janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಗೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಕಟವಾದ ವರದಿಗೆ ಬಗ್ಗೆ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಟ್ವೀಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

Dear @timesnow, it is highly condemnable to misquote me on a such serious issue. You have not only misquoted, but also misunderstood what I said. I did not blame India; I said that along with destroying the enemies we also need to make our country stronger. https://t.co/7ocCHgw9An— H D Kumaraswamy (@hd_kumaraswamy) February 19, 2019

ಖಾಸಗಿ ವಾಹಿನಿಯೊಂದು ಉಗ್ರವಾದಕ್ಕೆ ಭಾರತ ಕಾರಣ ಎಂಬರ್ಥದಲ್ಲಿ ಸಿಎಂ ಕುಮಾರಸ್ವಾಮಿಹೇಳಿಕೆ ನೀಡಿದ್ದಾರೆ ಎಂದು ವರದಿ ಮಾಡಿತ್ತು. ಈ ಬಗ್ಗೆ ಸಾಮಾಜಿಕತಾಣಗಳಲ್ಲು ಭಾರಿ ಚರ್ಚೆ ನಡೆದಿತ್ತು. ಸಿಎಂ ಕುಮಾರಸ್ವಾಮಿ ಹೇಳಿಕೆಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. 

ಇದಕ್ಕೆ ಸ್ಪಷ್ಟನೆ ನೀಡಿರುವ ಸಿಎಂ ಕುಮಾರಸ್ವಾಮಿ, ರಾಷ್ಟ್ರದ ಮೇಲಿನ ಉಗ್ರರ ದಾಳಿಯಂತಹ ಗಂಭೀರ ವಿಚಾರಗಳಂತಹ ಸಂದರ್ಭದಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಪ್ರಕಟಿಸಿರುವುದನ್ನು ಖಂಡಿಸುತ್ತೇನೆ. ನೀವು ನನ್ನ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿದ್ದು ಮಾತ್ರವಲ್ಲ, ತಪ್ಪಾಗಿ ಗ್ರಹಿಸಿದ್ದೀರಿ. ನಾನು ಈ ವಿಚಾರದಲ್ಲಿ ಭಾರತದ ವಿರುದ್ಧ ಮಾತನಾಡಿಲ್ಲ. ವೈರಿಗಳನ್ನು ನಾಶಗೊಳಿಸುವ ಜತೆಗೆ ನಮ್ಮ ದೇಶವನ್ನು ಮತ್ತಷ್ಟು ಬಲಪಡಿಸುವ ಅಗತ್ಯ ಇದೆ ಎಂದು ನನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದೆ ಎಂದು ಟ್ವೀಟ್‌ ಮಾಡಿದ್ದಾರೆ.

 

error: Content is protected !! Not allowed copy content from janadhvani.com