janadhvani

Kannada Online News Paper

ಅಡ್ಮಿನ್‌ಗಳಿಗೆ ಸುಪರ್ ಪವರ್ ನೀಡಿದ ವ್ಯಾಟ್ಸ್ಆ್ಯಪ್- ಅನಗತ್ಯ ಸಂದೇಶಗಳಿಗೆ ಕಡಿವಾಣ

ಹಲವು ಪ್ರಯೋಗ ಹಾಗೂ ಪರೀಕ್ಷೆಗಳ ಬಳಿಕ ಇದೀಗ ವ್ಯಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್‌ಗೆ ಹೊಸ ಅಧಿಕಾರ ನೀಡಿದೆ.

ಮೆಟಾ ಒಡೆತನದ ವ್ಯಾಟ್ಸ್ಆ್ಯಪ್ ಗ್ರೂಪ್‌ನಲ್ಲಿನ ಯಾವುದೇ ಸದಸ್ಯರು ಹಾಕಿದ ಮೆಸೇಜ್ ಅಥವಾ ವಿಡಿಯೋ, ಫೋಟೋಗಳನ್ನು ಡಿಲೀಟ್ ಮಾಡಲು ವ್ಯಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್‌ಗೆ ಅನುಮತಿ ನೀಡಿದೆ. ಈ ಸೌಲಭ್ಯವನ್ನು ಪರಿಚಯಿಸುವುದಾಗಿ WhatsApp ಈಗಾಗಲೇ ಘೋಷಿಸಿತ್ತು. ಇದು ಗ್ರಾಹಕರ ಬಹು ನಿರೀಕ್ಷಿತ ಬೇಡಿಕೆಯಾಗಿತ್ತು.

ವ್ಯಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಅಡ್ಮಿನ್ ಪದೇ ಪದೇ ಮನವಿ ಮಾಡಿದರೂ ಗ್ರೂಪ್ ಸದಸ್ಯರು ಫಾರ್ವಡ್ ಸಂದೇಶ, ಅನಗತ್ಯ ಸಂದೇಶ ಪೋಸ್ಟ್ ಮಾಡುವುದು ತಪ್ಪುವುದಿಲ್ಲ. ಈ ಕುರಿತು ಹಲವು ದೂರು, ಮನವಿಗಳನ್ನು ವ್ಯಾಟ್ಸ್ಆ್ಯಪ್ ಸ್ವೀಕರಿಸಿದೆ. ಹಲವು ಪ್ರಯೋಗ ಹಾಗೂ ಪರೀಕ್ಷೆಗಳ ಬಳಿಕ ಇದೀಗ ವ್ಯಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್‌ಗೆ ಹೊಸ ಅಧಿಕಾರ ನೀಡಿದೆ. ಎರಡು ದಿನಗಳೊಳಗೆ ಯಾವುದೇ ಸಂದೇಶಗಳನ್ನು ಅಳಿಸಬಹುದಾಗಿದೆ.

ಇದೀಗ ಎಲ್ಲಾ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಈ ಫೀಚರ್ಸ್ ಲಭ್ಯವಾಗಿದೆ. ತಾವು ಅಡ್ಮಿನ್ ಆಗಿರುವ ಗ್ರೂಪಿನಲ್ಲಿ ಸದಸ್ಯರು ಕಳಿಸಿದ ಸಂದೇಶವನ್ನು ಡಿಲೀಟ್ ಆಯ್ಕೆ ಮಾಡಿದಾಗ ಡಿಲೀಟ್ ಫಾರ್ ಎವೆರಿವನ್ (delete for everyone) ಆಯ್ಕೆ ಕಾಣಿಸಿಕೊಂಡರೆ ತಮಗೆ ಈ ಸೌಲಭ್ಯ ದೊರತಿದೆ ಎಂದರ್ಥ. ಇಲ್ಲದವರು ತಮ್ಮ ವಾಟ್ಸಾಪ್ ನ್ನು ಅಪ್ಡೇಟ್ ಮಾಡಬೇಕಾಗಿದೆ.

