janadhvani

Kannada Online News Paper

ಕೆ.ಸಿ.ಎಫ್: ದುಬೈ ಮಾಯಾನಗರಿಯಲ್ಲಿ ಹರಡಿದ ಕಿಡಿ!!!(ಭಾಗ-2)

✍🏻Nizzu4ever
ಉರುವಾಲು ಪದವು
niznam4ever@gmail.com

ಭಾಗ-1

ಭಾಗ-2

ಕರ್ನಾಟಕದ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರ ಕರ್ನಾಟಕ ಯಾತ್ರೆಯ ಯಶಸ್ವಿನ ರೂವಾರಿಯಾಗಿ ಕೆ.ಸಿ.ಎಫ್ ಗುರುತಿಸಿಕೊಂಡಿತು. ಕರ್ನಾಟಕ ಯಾತ್ರೆಯ ಪೂರ್ವಭಾವಿಯಾಗಿ ದುಬೈಯಲ್ಲಿ ನಡೆದ ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿದ ಜನಸಾಗರವೇ ನೆರೆದಿತ್ತು. ಸಾಮಾಜಿಕ ಸೇವೆಗಳ ಗುರಿಯಾಗಿಟ್ಟುಕೊಂಡು ಆಂಬುಲೆನ್ಸ್ ಸೇವೆಗಳನ್ನು ಲೋಕಾರ್ಪಣೆ ಮಾಡಿತು. ದಕ್ಷಿಣ ಕನ್ನಡ ಪೆರ್ನೆ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಸ್ಪೋಟದಿಂದ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದ ಕುಟುಂಬಕ್ಕೆ ಕೆ.ಸಿ.ಎಫ್ ವತಿಯಿಂದ ಸುಂದರವಾದ ಆಧುನಿಕ ಸಜ್ಜೀಕರಣದೊಂದಿಗೆ ಮನೆಯ ಕೀಯನ್ನು ಹಸ್ತಾಂತರಿಸಲಾಯಿತು. ಯಾತ್ರೆಯ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಸೀದಿ, ಮದ್ರಸ, ಮನೆ, ಕೊಳವೆ ಬಾವಿ ಮುಂತಾದ ಅಗತ್ಯ ಸೇವೆಗಳ ಮೂಲಕ ಸಂಘಟನೆಯ ಸಾಮಾಜಿಕ ಕಾಳಜಿಯನ್ನು ಪ್ರದರ್ಶಿಸಿತು
ಮಾಯಾನಗರಿ ದುಬೈಯಲ್ಲಿ ಜನ್ಮ ತಾಳಿದ ಕೆ.ಸಿ.ಎಫ್ ಯು.ಎ.ಇ ಯಾದ್ಯಂತ ಮಿಂಚಿನ ಸಂಚಾರವನ್ನು ಸೃಷ್ಟಿಸಿ 6 ಝೋನ್, 27 ಸೆಕ್ಟರ್ ಮತ್ತು 60 ಯುನಿಟ್ ಗಳು ಕಾರ್ಯರೂಪಕ್ಕೆ ಬಂತು. ಪ್ರತಿಯೊಂದು ಝೋನ್, ಸೆಕ್ಟರ್, ಯುನಿಟ್ ಗಳಲ್ಲೂ ಆಡಳಿತ ವಿಭಾಗ, ಶಿಕ್ಷಣ ವಿಭಾಗ, ಪಬ್ಲಿಕೇಷನ್ ವಿಭಾಗ, ಸಂಘಟನಾ ವಿಭಾಗ, ಕಚೇರಿ ವಿಭಾಗ, ಸಾಂತ್ವನ ಮತ್ತು ರಿಲೀಫ್ ವಿಭಾಗ, ದಿನದ 24 ಗಂಟೆಗಳ ಕಾಲವು ಸೇವೆಗೆ ಲಭ್ಯವಿರುವ ಕೆ.ಸಿ.ಎಫ್ ಸನ್ನದ್ಧ ಸಂಘ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ವಾಂಸರು, ಉದ್ಯಮಿಗಳು,ಸಾಧಕರು,ಪದವೀಧರರು, ಸಾಮಾನ್ಯ ನೌಕರರು ಸೇರಿ 3500 ಕ್ಕೂ ಮಿಕ್ಕ ಕಾರ್ಯಕರತರನ್ನು ಯು.ಎ.ಇ ಕೆ.ಸಿ.ಎಫ್ ತನ್ನ ಮಡಿಲಲ್ಲಿರಿಸಿಕೊಂಡು ಮುನ್ನಡೆಯುತ್ತಿದೆ.
ಶಿಕ್ಷಣ ವಿಭಾಗದ ಅಧೀನದಲ್ಲಿ ಎಲ್ಲ ಯೂನಿಟ್ ಗಳಲ್ಲೂ ಅಸ್ಸುಫ್ಫಾ ಮದ್ರಸ ಶಿಕ್ಷಣ ಕಾರ್ಯಾಚರಿಸುತ್ತಿದ್ದು 600 ಕ್ಕೂ ಮಿಕ್ಕ ಪ್ರವಾಸಿಗಳು ತನ್ನ ಮದ್ರಸ ಜೀವನದ ಕುರಿತು ಮೆಲುಕು ಹಾಕುತ್ತಿದ್ದಾರೆ. ಊರಿನ ಮಾದರಿಯಲ್ಲಿ ಅಸ್ಸುಫ್ಫಾ ಕಾರ್ಯನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಿಗೆ ನೋಟ್ಸ್ ನೀಡಿ ನುರಿತ ವಿದ್ವಾಂಸರಿಂದ ಕುರಾನ್, ತಜ್ವೀದ್, ಅಕಾಈದ್, ತಾರೀಖ್, ಅಖ್ಲಾಕ್ ಫಿಖ್ಹ್ ಮೊದಲಾದ ವಿಷಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಇದರಿಂದ ಇಸ್ಲಾಮಿನ ಬಾಲಪಾಠ ಗೊತ್ತಿಲ್ಲದ ಅದೆಷ್ಟೋ ಯುವಕರಿಗೆ ಕಡ್ಡಾಯ ಕರ್ಮಗಳನ್ನು ಮತ್ತು ಇಸ್ಲಾಮಿನ ಪ್ರಾಥಮಿಕ ಶಿಕ್ಷಣವನ್ನು ಕಲಿಸಿಕೊಡುವಲ್ಲಿ ಸಫಲವಾಯಿತು.
