ಮರ್ಕಝ್ ನಾಲೆಜ್ ಸಿಟಿ: ಪ್ರಾಮಾಣಿಕ ನಾಯಕತ್ವದ ಫಲಿತಾಂಶವಾಗಿದೆ- ದೀಪಕ್ ವೊಹ್ರಾ

ಕಲ್ಲಿಕೋಟೆ: ಶೈಕ್ಷಣಿಕ ರಂಗದಲ್ಲಿ ಉತ್ತಮ ಗುಣಮಟ್ಟ ಹಾಗೂ ಆಧುನೀಕರಣದ ಸಾಧ್ಯತೆಗಳನ್ನು ಬಳಸಿಕೊಳ್ಳುವುದು ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಮರ್ಕಝ್ ನೀಡುತ್ತಿರುವ ಕೊಡುಗೆಗಳು ಅಭಿನಂದನಾರ್ಹವಾಗಿದೆ ಎಂದು ಭಾರತೀಯ ರಾಜತಾಂತ್ರಿಕ ಹಾಗೂ ಪ್ರಧಾನ ಮಂತ್ರಿಯ ಮಾಜಿ ಸಲಹೆಗಾರ‌ರಾದ ದೀಪಕ್ ವೊಹ್ರಾ ಹೇಳಿದರು.

ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ಜಾಗತಿಕ ವಿದ್ಯಾ ಸಂಸ್ಥೆ ಜಾಮಿಯಾ ಮರ್ಕಝಿನಲ್ಲಿ ಆಯೋಜಿಸಿದ್ದ ‘ರೆಕಗ್ನಿಷನ್-19’ ಶೈಕ್ಷಣಿಕ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮರ್ಕಝ್‌ ನ ಶೈಕ್ಷಣಿಕ ವಿಧಾನವು ಅದ್ಭುತವಾಗಿದೆ ಮತ್ತು ನಾಲೆಜ್ ಸಿಟಿಯಲ್ಲಿರುವ ವಿವಿಧ ವೈಜ್ಞಾನಿಕ ಆಧಾರಿತ ನಗರ ಯೋಜನೆಗಳು ಭಾರತದಲ್ಲೇ ವಿಶಿಷ್ಟವಾಗಿವೆ ಎಂದು ಅವರು ಹೇಳಿದರು. ಅನಾಥಾಶ್ರಮವನ್ನು ದೇಶದಲ್ಲಿ ಬೇರುಗಳನ್ನು ಹೊಂದಿರುವ ಜ್ಞಾನ ಕೇಂದ್ರವನ್ನಾಗಿ ಪರಿವರ್ತಿಸುವುದು ಬುದ್ಧಿವಂತ, ಉತ್ಸಾಹ ಮತ್ತು ಪ್ರಾಮಾಣಿಕ ನಾಯಕತ್ವದ ಫಲಿತಾಂಶವಾಗಿದೆ ಎಂದು ಶೈಕ್ಷಣಿಕ ರಂಗದಲ್ಲಿ ಮರ್ಕಝ್ ಸಂಸ್ಥೆಯ ಕ್ರಾಂತಿಯ ರುವಾರಿ ಕಾಂತಪುರಂ ಉಸ್ತಾದರ ಅಪ್ರತಿಮ ಸೇವೆಯನ್ನು ಈ ಮೊದಲೇ ಕಣ್ಣಾರೆ ಕಂಡು ಮನದಟ್ಟು ಮಾಡಿದ ದೀಪಕ್ ವೋಹ್ರಾರವರು ಎ.ಪಿ.ಉಸ್ತಾದರನ್ನು ಪ್ರಶಂಸಿದರು.

ಕನ್ನಡಕ್ಕೆ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

Leave a Reply

Your email address will not be published. Required fields are marked *

error: Content is protected !!