janadhvani

Kannada Online News Paper

ಮರ್ಕಝ್ ಕುರಿತ ಪ್ರಬಂಧ-ಅಹ್ಮದುಲ್ಲಾಹ್ ಸಖಾಫಿಯವರಿಗೆ ಡಾಕ್ಟರೇಟ್

ಚೆನ್ನೈ : ಭಾರತದಲ್ಲಿ ಅರೇಬಿಕ್ ಭಾಷೆಯ ಅಭಿವೃದ್ಧಿಗಾಗಿ ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರ ಸಾರಥ್ಯದಲ್ಲಿ ಕಾರ್ಯಾಚರಿಸುತ್ತಿರುವ ವಿಶ್ವವಿಖ್ಯಾತ ಮರ್ಕಝ್ ಸಂಸ್ಥೆ ನೀಡಿದ ಕೊಡುಗೆಗಳು ಎಂಬ ಅಧ್ಯಯನ ಪ್ರಬಂಧಕ್ಕೆ ಮದ್ರಾಸ್ ವಿಶ್ವ ವಿದ್ಯಾಲಯದಿಂದ ಅಹ್ಮದುಲ್ಲಾಹ್ ಸಖಾಫಿ ಕೊಯಂಬತ್ತೂರು ಅವರಿಗೆ ಡಾಕ್ಟರೇಟ್ ಲಭಿಸಿದೆ.

ತಮಿಳುನಾಡಿನ ಮದ್ರಾಸ್ ವಿಶ್ವವಿದ್ಯಾಲಯದ ಅರಬಿಕ್ ವಿಭಾಗದ ಡಾ|ಶಾಕಿರ್ ಹುಸೇನ್ ಅವರ ಮಾರ್ಗದರ್ಶನದಲ್ಲಿ ಅಧ್ಯಯನವನ್ನು ಪೂರ್ತಿಗೊಳಿಸಿದ ಅಹ್ಮದುಲ್ಲಾಹ್, ಧಾರ್ಮಿಕ ಶಿಕ್ಷಣದಲ್ಲಿ 2004ರಲ್ಲಿ ಕೇರಳದ ಕಲ್ಲಿಕೋಟೆಯಲ್ಲಿರುವ ಜಾಮಿಅ ಮರ್ಕಝು ಸ್ಸಖಾಫತಿ ಸ್ಸುನ್ನೀಯ್ಯಾ ಯೂನಿವರ್ಸಿಟಿಯಿಂದ ಸಖಾಫಿ ಪದವಿಯನ್ನು ಪಡೆದಿದ್ದಾರೆ.

ತಮಿಳುನಾಡು ಕೊಯಂಬತ್ತೂರು ನಿವಾಸಿಗಳಾದ ಸೈಯದ್ ಅಬ್ದುಲ್ ಶುಕುರ್ ಹಾಗೂ ಮಹ್ಮೂದಾ ಬೀಬಿ ದಂಪತಿಯ ಪುತ್ರರಾಗಿದ್ದಾರೆ ಅಹ್ಮದುಲ್ಲಾಹ್ ಸಖಾಫಿ.

ಮೂಲ : ಸಿರಾಜ್ ಡೈಲಿ
ಕನ್ನಡಕ್ಕೆ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com