SჄS ಸಾಂತ್ವನ ಸಮಿತಿಯಿಂದ ಉಕ್ಕಿನ ಸೇತುವೆ- ಭಾರತದ ಗ್ರ್ಯಾಂಡ್ ಮುಫ್ತಿಯಿಂದ ಲೋಕಾರ್ಪಣೆ

ತಾಮರಶ್ಶೇರಿ: ಕೇರಳದ ತಾಮರಶ್ಶೇರಿಯ ಓಮರಶ್ಶೇರಿ ಗ್ರಾಮದ ವೆಳ್ಳಚಾಲ್ ಪ್ರದೇಶದ ನಿವಾಸಿಗಳ ದುರಂತಮಯ ಸಂಚಾರಕ್ಕೆ ಸಾಂತ್ವನವಾಗಿ ಇರುತುಳ್ಳಿ ಹೊಳೆ ದಾಟಲು ಕೇರಳ ರಾಜ್ಯ SჄS ಸಾಂತ್ವನ ಸಮಿತಿ ನಿರ್ಮಿಸಿದ ಬ್ರಹದಾಕಾರದ ಉಕ್ಕಿನ ತೂಗು ಸೇತುವೆಯನ್ನು ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಭಾನುವಾರ ಉದ್ಘಾಟಿಸಿ ನಾಡಿಗೆ ಸಮರ್ಪಿಸಿದರು.

ಹೊಳೆಯ ತೀರದಲ್ಲಿ ವಾಸಿಸುತ್ತಿರುವ ನೂರಕ್ಕಿಂತಲೂ ಮಿಕ್ಕ ಕುಟುಂಬಗಳು ಪಕ್ಕದ ಕೊಡುವಳ್ಳಿ ನಗರಸಭೆಯ ಅಂಡೋಣ, ತೆಕ್ಕೆತಡ್ಕ ಭಾಗಕ್ಕೆ ತೆರಳಲು ಹಲವು ವರ್ಷಗಳಿಂದ ಬಳಸುತ್ತಿದ್ದ ಹಳೇಕಾಲದ ಮರದ ಸೇತುವೆಯನ್ನು ಎರಡು ಬಾರಿ ದುರಸ್ಥಿಗೊಳಿಸಿದರೂ ಕಳೆದ ವರ್ಷದ ನೆರೆಹಾವಳಿಯಲ್ಲಿ ಕೊಚ್ಚಿ ಹೋಗಿತ್ತು.

ಇದರಿಂದಾಗಿ ತಾಮರಶ್ಶೇರಿ ತಾಲೂಕು ಆಸ್ಪತ್ರೆ ಹಾಗೂ ಶಾಲಾ ಕಾಲೇಜು ಮುಂತಾದ ಅತ್ಯಗತ್ಯ ಕಾರ್ಯಗಳಿಗೆ ತೆರಳಲು ಸುಮಾರು ಎರಡು ಕಿಲೋಮೀಟರಿಗಿಂತಲೂ ಅಧಿಕ ಕಾಲು ದಾರಿಯನ್ನು ಬಳಸಿ ಜನರು ಕಷ್ಟಪಡುತ್ತಿರುವುದನ್ನು ಮನಗಂಡ SჄS ಸಾಂತ್ವನ ಸಮಿತಿಯು ಅದಕ್ಕೊಂದು ಶಾಶ್ವತ ಪರಿಹಾರವಾಗಿ ಸುಮಾರು ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಉಕ್ಕಿನ ತೂಗು ಸೇತುವೆಯನ್ನು ನಿರ್ಮಿಸಿ ಕೊಟ್ಟಿದೆ.

ಇದರ ಉದ್ಘಾಟನಾ ಸಮಾರಂಭವು S M A ರಾಜ್ಯಾಧ್ಯಕ್ಷರಾದ. ಕೆ.ಕೆ ಅಹಮದ್ ಕುಟ್ಟಿ ಮುಸ್ಲಿಯರ್ ಕಾಟಿಪಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ. N ಅಲಿ ಅಬ್ದುಲ್ಲಾ, SჄ S ಕೇರಳ ರಾಜ್ಯ ಉಪಾಧ್ಯಕ್ಷರಾದ ಸೈಯದ್ ಮುಹಮ್ಮದ್ ತುರಾಬ್ ಸಖಾಫಿ, PTA ರಹೀಂ MLA, SჄS ಕೇರಳ ರಾಜ್ಯ ಕಾರ್ಯದರ್ಶಿಮಜೀದ್ ಕಕ್ಕಾಡ್, SჄS ಜಿಲ್ಲಾಧ್ಯಕ್ಷರಾದ ಮಹಮ್ಮದಾಲಿ ಸಖಾಫಿ ವಳ್ಳಿಯಾಡ್, ನಾಸರ್ ಚೆರ್ವಾಡಿ, ಕೆ.ಕೆ ರಾಧಾಕೃಷ್ಣನ್, ಟಿ.ಟಿ ಮನೋಜ್, ಮಮ್ಮಿಂಞಿ ಮಾಸ್ಟರ್ ಮುಂತಾದವರು ಭಾಷಣ ಮಾಡಿದರು.

ಮೂಲ : ಸಿರಾಜ್ ಡೈಲಿ
ಕನ್ನಡಕ್ಕೆ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

Leave a Reply

Your email address will not be published. Required fields are marked *

error: Content is protected !!