ದೇಶದ ಮೂಲೆ ಮೂಲೆಗಳಲ್ಲೂ ವಿಮಾನ ನಿಲ್ದಾಣ-ವಿಮಾನಯಾನ ಸಚಿವ

ಬೆಂಗಳೂರು,(ಫೆ.20): ಇಂದಿನಿಂದ ಬೆಂಗಳೂರಿನಲ್ಲಿ ಏರ್​ ಶೋ ಪ್ರಾರಂಭವಾಗಿದ್ದು, ಕೇಂದ್ರ ವಿಮಾನಯಾನ ಸಚಿವ ಸುರೇಶ್​ ಪ್ರಭು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು,  2020 ರ ವೇಳೆಗೆ ಭಾರತದ ವೈಮಾನಿಕ ಉದ್ಯಮ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ಏರಲಿದೆ ಎಂದರು.

ನಮ್ಮ ದೇಶದ ವೈಮಾನಿಕ ಉದ್ಯಮ ಕಳೆದ ನಾಲ್ಕು ವರ್ಷಗಳಲ್ಲಿ 30% ಹೆಚ್ಚಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದರು.
65 ಬಿಲಿಯನ್ ಡಾಲರ್ಸ್​ನಲ್ಲಿ 103 ಹೊಸ ಏರ್​​ಪೋರ್ಟ್​​​​ಗಳು ಭಾರತದಲ್ಲಿ ಸ್ಥಾಪನೆಯಾಗಲಿವೆ. ದೇಶದ ಮೂಲೆ ಮೂಲೆಗಳಿಗೆ ವಿಮಾನ ಪ್ರಯಾಣ ದೊರೆಯಲಿದೆ. ಸಣ್ಣ ಊರುಗಳಲ್ಲಿ ಕೂಡಾ ವಿಮಾನ ಹಾರಾಟ ನಡೆಯಲಿದೆ ಎಂದು ಹೇಳಿದರು.

ವಿಶನ್ 2040 ಎನ್ನುವ ಗುರಿಯಿಟ್ಟುಕೊಂಡಿದ್ದೇವೆ. 2300 ಹೊಸ ವಿಮಾನಗಳು ಭಾರತಕ್ಕೆ ಅವಶ್ಯಕತೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ಆ ವಿಮಾನಗಳನ್ನು ನಮ್ಮ ದೇಶದಲ್ಲೇ ತಯಾರಿಸುವ ಉದ್ದೇಶವಿದೆ. ನಾವು ಅನೇಕ ದೇಶಗಳ ಜೊತೆ ಚರ್ಚಿಸಿ ವೈಮಾನಿಕ ಉದ್ಯಮ ಹೆಚ್ಚಿಸುವಲ್ಲಿ ಕಾರ್ಯನಿರತವಾಗಿದ್ದೇವೆ ಎಂದರು.

ಎಲ್ಲಾ ಉದ್ಯಮದವರಿಗೂ ಈ ಏರ್ ಶೋ ಒಳ್ಳೆ ಅವಕಾಶ ನೀಡಲಿದೆ. ಏರೋ ಇಂಡಿಯಾ ನಮ್ಮ ಹೆಮ್ಮೆಯ ಕಾರ್ಯಕ್ರಮ. ಮೊದಲ ಬಾರಿಗೆ ಗ್ಲೋಬಲ್ ಸಿಇಒ ರೌಂಡ್ ಟೇಬಲ್ ಕಾನ್ಫರೆನ್ಸ್ ನಡೆಯಲಿದೆ. ಇದು ಉದ್ಯಮದ ಬೆಳವಣಿಗೆಗೆ ಬಹಳ ದೊಡ್ಡ ವೇದಿಕೆ ಒದಗಿಸಲಿದೆ ಎಂದರು.

