janadhvani

Kannada Online News Paper

ಫೋನ್‌ಪೇ ಬಳಕೆದಾರರಿಗೆ ಶಾಕ್- ಇನ್ಮುಂದೆ ಯುಪಿಐ ಸೇವೆಗೆ ಶುಲ್ಕ

100 ರೂಪಾಯಿ ಮೇಲ್ಪಟ್ಟು ಮೊಬೈಲ್ ರೀಚಾರ್ಜ್ ಮಾಡಿಸಿದರೆ ಫೋನ್ಪೇ ಗ್ರಾಹಕರು ರೂ. 2 ಪಾವತಿಸಬೇಕು

ವಾಲ್ಮಾರ್ಟ್ ಸಮೂಹದ ಆನ್ಲೈನ್ ಅಪ್ಲಿಕೇಷನ್ ಫೋನ್ಪೇ (PhonePe) ದೇಶದ ಮೊದಲ ಅಪ್ಲಿಕೇಷನ್ ಆಗಿದ್ದು, ಯುಪಿಐ- ಆಧಾರಿತ ವಹಿವಾಟುಗಳಿಗೆ ದರ ವಿಧಿಸಲು ಆರಂಭಿಸಿದೆ. ಡಿಜಿಟಲ್ ಪೇಮೆಂಟ್ ಅಪ್ಲಿಕೇಷನ್ ಫೋನ್ಪೇಯಿಂದ 50 ರೂಪಾಯಿ ಮೇಲ್ಪಟ್ಟು ಮೊಬೈಲ್ ಚಾರ್ಜ್ ಯುಪಿಐ ಮೂಲಕ ಮಾಡಿಸಿದರೂ ಆ ವಹಿವಾಟಿನ ಮೇಲೆ 1ರಿಂದ 2 ರೂಪಾಯಿ ಪ್ರೊಸೆಸಿಂಗ್ ಶುಲ್ಕ ಆಗುತ್ತದೆ. ಕಂಪೆನಿ ಹೇಳಿರುವಂತೆ, 50 ರೂಪಾಯಿ ಒಳಗಿನ ಮೊಬೈಲ್ ರೀಚಾರ್ಜ್ ಮಾಡಿದಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. 50ರಿಂದ 100 ರೂಪಾಯಿ ಮಧ್ಯೆ ರೀಚಾರ್ಜ್ ಮಾಡಿಸಿದರೆ 1 ರೂಪಾಯಿ ಶುಲ್ಕ ವಿಧಿಸುತ್ತದೆ. 100 ರೂಪಾಯಿ ಮೇಲ್ಪಟ್ಟು ಮೊಬೈಲ್ ರೀಚಾರ್ಜ್ ಮಾಡಿಸಿದರೆ ಫೋನ್ಪೇ ಗ್ರಾಹಕರು ರೂ. 2 ವಿಧಿಸುತ್ತದೆ.

“ರೀಚಾರ್ಜಸ್ ಮೇಲೆ ನಾವು ಸಣ್ಣ ಪ್ರಮಾಣದ ಪ್ರಯೋಗ ಮಾಡುತ್ತಿದ್ದೇವೆ. ಕೆಲವೇ ಬಳಕೆದಾರರು ಮೊಬೈಲ್ ರೀಚಾರ್ಜ್ ಮೇಲೆ ಪಾವತಿಸುತ್ತಾರೆ. ರೀಚಾರ್ಜ್ 50 ರೂಪಾಯಿ ಒಳಗಿನ ಚಾರ್ಜ್ಗೆ ಯಾವುದೇ ಶುಲ್ಕ ಇಲ್ಲ. 50ರಿಂದ 100 ರೂಪಾಯಿ ರೀಚಾರ್ಜ್ಗೆ ರೂ.1 ಮತ್ತು 100 ರೂಪಾಯಿಯ ಮೇಲ್ಪಟ್ಟ ಚಾರ್ಜ್ಗೆ 2 ರೂಪಾಯಿ ವಿಧೀಸಲಾಗುತ್ತದೆ. ಮುಖ್ಯವಾಗಿ, ಪ್ರಯೋಗದ ಭಾಗವಾಗಿ, ಬಹುತೇಕ ಬಳಕೆದಾರರು ಒಂದೋ ಏನನ್ನೂ ಪಾವತಿಸುವುದಿಲ್ಲ ಅಥವಾ 1 ರೂಪಾಯಿ ಪಾವತಿಸುತ್ತಾರೆ,” ಫೋನ್ಪೇ ಹೇಳಿದೆ. ಇನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಗೆ ಇತರ ಪ್ಲಾಟ್ಫಾರ್ಮ್ನಂತೆಯೇ ಫೋನ್ಪೇ ಕೂಡ ದರ ವಿಧಿಸುತ್ತದೆ.

