ಹಸಿವು ತಾಳಲಾರದೆ ಮಣ್ಣು ತಿಂದು ಮಕ್ಕಳಿಬ್ಬರು ಮೃತ್ಯು

ಅನಂತಪುರ: ಹಸಿವು ತಾಳಲಾರದೇ ಕರ್ನಾಟಕದ ಇಬ್ಬರು ಮಕ್ಕಳು ಆಂದ್ರದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದ್ರಿ ಮಂಡಲ ವ್ಯಾಪ್ತಿಯ ಕುಮ್ಮಾರವಂಡಲಪಲ್ಲೆದಲ್ಲಿ ಈ ಘಟನೆ ನಡೆದಿದ್ದು, ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಮೂಲದ ಮಹೇಶ್‌ ಮತ್ತು ನಾಗಮಣಿ ಎನ್ನುವವರು ಕೆಲ ವರುಷಗಳ ಹಿಂದೆ ಉದ್ಯೋಗಕ್ಕಾಗಿ ಕುಮ್ಮಾರವಂಡಲಪಲ್ಲೆದಲ್ಲಿ ವಾಸವಾಗಿದ್ದಾರೆ.

ಇನ್ನು ಮಹೇಶ್‌ ಮತ್ತು ನಾಗಮಣಿ ಹೋದ ವೇಳೆಯಲ್ಲಿ ಈ ದಂಪತಿಗಳ ಇಬ್ಬರು ಮಕ್ಕಳು ಮಣ್ಣು ತಿಂದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಮಹೇಶ್‌ ಮತ್ತು ನಾಗಮಣಿ ಇಬ್ಬರು ಮದ್ಯಪಾನಿಗಳಾಗಿದ್ದು, ಇಬ್ಬರು ಕೂಡ ಮಕ್ಕಳಿಗೆ ಸರಿಯಾಗಿ ಆಹಾರವನ್ನು ನೀಡುತ್ತಿರಲಿಲ್ಲ ಅಂತ ಕೇಳಿ ಬಂದಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಹಾಗೇ ಆಂದ್ರ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!