ಕಚೇರಿ ವಿಭಾಗದ ವತಿಯಿಂದ ಯು.ಎ.ಇ ನ್ಯಾಷನಲ್ ಡೇ, ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮೊದಲಾದ ಕಾರ್ಯಕ್ರಮಗಳು ಯು.ಎ.ಇ ಯಾದ್ಯಂತ ಪ್ರತೀ ಝೋನ್ ಗಳಲ್ಲೂ ಪ್ರಭಂದ, ಭಾಷಣ ಸ್ಪರ್ಧೆಗಳನ್ನು ನಡೆಸುವ ಮೂಲಕ ನಡೆಸಿಕೊಂಡು ಬರುತ್ತಿದೆ.
ಪ್ರತೀ ಝೋನ್ ಗಳಲ್ಲೂ ರಕ್ತದಾನ ಶಿಬಿರ,ಈದ್ ಮಿಲಾದ್ ಪ್ರತಿಭೋತ್ಸವ, ಸಂಘಟನಾ ತರಬೇತಿ, ಆಧ್ಯಾತ್ಮಿಕ ಮಜ್ಲಿಸ್ ಗಳು, ವ್ಯಕ್ತಿತ್ವ ವಿಕಸನ ತರಗತಿಗಳು, ಮೊದಲಾದ ವಿಶೇಷ ಕಾರ್ಯಕ್ರಮಗಳ ಮೂಲಕ ಕಾರ್ಯಕರ್ತರನ್ನು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸುತ್ತಿದೆ. ಕೆ.ಸಿ.ಎಫ್ ಐದನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡಿಗ ಪ್ರವಾಸೀ ಕುಟುಂಬಗಳನ್ನು ಒಗ್ಗೂಡಿಸುವ ಮೊದಲ ಪ್ರಯತ್ನದ ಫಲವಾಗಿ ನಡೆಸಿದ ಫ್ಯಾಮಿಲಿ ಫೆಸ್ಟ್ 2018 ಕಾರ್ಯಕ್ರಮವು ಜನ್ನಮನ್ನಣೆಗೆ ಸಾಕ್ಷಿಯಾಯಿತು. 500 ಮಿಕ್ಕ ಕುಟುಂಬಗಳು ಈವೆಂಟ್ ನಲ್ಲಿ ಭಾಗಿಯಾಗಿದ್ದರು.
ರಾಜ್ಯದ ಹಲವಾರು ರಾಜಕೀಯ ಧಾರ್ಮಿಕ ನಾಯಕರನ್ನು ಕರೆಸಿ ರಾಜ್ಯದ ಅಭಿವೃದ್ಧಿಯಲ್ಲಿ ಸಂಘಟನೆಯ ಪಾತ್ರದ ಬಗ್ಗೆ ಮನವರಿಕೆ ಮಾಡಿ ಕೊಟ್ಟು ಸನ್ಮಾನಿಸಿತ್ತು. ಪಬ್ಲಿಕೇಷನ್ ವಿಭಾಗದಿಂದ ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಕಾಗೋಡ್ ತಿಮ್ಮಪ್ಪರವರ ಮೂಲಕ ಗಲ್ಫ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅಲ್ಲಿನ ಸರಕಾರದ ಮಾನ್ಯತೆಯೊಂದಿಗೆ ಗಲ್ಫ್ ಇಶಾರ ಎಂಬ ಕನ್ನಡ ಮಾಸಿಕವೊಂದನ್ನು ಬಿಡುಗಡೆ ಮಾಡಲಾಯಿತು.ಇದರೊಂದಿಗೆ ಪ್ರಪ್ರಥಮವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಪತ್ರಿಕೆಯನ್ನು ಹೊರತಂದ ಹೆಗ್ಗಳಿಕೆಯನ್ನೂ ಕೆ.ಸಿ.ಎಫ್ ತನ್ನದಾಗಿಸಿಕೊಂಡಿತು. ಯು.ಎ.ಇ ಯ ವಿವಿಧ ಎಮಿರೇಟ್ಸ್ ಗಳಲ್ಲಿರುವ ಕನ್ನಡಿಗರ ಓದುವ ಹಂಬಲವನ್ನು ನೀಗಿಸುವುದರೊಂದಿಗೆ ಸಕಾಲಿಕ, ವೈಜ್ಞಾನಿಕ, ಸಾಮಾಜಿಕ, ಶೈಕ್ಷಣಿಕ ಬರಹಗಳಿಂದ ಅನಿವಾಸಿ ಕನ್ನಡಿಗರ ಮನೆ ಬಾಗಿಲಿಗೆ ತಲುಪುತ್ತಿದೆ.

ಮುಂದುವರಿಯುವುದು…

error: Content is protected !! Not allowed copy content from janadhvani.com