕಳೆದು ಹೋದ ಮೊಬೈಲನ್ನು ಪತ್ತೆ ಹಚ್ಚಲು ನೂತನ ತಂತ್ರಜ್ಞಾನ- ಆಗಸ್ಟ್ ನಲ್ಲಿ ಜಾರಿಗೆ

ನವದೆಹಲಿ:ಇನ್ಮುಂದೆ ಮೊಬೈಲ್ ಫೋನ್ ಕಳೆದುಹೋದರೆ ಚಿಂತೆ ಬೇಡ, ಕಳೆದ ಮೊಬೈಲ್ ಫೋನ್ ಮತ್ತೆ ಕೈ ಸೇರುವಂತೆ ಒಂದು ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಲಾಗಿದೆ.

ಭಾರತೀಯ ದೂರಸಂಪರ್ಕ ಇಲಾಖೆಯು ಕಳೆದು ಹೋಗಿರುವ ಮೊಬೈಲನ್ನು ಮರಳಿಪಡೆಯುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಂಡಿದೆ. ದೂರಸಂಪರ್ಕ ಇಲಾಖೆಯಿಂದ ಮೊಬೈಲ್ ಜಾಡು ಕಂಡುಹಿಡಿಯುವ ವ್ಯವಸ್ಥೆಯೊಂದು ಮುಂದಿನ (ಆಗಸ್ಟ್) ತಿಂಗಳಿಂದ ಜಾರಿಗೆ ಬರಲಿದೆ.

ಮೊಬೈಲ್ ಕದ್ದವರು ನಿಮ್ಮ ಸಿಮ್ ಕಾರ್ಡ್ ಹೊರತೆಗೆದು, ಇಲ್ಲ ವಿಶಿಷ್ಟ ಸಂಖ್ಯೆ, ಐಎಂಇಐ ಸಂಖ್ಯೆ ಬದಲಿಸಿದರು ಕೂಡ ಮೊಬೈಲ್ ಫೋನ್ ಪತ್ತೆ ಹಚ್ಚುವ ತಂತ್ರಜ್ಞಾನವನ್ನು ರೂಪಿಸಲಾಗಿದ್ದು, ಮುಂದಿನ ತಿಂಗಳು ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಈ ಮೇಲಿನ ತಂತ್ರಜ್ಞಾನವನ್ನು ರೂಪಿಸುವಂತೆ 2017ರಲ್ಲಿ ದೂರಸಂಪರ್ಕ ಇಲಾಖೆಗೆ ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಈ ಯೋಜನೆಗಾಗಿ 15 ಕೋಟಿ ರೂ. ಬಿಡುಗಡೆ ಕೂಡ ಮಾಡಲಾಗಿತ್ತು. ಇದೀಗ ಈ ನೂತನ ವ್ಯವಸ್ಥೆಯನ್ನು ಇಲಾಖೆ ಸಿದ್ಧಪಡಿಸಿದೆ.

error: Content is protected !! Not allowed copy content from janadhvani.com