janadhvani

Kannada Online News Paper

ಔಷಧಿಗಳ ದುರುಪಯೋಗ: ಮೂರು ವರ್ಷಗಳಲ್ಲಿ ಯುಎಇಯಾದ್ಯಂತ 45 ಮಂದಿ ಮರಣ

ಅಬುಧಾಬಿ: ಔಷಧಿಗಳ ದುರುಪಯೋಗದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಯುಎಇಯಾದ್ಯಂತ 45 ಮಂದಿ ಮರಣಹೊಂದಿರುವುದಾಗಿ ಗೃಹ ಖಾತೆಯ ಅಧಿಕಾರಿಗಳು ತಿಳಿಸಿದ್ದಾರೆ.

2017ರಲ್ಲಿ 13, 2018ರಲ್ಲಿ 5 ಮಂದಿ ಔಷದಿಗಳ ದುರುಪಯೋಗದಿಂದ ಸಾವನ್ನಪ್ಪಿದ್ದಾರೆ ಎಂದು ಗೃಹ ಖಾತೆಯ ಆ್ಯಂಟಿ ಡ್ರಗ್ ಫೆಡರಲ್ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ಸಯೀದ್ ಅಲ್ ಸುವೈದಿ ತಿಳಿಸಿದ್ದಾರೆ.

ನಿಷೇಧಿತ, ಗುಣಮಟ್ಟವಿಲ್ಲದ ಔಷಧಿಗಳು ದೇಶಕ್ಕೆ ತಲುಪುವುದನ್ನು ತಡೆಯಲು ಅರೋಗ್ಯ ಸಚಿವಾಲಯದೊಂದಿಗೆ ಕೈಜೋಡಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸುವೈದಿ ತಿಳಿಸಿದ್ದಾರೆ. ಏಷ್ಯನ್ ಮೂಲದಿಂದ ನಿಷೇಧಿತ ಮದ್ದುಗಳ ಸಾಗಾಟಕ್ಕೆ ಪ್ರಯತ್ನಗಳು ನಡೆಯುತ್ತಾ ಇದೆ.

ಒಂದು ಏಷ್ಯನ್ ದೇಶದಿಂದ ಯುಎಇಗೆ ಸಾಗಿಸಲು ಪ್ರಯತ್ನಿಸಲಾದ 52,809 ಕಿ.ಗ್ರಾಂ ನಿಷೇಧಿತ ಔಷಧಿಗಳನ್ನು 2017 ರಲ್ಲಿ ಪತ್ತೆಹಚ್ಚಲಾಗಿತ್ತು. 2016ರಲ್ಲಿ 1430 ಕಿ.ಗ್ರಾಂ, 2018ರಲ್ಲಿ 44,13 ಕಿ.ಗ್ರಾಂ. ನಿಷೇಧಿತ ಮದ್ದುಗಳನ್ನು ಸೆರೆ ಹಿಡಿಯಲಾಗಿದೆ.

ರೋಗಿಗಳು ಔಷಧಿಗಳ ದುರುಪಯೋಗ ಮಾಡುತ್ತಿದ್ದಾರೆಯೇ ಎನ್ನುವ ಬಗ್ಗೆ ನಿರೀಕ್ಷಿಸಲು ಪ್ರತ್ಯೇಕ ಆನ್ ಲೈನ್ ಫ್ಲಾಟ್ ಫಾರಂ ರೂಪಿಸಲಾಗಿದೆ. ಎಲ್ಲಾ ಔಷಧಿಗಳ ರಾಸವಸ್ತುಗಳನ್ನು ಪತ್ತೆ ಹಚ್ಚುವ ಲ್ಯಾಬೊರೇಟರಿ ಇದ್ದರೂ, ಔಷಧಿಗಳ ದುರುಪಯೋಗವನ್ನು ತಡೆಗಟ್ಟಲು ಖಾಸಗಿ ಸ್ಥಾಪನೆಗಳು, ಆರೋಗ್ಯ ಕೇಂದ್ರಗಳ ಸಿಬ್ಬಂದಿ, ರೋಗಿಗಳು, ಜನರಿಕ್ ಮದ್ದು ನಿರ್ಮಾಪಕರು, ವಿತರಕರು ಮುಂತಾದವರ ಸಹಕಾರ ಅಗತ್ಯ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

error: Content is protected !! Not allowed copy content from janadhvani.com