31 thoughts on “ದೇಶದ ಮೂಲೆ ಮೂಲೆಗಳಲ್ಲೂ ವಿಮಾನ ನಿಲ್ದಾಣ-ವಿಮಾನಯಾನ ಸಚಿವ

 1. ನಮ್ಮ ಕರ್ನಾಟಕ ರಾಜ್ಯಕ್ಕಿಂತ ಚಿಕ್ಕ ರಾಜ್ಯ ಕೇರಳ ಅಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 4 ಜಿಲ್ಲೆಯಲ್ಲಿ ಇದೆ.

  ಆದರೆ ನಮ್ಮ ರಾಜ್ಯದಲ್ಲಿ 2 ಅಂತರರಾಷ್ಟ್ರೀಯ ಇದ್ದರು ಅಲ್ಲಿ ಇರುವ ಕೆಲವು ಅಧಿಕಾರಿಗಳ ವರ್ತನೆ ಇಂದ ಯಾತ್ರಿಕರು ಹೋಗಲು ಹಿಂಜರಿಯುತ್ತದೆ.

  ಅದೇ ರೀತಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದರು ಸರಿಯಾದ ಚಾಲನೆ ಇನ್ನೂ ಸುಮಾಡಿಲ್ಲ…

  ಇನ್ನೂ ಯಾವ ಅಭಿವೃದ್ಧಿ ಕಾದು ನೋಡಬೇಕಾಗಿದೆ🤔🤔🤔🤔

 2. ಎ Riya Asapa ಇಲ್ಲಿ ಬಂದು ಹೇಳಿ ಎಲ್ಲಿ ಎಲ್ಲ ವಿಮಾನ ನಿಲ್ದಾಣ ಬೇಕು ಅಂತ .ಮತ್ತೆ ಸುಮ್ನೆ ರೋಡ್ ಸರಿ ಇಲ್ಲ ಅಂತ ಬೊಬ್ಬೆ ಹೊಡಿಬೇಡಿ .

 3. ತಲಪಾಡಿ ಗಡಿನಾಡು ಪ್ರದೇಶ ಇಲ್ಲಿಗೂ ಒಂದು ವಿಮಾನ ನಿಲ್ದಾಣ ಇರಲಿ
  ಅಂಚಿ ಕೇರಳಗು ಪೊವರೇ ಆಪುಂಡು ಇಂಚಿ ಕರ್ನಾಟಕ ಗೂ ಪೊವರೇ ಆಪುಂಡು ಒಂಜಿ ತೂಲೆ

 4. Shrikanth Neginal ನಿಮ್ಮೂರಿಗೆ ಬೇಕಾ ಬೇಗ ಒಂದು ಅರ್ಜಿ ಹಾಕಿ ಬಿಡಿ offer ಸೀಮಿತ ಅವಧಿಗೆ ಮಾತ್ರ.. ನೌಷಾದ್ ಬಿನ್ ಮಹಮ್ಮದ್ ನಿಮ್ಮೂರಿಗೇ ರೈಲು ಇನ್ನೂ ಬಂದಿಲ್ಲ ಅಲ್ವ ವಿಮಾನ ನಿಲ್ದಾಣ ಬೇಕಾದ್ರೆ ನೀವು ಅರ್ಜಿ ಹಾಕಿ ಬಿಡಿ

 5. ಮಗ ಮೊದಲು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವನ್ನು ಖಾಸಗಿ ಯವರಿಗೆ ಮೋದಿ ಮಾರಲು ಬಿಡ್ ಹಾಕಿಸಿದ್ದಾನೆ ಅದರಲ್ಲಿ ಮಂಗಳೂರು ವಿಮಾನ ನಿಲ್ದಾಣ ಒಂದು ಅದನ್ನು ಮೊದಲು ಸರಿಪಡಿಸು..

 6. ಯಾವ ಯಾವ ಮೂಲೆಗೆ? ಇರುವ ಮಂಗಳೂರು ನಿಲ್ದಾಣವನ್ನೇ ನಿರ್ವಹಣೆ ಮಾಡಲು ಆಗ್ತಾ ಇಲ್ಲ ನಿಮ್ಮಿಂದ..ನಾಲಾಯಕಗಳು

Leave a Reply

Your email address will not be published. Required fields are marked *

error: Content is protected !!