ಕೆಸಿಎಫ್ ಒಮಾನ್ ಸೊಹಾರ್ ಝೋನ್ ಸದಸ್ಯತ್ವ ಅಭಿಯಾನ – 2019

ಕೆಸಿಎಫ್ ಡೇ ಹಾಗೂ ಸದಸ್ಯತ್ವ ಅಭಿಯಾನ ಕ್ಯಾಂಪೈನ್ ಕಾರ್ಯಾಗಾರವು ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ಫೆಬ್ರವರಿ 15 ಶುಕ್ರವಾರರಂದು ಫಲಜ್ ನ ಮಝೀರ್ ನಿವಾಸದಲ್ಲಿ ಝೋನ್ ಸಂಘಟನಾ ಅಧ್ಯಕ್ಷರಾದ ಸಿದ್ದೀಕ್ ಮಾಂಬ್ಲಿ ಸುಳ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಫಲಜ್ ಸೆಕ್ಟರ್ ಅಧ್ಯಕ್ಷ ಸಿರಾಜುದ್ದೀನ್ ಮುಈನಿ ಕೈಕಂಬ ಇವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಐಸಿಎಫ್ ಸೊಹಾರ್ ಸೆಂಟರ್ ಅಧ್ಯಕ್ಷರಾದ ಮಹಮ್ಮದಲಿ ಸಖಾಫಿ ವಯನಾಡ್ ರವರು ಸಂಘಟನೆಯ ಉದ್ದೇಶಗಳನ್ನು ವಿವರಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿ ಸದಸ್ಯರಾದ ಇಕ್ಬಾಲ್ ಎರ್ಮಾಳ್ ರವರು ಕೆಸಿಎಫ್ ನಡೆದುಬಂದ ಹಾದಿಯನ್ನು ಸವಿಸ್ತಾರವಾಗಿ ವಿವರಿಸದರು. ಸಭೆಯಲ್ಲಿ ಸೊಹಾರ್ ಸೆಕ್ಟರ್ ಮತ್ತು ಫಲಜ್ ಸೆಕ್ಟರ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ದ್ವಿತೀಯ ಹಂತದ ಅಸ್ಸುಫ್ಫಾ ಪರೀಕ್ಷೆಯಲ್ಲಿ ತೃತೀಯ ಶ್ರೇಣಿ ಹಾಗೂ 2018 ನೇ ಸಾಲಿನ ಉತ್ತಮ ಸಂಘಟಕ ಚತುರ ಪ್ರಶಸ್ತಿಯನ್ನು ಪಡೆದ ಅಶ್ರಫ್ ಕುತ್ತಾರ್ ರವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ಪ್ರತಿಭೋತ್ಸವ 2018 ಪ್ರಶಸ್ತಿಯನ್ನು ಸೊಹಾರ್ ಝೋನ್ ಪ್ರಥಮ ಸ್ಥಾನವನ್ನು ಪಡೆಯುವಲ್ಲಿ ಕಾರಣಕರ್ತರಾದ ಸಾದಿಕ್ ಕಾಟಿಪಳ್ಳ, ಶಫೀಖ್ ಎಲಿಮಲೆ ಸುಳ್ಯ, ಫಾರೂಕ್, ಇಕ್ಬಾಲ್ ಎರ್ಮಾಳ್, ಇವರನ್ನು ಅಭಿನಂದಿಸಲಾಯಿತು.

ಸಭೆಯಲ್ಲಿ ಸದಸ್ಯತ್ವ ಅಭಿಯಾನ ನಿರ್ದೇಶಕರಾಗಿ ಇಕ್ಬಾಲ್ ಎರ್ಮಾಳ್ ಹಾಗೂ ಕನ್ವೀನರ್ ಆಗಿ ಸಾದಿಖ್ ಕಾಟಿಪಳ್ಳ ಇವರನ್ನು ಆರಿಸಲಾಯಿತು.

ಪ್ರಸ್ತುತ ಕಾರ್ಯಕ್ರಮವನ್ನು ಆಶ್ರಫ್ ಕುತ್ತಾರ್ ಸ್ವಾಗತಿಸಿ ಕೊನೆಗೆ ಮುನೀರ್ ಕುತ್ತಾರ್ ರವರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!