ಕೊಲ್ಕತ್ತ: ಸರ್ಕಾರಿ ಕೆಲಸಕ್ಕಾಗಿರುವ ಅರ್ಜಿ, ಬ್ಯಾಂಕ್ ಅಥವಾ ಕಾಲೇಜು ಪ್ರವೇಶ ಅರ್ಜಿಗಳಲ್ಲಿ ಧರ್ಮ (Religion) ಯಾವುದು? ಎಂಬ ಪ್ರಶ್ನೆ ಇದ್ದೇ ಇರುತ್ತದೆ. ಆದರೆ ಕೊಲ್ಕತ್ತದ ಕಾಲೇಜೊಂದರಲ್ಲಿ ಈ ಪ್ರಶ್ನೆಗಿರುವ ಉತ್ತರದ ಆಯ್ಕೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಮೊದಲಾದ ಧರ್ಮದ ಜತೆಗೆ ಮಾನವೀಯತೆ (Humanity) ಎಂಬ ಆಯ್ಕೆಯೂ ಇದೆ.
ಕೊಲ್ಕತ್ತದ ಬೆಥೂನ್ ಕಾಲೇಜ್ ಪ್ರವೇಶ ಅರ್ಜಿಯಲ್ಲಿ ಈ ರೀತಿ ಧರ್ಮ ನಮೂದಿಸಲಿರುವ ಕಾಲಂನಲ್ಲಿ ಮಾನವೀಯತೆ ಎಂಬ ಆಯ್ಕೆ ನೀಡಿ ಗಮನ ಸೆಳೆದಿದೆ.
2019ರ ಸಾಲಿನ ಪದವಿಪೂರ್ವ ಶಿಕ್ಷಣಕ್ಕೆ ಮೇ. 27ರಂದು ಅರ್ಜಿ ಸ್ವೀಕರಿಸಲು ಆರಂಭವಾಗಿದ್ದು, ಈ ಬಾರಿ ಹೊಸ ಆಯ್ಕೆಯನ್ನು ಸೇರಿಸಲಾಗಿದೆ. ಆನ್ಲೈನಲ್ಲಿಯೂ ಅರ್ಜಿ ಲಭ್ಯವಿದೆ.
ಪ್ರವೇಶ ಅರ್ಜಿಯಲ್ಲಿ ಧರ್ಮದ ಹೆಸರನ್ನು ನಮೂದಿಸುವುದಕ್ಕೆ ಕೆಲವು ವಿದ್ಯಾರ್ಥಿಗಳು ಇಷ್ಟಪಡುವುದಿಲ್ಲ. ಅವರ ನಿಲುವುಗಳನ್ನು ನಾವು ಗೌರವಿಸುತ್ತೇವೆ. ಹಾಗಾಗಿ ಮಾನವೀಯತೆಯೇ ಧರ್ಮ ಎಂಬುದಾಗಿ ನಮೂದಿಸುವ ಅವಕಾಶವನ್ನು ಇಲ್ಲಿ ನೀಡಲಾಗಿದೆ. ಈ ರೀತಿಯ ಆಯ್ಕೆಯನ್ನು ಅರ್ಜಿಯಲ್ಲಿ ಸೇರಿಸುವುದಕ್ಕೆ ಆಡಳಿತ ಮಂಡಳಿ ಒಕ್ಕೊರಲಿನಿಂದ ಸಮ್ಮತಿಸಿತ್ತು ಎಂದು ಬೆಥೂನ್ ಕಾಲೇಜಿನ ಪ್ರಾಂಶುಪಾಲೆ ಮಮತಾ ರೇ ಹೇಳಿರುವುದಾಗಿ ದಿ ಮಿಲೇನಿಯಂ ಪೋಸ್ಟ್ ವರದಿ ಮಾಡಿದೆ.
1879ರಲ್ಲಿ ಆರಂಭವಾದ ಬೆಥೂನ್ ಕಾಲೇಜು ಈ ಹಿಂದೆ ಹಿಂದೂ ಫೀಮೇಲ್ ಸ್ಕೂಲ್ ಎಂದು ಕರೆಯಲ್ಪಡುತ್ತಿತ್ತು. NAAC-Grade A ಅರ್ಹತೆ ಪಡೆದ ಮೊದಲ ಮಹಿಳಾ ಕಾಲೇಜು ಇದಾಗಿದೆ.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