janadhvani

Kannada Online News Paper

ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 100% ಫಲಿತಾಂಶ

ಗುರುಪುರ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೆಂಕುಳಿಪಾಡಿ ಗುರುಪುರ ಇಲ್ಲಿನ ವಿದ್ಯಾರ್ಥಿನಿ ಸಫಾ 568 ( 90.88%) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಗುರುಕಂಬಳ ಸಯ್ಯದ್ ಜಮಾಲ್ ಮತ್ತು ಉಡುಪಿ ಅಬ್ದುಲ್ ರಹಿಮಾನ್ ರವರ ಮೊಮ್ಮಗಳಾದ ಕುಮಾರಿ ಸಫಾ ಗುರುಕಂಬಳ ಸಯ್ಯದ್ ಇಸಾಕ್ ಮತ್ತು ರೆಹನಾ ದಂಪತಿಯ ಸುಪುತ್ರಿಯಾಗಿದ್ದಾರೆ.

ಪರೀಕ್ಷೆಗೆ ಹಾಜರಾಗಿರುವ 48 ವಿದ್ಯಾರ್ಥಿಗಳಲ್ಲಿ ಡಿಸ್ಟಿಂಕ್ಷನ್ ನಲ್ಲಿ 03 , ಪ್ರಪ್ರಥಮ ಶ್ರೇಣಿಯಲ್ಲಿ 27 ಮತ್ತು ದ್ವಿತೀಯ ಶ್ರೇಣಿಯಲ್ಲಿ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿ 100% ಫಲಿತಾಂಶವನ್ನು ನೀಡಿರುತ್ತಾರೆ.

ಶಾಲೆಯ ಜಿಎಂಸಿ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ಕುಟುಂಬಸ್ಥರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.

error: Content is protected !! Not allowed copy content from janadhvani.com