ಮಕ್ಕತುಲ್ ಮುಕರ್ರಮಃ : ಈ ವರ್ಷದ ಈದುಲ್ ಅದ್ ಹಾ (ಬಕ್ರೀದ್) ದಿನದಂದು ಪವಿತ್ರ ನಗರವಾದ ಮಕ್ಕಾ ಅಪರೂಪದ ಖಗೋಳ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಎಂದು ಪ್ರಮುಖ ಸೌದಿ ವಿಜ್ಞಾನಿ ಡಾ. ಅಬ್ದುಲ್ಲಾ ಅಲ್ ಮುಸ್ನದ್ ಬಹಿರಂಗಪಡಿಸಿದ್ದಾರೆ. ಅಂದು ಸೂರ್ಯನು ಕಅಬಾದ ನೇರ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
139 ವರ್ಷಗಳ ಹಿಂದೆ 1891 ರಲ್ಲಿ (ಹಿಜ್ರಿ 1308) ಬಕ್ರೀದ್ ದಿನದಂದು ಈ ರೀತಿಯ ಅಪರೂಪದ ಸಂಗಮ ನಡೆದಿತ್ತು. ಇನ್ನು 29 ವರ್ಷಗಳ ನಂತರ 2054 ರಲ್ಲಿ ಮಾತ್ರ ಇದು ಮತ್ತೆ ಮರುಕಳಿಸಲಿದೆ.
ಭೂಮಿಯ ವಾರ್ಷಿಕ ಚಲನೆ ಮತ್ತು ಧ್ರುವದ ಓರೆಯಿಂದಾಗಿ ವರ್ಷದಲ್ಲಿ ಎರಡು ಬಾರಿ ಸೂರ್ಯನು ಕಅಬಾದ ಮೇಲ್ಭಾಗಕ್ಕೆ ಬರುತ್ತಾನೆಯಾದರೂ, ಅದು ಸರಿಯಾಗಿ ಬಕ್ರೀದ್ ದಿನದಂದೇ ಬರುವುದು ಅತ್ಯಂತ ಅಪರೂಪವಾಗಿದೆ.
ಮಕ್ಕಾದ ಅಕ್ಷಾಂಶ ರೇಖೆಯ ಮೇಲ್ಭಾಗಕ್ಕೆ ಸೂರ್ಯನು ತಲುಪುತ್ತಿದ್ದಂತೆ, ಕಅಬಾ ಮತ್ತು ಅದರ ಸುತ್ತಮುತ್ತಲಿನ ನೆರಳುಗಳು ಸಂಪೂರ್ಣವಾಗಿ ಕಣ್ಮರೆಯಾಗಲಿವೆ. ಇದನ್ನು ‘ಝೀರೋ ಶಾಡೋ’ (Zero Shadow – ಶೂನ್ಯ ನೆರಳು) ಎಂದು ಕರೆಯಲಾಗುತ್ತದೆ.
ಮಕ್ಕಾದೊಂದಿಗೆ ಹಗಲಿನ ಸಮಯವನ್ನು ಹಂಚಿಕೊಳ್ಳುವ ವಿಶ್ವದ ಯಾವುದೇ ಪ್ರದೇಶದ ಜನರು ದಿಕ್ಸೂಚಿ (Compass) ಅಥವಾ ಮೊಬೈಲ್ ಆಪ್ಗಳ ಸಹಾಯವಿಲ್ಲದೆ ನಿಖರವಾದ ಕಿಬ್ಲಾ (ಕಾಬಾ ಇರುವ ದಿಕ್ಕು) ವನ್ನು ತಿಳಿದುಕೊಳ್ಳಲು ಈ ಸಮಯವನ್ನು ಬಳಸಿಕೊಳ್ಳಬಹುದು.
