janadhvani

Kannada Online News Paper

ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ

ಜೈಪುರ : ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಬಡತನವನ್ನು ಒಂದೇ ಬಾರಿಗೆ ತೊಲಗಿಸುತ್ತೇವೆ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ. ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಗೆ ಅವರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡಲಾಗುವುದು ಎಂದು ಅವರು ಹೇಳಿದರು.

‘ನ್ಯಾಯ ಪತ್ರ್ ’ ಎಂಬ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಲಾಗಿರುವ ಮಹಾಲಕ್ಷ್ಮಿ ಯೋಜನೆ ಗೆ ಸಂಬಂಧಿಸಿದಂತೆ ರಾಜಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್ ಮಾತನಾಡಿದರು.
ನೀವು ಬಡತನ ರೇಖೆಗಿಂತ ಕೆಳಗಿದ್ದರೆ, ಒಮ್ಮೆಗೇ ಬಡತನವನ್ನು ತೊಡೆದುಹಾಕಲು ವರ್ಷಕ್ಕೆ 1 ಲಕ್ಷ (ತಿಂಗಳಿಗೆ 8500) ಪಾವತಿಸಲಾಗುವುದು ಎಂದು ರಾಹುಲ್ ಭರವಸೆ ನೀಡಿದರು.

ನಿರುದ್ಯೋಗ, ರೈತರಿಗೆ ಬೆಂಬಲ ಬೆಲೆ, ಬೆಲೆ ಏರಿಕೆ ಮುಂತಾದ ವಿಷಯಗಳ ಕಡೆಗೆ ಗಮನ ಸೆಳೆದ ರಾಹುಲ್,ಬಿಜೆಪಿ ವಿರುದ್ಧ ಹರಿಹಾಯ್ದರು.
ರೈತರನ್ನು ಉಗ್ರರು ಎಂದು ಕರೆದಿರುವ ಮೋದಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವರೇ? ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರೈತರು ತೆರಿಗೆ ಪಾವತಿಸುವಂತಾಯಿತು.

ರೈತರ ಹಾಗೂ ಹಿಂದುಳಿದವರ ಸಂಕಷ್ಟ, ಬಡತನ ಮುಂತಾದ ವಿಷಯಗಳನ್ನು ಚರ್ಚಿಸುವ ಆಸಕ್ತಿ ಬಿಜೆಪಿಗೆ ಇಲ್ಲ. ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರದ ಭ್ರಷ್ಟಾಚಾರ ಅತಿಯಾಗಿದೆ ಎಂದು ರಾಹುಲ್ ಆರೋಪಿಸಿದರು.

error: Content is protected !! Not allowed copy content from janadhvani.com