ಮುಂಬೈ, ನ 22 : ಏರ್ಟೆಲ್ ತನ್ನ ಪ್ರಿಪೇಯ್ಡ್ ಪ್ಯಾಕೇಜ್ ಗಳ ತೆರಿಗೆ ಹೆಚ್ಚಿಸಿದೆ. ಹೊಸ ದರಗಳು ನವೆಂಬರ್ 26ರಿಂದ ಜಾರಿಗೆ ಬರಲಿದ್ದು, ಶೇಕಡಾ 25ರಷ್ಟು ಟ್ಯಾರಿಫ್ ಹೆಚ್ಚಿಸುವ ಘೋಷಣೆ ಮಾಡಿದೆ. ಶುಕ್ರವಾರದಿಂದ ಈ ಬದಲಾದ ರೇಟ್ ಗಳು ಜಾರಿಗೆ ಬರುವುದರಿಂದ ಏರ್ ಟೆಲ್ ಗ್ರಾಹಕರು, 28 ದಿನಗಳ ಪ್ರಿಪೇಡ್ ಪ್ಯಾಕೇಜ್ ನಲ್ಲಿ ಅನ್ ಲಿಮಿಟೆಡ್ ದೂರವಾಣಿ ಕರೆ, ಪ್ರತಿ ದಿನ 100 ಎಸ್ಎಂಎಸ್ ಹಾಗೂ 2 ಜಿಬಿ ಇಂಟರ್ ನೆಟ್ ಪಡೆಯೋದಕ್ಕೆ ಇನ್ಮುಂದೆ 179 ರೂಪಾಯಿ ನೀಡಬೇಕಾಗುತ್ತದೆ. ಈ ಮೊದಲು ಈ ಎಲ್ಲ ಅವಕಾಶಗಳನ್ನು 149 ರೂಪಾಯಿಯಲ್ಲಿ ಮೊಬೈಲ್ ಗ್ರಾಹಕರು ಪಡೆಯುತ್ತಿದ್ದರು.
ಉತ್ತಮ ಮತ್ತು ಆರೋಗ್ಯಕರ ವ್ಯಾಪಾರಕ್ಕಾಗಿ ದರಗಳನ್ನು ಹೆಚ್ಚಿಸುವುದು ಅಗತ್ಯ ಎಂದು ಭಾರ್ತಿ ಏರ್ಟೆಲ್ ಹೇಳಿದೆ. ಪ್ರತಿ ಬಳಕೆದಾರರಿಂದ ಸರಾಸರಿ ಆದಾಯ (ARPU) 200 ರೂ ಆಗಿರಬೇಕು ಮತ್ತು ನಂತರ ಅದನ್ನು 300 ರೂಗೆ ಹೆಚ್ಚಿಸಬೇಕಾಗಿದೆ ಅಂತಾ ತಿಳಿಸಿದೆ. ಇದರಿಂದ ಹೂಡಿಕೆ ಮಾಡಿದ ಬಂಡವಾಳಕ್ಕೆ ಸರಿಯಾದ ಲಾಭವನ್ನು ಕಂಪನಿಗಳು ಪಡೆಯಲು ಸಾಧ್ಯ ಅಂತಾ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
ವಾಟ್ಸ್ಆ್ಯಪ್ನಲ್ಲಿ ಬರಲಿದೆ ಬಹುನಿರೀಕ್ಷಿತ ‘ಶೆಡ್ಯೂಲ್ ಮೆಸೇಜ್’ ಫೀಚರ್!
ಹೊಸ ರೂಪದಲ್ಲಿ ಆನ್ಲೈನ್ ವಂಚನೆ- ಗ್ರಾಹಕರಿಗೆ ಎಚ್ಚರಿಕೆ ನೀಡಿದ ಎಸ್ಬಿಐ
ಅಡ್ಮಿನ್ಗಳಿಗೆ ಸುಪರ್ ಪವರ್ ನೀಡಿದ ವ್ಯಾಟ್ಸ್ಆ್ಯಪ್- ಅನಗತ್ಯ ಸಂದೇಶಗಳಿಗೆ ಕಡಿವಾಣ
ವಾಟ್ಸಾಪ್: ಡಿಲೀಟ್ ಮಾಡಿದ ಮೆಸೇಜ್ ಮರಳಿ ಪಡೆಯುವ ಹೊಸ ಅಪ್ಡೇಟ್
ಫೋನ್ಪೇ ಬಳಕೆದಾರರಿಗೆ ಶಾಕ್- ಇನ್ಮುಂದೆ ಯುಪಿಐ ಸೇವೆಗೆ ಶುಲ್ಕ
ವಾಟ್ಸ್ಆ್ಯಪ್ನಲ್ಲಿ ನಿಮ್ಮೊಂದಿಗೆ ನೀವೇ ಚಾಟ್ ಮಾಡುವ ವಿಧಾನ- ಈ ಫೀಚರ್ ಬಹಳ ಉಪಯುಕ್ತ
ವಾಟ್ಸಾಪ್, ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಡೌನ್- ಬಳಕೆದಾರರ ಪರದಾಟ
ಕೇಂದ್ರದ ಹೊಸ ಐಟಿ ಮಾರ್ಗಸೂಚಿ: ನಿಯಮವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ವಾಟ್ಸಾಪ್
ಚುನಾವಣಾ ಗುರುತಿನ ಚೀಟಿ: ಡಿಜಿಟಲ್ ಆವೃತಿ ನಾಳೆಯಿಂದ ಲಭ್ಯ
ರಾತ್ರಿ 1ರಿಂದ ಬೆಳಗಿನ ಜಾವ 3ರ ವರೆಗೆ ‘UPI’ ಹಣ ಪಾವತಿ ಬಳಸಬೇಡಿ- ಗ್ರಾಹಕರಿಗೆ ಸೂಚನೆ