ಬಿಲ್ ಪಾವತಿ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ನಾವು ಮಾತ್ರ ಅಥವಾ ಪೇಮೆಂಟ್ ಪ್ಲಾಟ್ಫಾರ್ಮ್ ಆಗಿ ಶುಲ್ಕವನ್ನು ವಿಧಿಸುತ್ತಿಲ್ಲ. ಬಿಲ್ ಪಾವತಿ ಮೇಲೆ ಸಣ್ಣ ಮೊತ್ತದ ಶುಲ್ಕ ವಿಧಿಸುವುದು ಈ ಕ್ಷೇತ್ರದ ಸ್ಟ್ಯಾಂಡರ್ಡ್ ಅಭ್ಯಾಸ. ಇತರ ಬಿಲ್ಲರ್ ವೆಬ್ಸೈಟ್ಗಳು ಮತ್ತು ಪೇಮೆಂಟ್ ಪ್ಲಾಟ್ಫಾರ್ಮ್ಗಳೂ ಶುಲ್ಕ ವಿಧಿಸುತ್ತವೆ. ಕ್ರೆಡಿಟ್ ಕಾರ್ಡ್ ಮೂಲಕ ಮಾತ್ರ ಪಾವತಿಸಿದರೆ ನಾವು ಪ್ರೊಸೆಸಿಂಗ್ ಫೀ (ಇತರ ಪ್ಲಾಟ್ಫಾರ್ಮ್ಗಳು ಕನ್ವೀನಿಯೆನ್ಸ್ ಶುಲ್ಕ ಎನ್ನುತ್ತವೆ) ವಿಧಿಸುತ್ತೇವೆ,” ಎಂದು ಫೋನ್ಪೇ ವಕ್ತಾರ ಹೇಳಿದ್ದಾರೆ.

ಥರ್ಡ್ ಪಾರ್ಟಿ ಅಪ್ಲಿಕೇಷನ್ಗಳ ಪೈಕಿ ಯುಪಿಐ ವಹಿವಾಟಿನಲ್ಲಿ ಫೋನ್ಪೇ ದೊಡ್ಡ ಮಟ್ಟದ ಪಾಲು ಹೊಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅದರ ಪ್ಲಾಟ್ಫಾರ್ಮ್ನಲ್ಲಿ 165 ಕೋಟಿ ಯುಪಿಐ ವಹಿವಾಟು ಮಾಡಿದೆ. ಆ ಮೂಲಕ ಆ್ಯಪ್ ಸೆಗ್ಮೆಂಟ್ನಲ್ಲಿ ಶೇ 40ರಷ್ಟು ಪಾಲು ಹೊಂದಿದೆ. ಫ್ಲಿಪ್ಕಾರ್ಟ್ನ ಮಾಜಿ ಅಧಿಕಾರಿಗಳಾದ ಸಮೀರ್ ನಿಗಮ್, ರಾಹುಲ್ ಚಾರಿ ಮತ್ತು ಬುರ್ಜಿನ್ ಎಂಜಿನೀರ್ ಸೇರಿ 2015ರಲ್ಲಿ ಫೋನ್ಪೇ ಸ್ಥಾಪಿಸಿದರು. ಡಿಜಿಟಲ್ ಪೇಮೆಂಟ್ ಆ್ಯಪ್ ಫೋನ್ಪೇಗೆ 30 ಕೋಟಿ ನೋಂದಾಯಿತ ಬಳಕೆದಾರರಿದ್ದಾರೆ.

error: Content is protected !! Not allowed copy content from janadhvani.com