ದುಬೈ: ಜೂನ್ ಒಂದರಿಂದ ದುಬೈನ ಪಾರ್ಕಿಂಗ್ ಮೀಟರ್ಗಳಲ್ಲಿ ನಗದು (ಕ್ಯಾಶ್) ವ್ಯವಹಾರವನ್ನು ಹಂತ-ಹಂತವಾಗಿ ನಿಲ್ಲಿಸಲಾಗುವುದು ಎಂದು ಪಾರ್ಕಿಂಗ್ ಸೇವಾ ಸಂಸ್ಥೆಯಾದ ‘ಪಾರ್ಕಿನ್’ (Parkin) ತಿಳಿಸಿದೆ.
ಅದೇ ಸಮಯದಲ್ಲಿ, ಎಮಿರೇಟ್ಸ್ನ ಸಾರ್ವಜನಿಕ ಸಾರಿಗೆ ಜಾಲದಲ್ಲಿ ವ್ಯಾಪಕವಾಗಿ ಬಳಸಲಾಗುವ ‘ನೋಲ್ ಕಾರ್ಡ್’ಗಳನ್ನು (nol cards) ಬಳಸಿ ಚಾಲಕರು ಪಾರ್ಕಿಂಗ್ ಟಿಕೆಟ್ಗಳಿಗೆ ಹಣ ಪಾವತಿಸಬಹುದಾಗಿದೆ.
ಇದರೊಂದಿಗೆ, ಪಾರ್ಕಿನ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೂಲಕ ಯಾವುದೇ ಅಡೆತಡೆಯಿಲ್ಲದ ಪಾವತಿ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಕಂಪನಿ ನೆನಪಿಸಿದೆ. ಈ ಮೂಲಕ ಟೆಕ್ಸ್ಟ್ ಆಧಾರಿತ ಪಾರ್ಕಿಂಗ್ ಪಾವತಿಯಿಂದ (SMS parking) ವಿಧಿಸಲಾಗುವ ಹೆಚ್ಚುವರಿ ಎಸ್ಎಂಎಸ್ ಶುಲ್ಕಗಳನ್ನು ತಪ್ಪಿಸಬಹುದು ಎಂದೂ ಕಂಪನಿ ತಿಳಿಸಿದೆ.
ಇದಲ್ಲದೆ ‘ದುಬೈ ನೌ’ (Dubai Now) ಮತ್ತು ‘ಆರ್ಟಿಎ ಆಪ್’ಗಳ (RTA app) ಮೂಲಕವೂ ಪಾರ್ಕಿಂಗ್ ಶುಲ್ಕವನ್ನು ಪಾವತಿಸಬಹುದಾಗಿದೆ.
















ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