janadhvani

Kannada Online News Paper

ಬಜೆಟ್: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಲಭಿಸಿದ್ದೇನು?

ಬೆಂಗಳೂರು, (ಫೆ.8): ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್‌ನ್ನು ಶುಕ್ರವಾರ ಮಂಡಿಸಿದ್ದಾರೆ. ಅದರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು? ಇದರ ಡಿಟೇಲ್ಸ್ ಇಲ್ಲಿದೆ.

ಪದವಿಪೂರ್ವ ವಿದ್ಯಾರ್ಥಿಗಳ ವೃತ್ತಿಪರ ಚಟುವಟಿಕೆಗಳಿಗೆ 2 ಕೋಟಿ ರೂಪಾಯಿಗಳ ಘೋಷಣೆ. ಸರ್ಕಾರಿ ಶಾಲೆಗಳು ಇಂಗ್ಲಿಷ್ ಮೀಡಿಯಂ ಕಡ್ಡಾಯ, ಮಲೆನಾಡು ಶಾಲಾ ವಿದ್ಯಾರ್ಥಿಗಳಿಗೆ ಛತ್ರಿ, ರೈನ್ಕೋಟ್ ಭಾಗ್ಯ ,ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸುಭದ್ರ ಶಾಲೆ, ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಪಬ್ಲಿಕ್ ಸ್ಕೂಲ್, ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಇತ್ಯಾದಿಗಳನ್ನು ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಘೋಷಿಸಲಾಗಿದೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಕಲಿಕೆ ಗುಣಮಟ್ಟ ಹೆಚ್ಚಿಸಲು ಕ್ರಮ.1500 ಹೊಸ ಶಾಲಾ ಕೊಠಡಿ ನಿರ್ಮಾಣ, 5000 ಶಾಲಾ ಕೊಠಡಿ ಉನ್ನತೀಕರಣ.1000 ಸಾಲೆಗಳಿಗೆ ಕಲಿಕಾ ಉಪಕರಣ ವಿತರಣೆ.ಶಾಲಾ ಕಟ್ಟಡ ನಿರ್ವಹಣಗೆ ಒಬ್ಬ ಎಸ್ಟೇಟ್ ಅಧಿಕಾರಿ ನೇಮಕ.ಶಾಲೆಗಳ ರಿಪೋರ್ಟ್ ಕಾರ್ಡ್ ತಯಾರಿ, ಶಾಲೆಗಳ ಗುಣಮಟ್ಟ ಹೆಚ್ಚಳಕ್ಕೆ ಕ್ರಮ.ಕಲಿಕೆಯ ಫಲಿತಾಂಶ ಸುಧಾರಣೆಗೆ ಆಧ್ಯತೆ.ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ.ಮುಂದಿನ 4 ವರ್ಷದಲ್ಲಿ ಹೋಬಳಿ ಕೇಂದ್ರಗಳಲ್ಲಿ ಹೊಸ ಶಾಲೆಗಳ ಸ್ಥಾಪನೆ.ಪೂರ್ವ ಪ್ರಾಥಮಿಕ ಶಾಲೆಯಿಂದ 12ನೇ ತರಗತಿವರೆಗೂ ಒಂದೇ ಸೂರಡಿ ಶಿಕ್ಷಣ.ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಪ್ರತ್ಯೇಕ ಸಂಘಟನೆ, ಮಾರ್ಗಸೂಚಿ ನಿಗದಿ.ಭಾಷಾ ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭ.ಸರ್ಕಾರಿ ಶಾಲಾ ಶಿಕ್ಷಕರಿಗೆ ಭಾಷಾ ವಿಷಯದಲ್ಲಿ ನಿರಂತರ ತರಭೇತಿ.ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಲಿ ಯೋಜನೆ ಆರಂಭ.ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ.ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಸ್ಟೇಫಂಡ್.SSLC ಮೌಲ್ಯಮಾಪನ ಕೇಂದ್ರಗಳ ಡಿಜಿಟಲೀಕರಣಕ್ಕೆ 1 ಕೋಟಿ ರೂ ಅನುದಾನ.ಪದವಿಪೂರ್ವ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ತರಬೇತಿಗೆ 2 ಕೋಟಿ ಅನುದಾನ.ಕರ್ನಾಟಕ ಪರಿಕ್ಷಾ ಪ್ರಾಧಿಕಾರ ನಡೆಸುವ CET ಪರೀಕ್ಷೆ ಇನ್ನು ಆನ್ಲೈನ್.ವಿದ್ಯಾರ್ಥಿಗಳಿಗೆ ಇನ್ನು ಡಿಜಿಟಲ್ ಅಂಕಪಟ್ಟಿಗೆ 2 ಕೋಟಿ.ಪದವಿ ಪ್ರಮಾಣಪತ್ರ ಅನ್ಲೈನ್ ಮೂಲಕ ದೃಢೀಕರಣ ಹಾಗೂ ವಿತರಣೆ.ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮರುವಿಂಗಡನೆ.ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಗಳಲ್ಲಿ JOC ಆರಂಭ.ಉದ್ಯೋಗ ಆಧಾರಿತ ಶಿಕ್ಷಣಕ್ಕೆ ತರಬೇತಿ ಕೇಂದ್ರ ಆರಂಭ.ಸರ್ಕಾರಿ ಬೋಧಕರ ಸಂಬಳ ಹೆಚ್ಚಳ.ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಭತ್ಯಗಳ ಪರಿಷ್ಕರಣೆ.ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಲ್ಯಾಬ್ಗೆ 10 ಕೋಟಿ ಅನುದಾನ.

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕೊಡುಗೆ

* sc-st ಮತ್ತು obc ವರ್ಗದ ವಿದ್ಯಾರ್ಥಿಗಳಿಗೆ 30 ಸಂಯುಕ್ತ ವಿದ್ಯಾರ್ಥಿ ನಿಲಯಗಳ ಪ್ರಾರಂಭ
* ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 100 ಶಾಲೆಗಳನ್ನು ಪಿಯುಸಿ ಕೋರ್ಸ್ಗಳೊಂದಿಗೆ ಮೇಲ್ದರ್ಜೆಗೆ
* ಬೆಂಗಳೂರು ನಗರದಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪಿಸಲು 20 ಕೋಟಿ ರೂ.
* 4 ಮೊರಾರ್ಜಿ ಕಾಲೇಜುಗಳಲ್ಲಿ ಐಐಟಿ/ ನೀಟ್ ತರಬೇತಿ ಕೇಂದ್ರ ಆರಂಭಿಸಲು 4 ಕೋಟಿ ಅನುದಾನ
* ಹಿಂದುಳಿದ ವರ್ಗಗಳ 100 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಕ್ಕೆ 40 ಕೋಟಿ ರೂ.
* ಅಲೆಮಾರಿ ಅಭಿವೃದ್ದಿ ನಿಗಮಕ್ಕೆ 20 ಕೋಟಿ ಅನುದಾನ
* ಅಲೆಮಾರಿ ಆಚಾರ ವಿಚಾರಗಳ ಅಧ್ಯಯನಕ್ಕೆ 11 ಕೋಟಿ ರೂ.

error: Content is protected !! Not allowed copy content from janadhvani.com