ಕಅಬಾದ ಮೇಲ್ಭಾಗಕ್ಕೆ ಸೂರ್ಯನು ಬರುವ ಈ ಕ್ಷಣದಲ್ಲಿ, ಭೂಮಿಯ ಮೇಲೆ ನೇರವಾಗಿ ನಿಲ್ಲಿಸಲಾದ ವಸ್ತುವಿನ ನೆರಳು ಯಾವ ಕಡೆಗೆ ಬೀಳುತ್ತದೆಯೋ, ಅದರ ಸರಿಯಾದ ವಿರುದ್ಧ ದಿಕ್ಕೇ ಪವಿತ್ರ ಕಅಬಾದ ದಿಕ್ಕಾಗಿರುತ್ತದೆ.
ಅರೇಬಿಯನ್ ದ್ವೀಪಕಲ್ಪದ ಹೊರಗಿನ ದೂರದ ದೇಶಗಳಲ್ಲಿ ಇರುವವರು ಈ ವಿಧಾನದ ಮೂಲಕ ಅತ್ಯಂತ ಸುಲಭವಾಗಿ ಕಿಬ್ಲಾವನ್ನು ಪತ್ತೆಹಚ್ಚಬಹುದು. ಆದರೆ ಈ ಸಮಯದಲ್ಲಿ ಯಾರೂ ಸೂರ್ಯನನ್ನು ಬರಿಗಣ್ಣಿನಿಂದ ನೇರವಾಗಿ ನೋಡಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಹಜ್ ವಂಚನೆ: ಭಾರತೀಯರು ಸೇರಿದಂತೆ ನಾಲ್ವರ ಬಂಧನ
ಅಲ್ಲಾಹನ ಅತಿಥಿಗಳ ಹರಿವು… ಹಜ್ಗೆ ಇನ್ನು ಕೇವಲ 2 ದಿನಗಳು ಬಾಕಿ
‘ನೋ ಕ್ಯಾಶ್’ ; ಜೂನ್ ಒಂದರಿಂದ ದುಬೈನಲ್ಲಿ ಪಾರ್ಕಿಂಗ್ ಮೀಟರ್ಗಳಲ್ಲಿ ನಗದು ವ್ಯವಹಾರ ರದ್ದು
ಈದುಲ್ ಅದ್’ಹಾ(ಬಕ್ರೀದ್): ಮೇ 26 ರಿಂದ ಆರು ದಿನಗಳ ರಜೆ ಘೋಷಣೆ
ಖಾಸಗಿ ವಲಯದ ಉದ್ಯೋಗಿಗಳಿಗೆ ಸಿಹಿ ಸುದ್ದಿ: ಇನ್ನು ಮುಂದೆ 1ನೇ ತಾರೀಖಿಗೆ ವೇತನ ಕಡ್ಡಾಯ
ದುಲ್ ಹಜ್ಜ್ ಚಂದ್ರ ದರ್ಶನ : ಗಲ್ಫ್ ರಾಷ್ಟ್ರಗಳಲ್ಲಿ ಮೇ.27 ರಂದು ಈದುಲ್ ಅದ್’ಹಾ
ಕೇಳಿ.. ಉತ್ತರಿಸಬಲ್ಲೆ… : ಮಕ್ಕಾ, ಮದೀನಾ ಹರಮ್ ಮಸೀದಿಗಳಲ್ಲಿ ಬಹುಭಾಷಾ ಎಐ (AI) ಸ್ಮಾರ್ಟ್ ರೋಬೋಟ್ ಸೇವೆ
ಅಬ್ದುಲ್ ರಹೀಮ್ ಬಿಡುಗಡೆಗೆ ಕ್ಷಣಗಣನೆ: ಮೇ 20ರಂದು ಜೈಲುವಾಸದ ಅವಧಿ ಪೂರ್ಣ
ಮಕ್ಕಾದಲ್ಲಿ ಪೊಲೀಸರ ಮಿಂಚಿನ ದಾಳಿ: ನಕಲಿ ದಾಖಲೆ ತಯಾರಿಸುತ್ತಿದ್ದ 18 ಜನರ ತಂಡ ಬಂಧನ
ಸೌದಿ ಅರೇಬಿಯಾ: ವಾಹನಕ್ಕೆ ಆಕಸ್ಮಿಕ ಬೆಂಕಿ – ಯುವಕನಿಗೆ ದಾರುಣ ಅಂತ್ಯ