ಇಲ್ಲಿ ಸಾಮಾನ್ಯವಾಗಿ ಇರುವ ಡಿಲೀಟ್ ಫಾರ್ ಎವೆರಿವನ್ ಆಯ್ಕೆ ಮಾಡಿದರೆ ಸದಸ್ಯರ ಮೆಸೇಜ್ ಗ್ರೂಪ್‌ನಿಂದ ಡಿಲೀಟ್ ಆಗಲಿದೆ.ಇದುವರೆಗೆ ಯಾರು ಮಸೇಜ್ ಪೋಸ್ಟ್ ಮಾಡುತ್ತಾರೆ ಅವರಿಗೆ ಮಾತ್ರ ಡಿಲೀಟ್ ಮಾಡುವ ಅಧಿಕಾರವಿತ್ತು. ಇದೀಗ ಗ್ರೂಪ್ ಸದಸ್ಯರ ಮೆಸೇಜ್ ಡಿಲೀಟ್ ಮಾಡುವ ಅಧಿಕಾರ ಅಡ್ಮಿನ್‌ಗೂ ದೊರಕಿದೆ.

ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಎಡಿಟ್ ಬಟನ್ ಫೀಚರ್ಸ್ ನೀಡುವುದಾಗಿ ಘೋಷಿಸಿತ್ತು. ಈ ಪಕ್ರಿಯೆ ಪ್ರಗತಿಯಲ್ಲಿದೆ. ಸದ್ಯ ವ್ಯಾಟ್ಸ್ಆ್ಯಪ್ ಬಳಕೆದಾರರು ಸಂದೇಶ ಕಳುಹಿಸಿದರೆ ಎಡಿಟ್ ಮಾಡಲು ಸಾಧ್ಯವಿಲ್ಲ. ಕೇವಲ ಡಿಲೀಟ್ ಆಯ್ಕೆ ಮಾತ್ರ ಲಭ್ಯವಿದೆ. ಹೀಗಾಗಿ ವ್ಯಾಟ್ಸ್ಆ್ಯಪ್ ಬಳಕೆದಾರ ಕಳುಹಿಸಿದ ಸಂದೇಶ ತಿದ್ದಲು ಅವಕಾಶ ನೀಡಲಿದೆ. ಟೆಸ್ಟಿಂಗ್ ಹಂತದಲ್ಲಿರುವ ಎಡಿಟ್ ಬಟನ್ ಫೀಚರ್ಸ್ ಮತ್ತೊಂದು ಸುತ್ತಿನ ಪರೀಕ್ಷಾರ್ಥಕ್ಕೆ ಮುಂದಾಗಿದೆ.

ವ್ಯಾಟ್ಸ್ಆ್ಯಪ್ ಈಗಾಗಲೇ ಒಂದೇ ಸಮಯದಲ್ಲಿ 32 ಮಂದಿಗೆ ವಾಯ್ಸ್ ಕರೆ ಮಾಡುವ ಫೀಚರ್ಸ್ ನೀಡಿದೆ. ಇದರ ಜೊತೆಗೆ 2 GB(ಗೀಗಾ ಬೈಟ್‌) ಗಾತ್ರದ ಫೈಲ್‌ಗಳನ್ನು ರವಾನಿಸಲು ಅವಕಾಶ ನೀಡಿದೆ. ಈ ಹಿಂದೆ ಕೇವಲ 8 ಜನರಿಗೆ ಗ್ರೂಪ್ ಕಾಲ್ ಮಾಡುವ ಅವಕಾಶವಿತ್ತು ಇಷ್ಟೇ ಅಲ್ಲ 1 ಜಿಬಿ ಫೈಲ್ ರವಾನಿಸಲು ಮಾತ್ರ ಅವಕಾಶ ನೀಡಿಲಾಗಿತ್ತು. ಅಳಿಸಿ ಹಾಕಿದ ಸಂಭಾಷಣೆಗಳು ಗ್ರುಪ್‌ನಲ್ಲಿರುವ ಸದಸ್ಯರಿಗೆ ಕಾಣಿಸದಂತೆ ಮಾಡುವ ಹೊಸ ಫೀಚರ್‌ ಅನ್ನು ಅಳವಡಿಸಲಾಗುವುದೆಂದು ಹೇಳಿದೆ.

error: Content is protected !! Not allowed copy content from janadhvani.com