ಹಜ್: ‘ರೋಡ್ ಟು ಮಕ್ಕಾ’ ಯೋಜನೆಯಲ್ಲಿ ಈ ವರ್ಷ ಭಾರತವಿಲ್ಲ

ಮಕ್ಕಾ: ವಿದೇಶಗಳಿಂದ ಹಜ್ ಕರ್ಮಗಳಿಗಾಗಿ ಆಗಮಿಸುವವರಿಗೆ ಅವರ ದೇಶದಲ್ಲೇ ಎಮಿಗ್ರೇಷನ್ ಪೂರ್ಣಗೊಳಿಸುವ ಯೋಜನೆ (ರೋಡ್ ಟು ಮಕ್ಕಾ) ಯಲ್ಲಿ ಈ ವರ್ಷ ಭಾರತವನ್ನು ಒಳಪಡಿಸಿಲ್ಲ. ಮಲೇಷ್ಯಾ, ಇಂಡೋನೇಷ್ಯಾ, ಪಾಕಿಸ್ತಾನ್, ಬಾಂಗ್ಲಾದೇಶ, ಟುನೀಷ್ಯಾ ಮುಂತಾದ ದೇಶಗಳ ಹಜ್ಜಾಜ್‌ಗಳಿಗೆ ಮಾತ್ರ ಈ ಬಾರಿ ಸೇವೆ ಲಭ್ಯವಾಗಲಿದೆ.

ಪ್ರಾಯೋಗಿಕವಾಗಿ ಪ್ರಥಮ ಬಾರಿಗೆ ಮಲೇಷ್ಯಾ ದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿತ್ತು. ಇದು ಯಶಸ್ವಿಯಾದ ಹಿನ್ನಲೆಯಲ್ಲಿ ಈ ವರ್ಷದಿಂದ ಅದನ್ನು ಇತರ ದೇಶಗಳಿಗೂ ವಿಸ್ತರಿಸಲಾಗಿತ್ತು. ಈ ಯೋಜನೆ ಮೂಲಕ ಈ ವರ್ಷ 225,000 ಹಜ್ಜಾಜ್‌ಗಳಿಗೆ ಸೇವೆ ಲಭಿಸಲಿದೆ. 2030ರ ಭಾಗವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಸ್ವಂತ ದೇಶದಲ್ಲೇ ಇಮಿಗ್ರೇಷನ್, ಕಸ್ಟಮ್ಸ್ ಪ್ರಕ್ರಿಯೆಗಳು ಪೂರ್ಣಗೊಳ್ಳುವ ಕಾರಣ ಸೌದಿಯಲ್ಲಿ ವಿಮಾನ ಇಳಿಯುವ ಹಜ್ಜಾಜ್‌ಗಳು ಇತರ ಕ್ರಮಗಳನ್ನು ಎದುರಿಸದೆ ನೇರವಾಗಿ ವಿಮಾನ ನಿಲ್ದಾಣದಿಂದ ಹೊರಗಿಳಿಯುವುದು ಸಾಧ್ಯವಾಗಲಿದೆ. ಹಜ್ಜಾಜ್‌ಗಳ ಕಸ್ಟಮ್ಸ್ ಕ್ರಮಗಳು ಊರಲ್ಲೇ ಪೂರ್ಣಗೊಂಡ ಕಾರಣ ಅವರ ಲಗ್ಗೇಜ್‌ಗಳು ಮಕ್ಕಾ ಮತ್ತು ಮದೀನಾದ ವಾಸ ಸ್ಥಳಗಳಿಗೆ ನೇರವಾಗಿ ತಲುಪಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!