ಸೌದಿ:ಟೆಲಿಕಾಂ ಮತ್ತು ಐಟಿ ವಲಯದಲ್ಲೂ ದೇಶೀಕರಣ- ತರಬೇತಿ ಆರಂಭ

ರಿಯಾದ್: ಸೌದಿ ಅರೇಬಿಯಾದಲ್ಲಿ ಟೆಲಿಕಾಂ ಮತ್ತು ಐಟಿ ವಲಯದಲ್ಲಿ ಸ್ವದೇಶೀಕರಣದ ಅನುಷ್ಠಾನಕ್ಕೆ ತರಬೇತಿಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯನ್ನು ವಿವಿಧ ಸಚಿವಾಲಯಗಳು ಮತ್ತು ವಾಣಿಜ್ಯ ಮಂಡಳಿಗಳು ಜಂಟಿಯಾಗಿ ಕಾರ್ಯಗತಗೊಳಿಸಲಿದೆ.

ಟೆಲಿಕಾಂ, ಐಟಿ ವಲಯದ ಉದ್ಯೋಗಳು ವಿದೇಶಿಯರ ಏಕಸ್ವಾಮ್ಯವಾಗಿದೆ. ಆದರೆ ಮುಂದಿನ ಎರಡು ವರ್ಷಗಳಲ್ಲಿ 15,000 ಸ್ಥಳೀಯರು ಈ ವಲಯದಲ್ಲಿ ಉದ್ಯೋಗಗಳನ್ನು ಪಡೆಯುವಂತೆ ಯೋಜನೆ ರೂಪಿಸಲಾಗುತ್ತಿದೆ.ಇದಕ್ಕಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ನಿಧಿಯಿಂದ ಆರ್ಥಿಕ ನೆರವು ನೀಡಲಾಗುತ್ತದೆ. ನೆಟ್ವರ್ಕಿಂಗ್, ಸಿಸ್ಟಮ್ ಅನಲಿಸ್ಟ್ , ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್, ಸೈಬರ್ ಸೆಕ್ಯೂರಿಟಿ, ಪ್ರೊಗ್ರಾಮಿಂಗ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ಮೊದಲಾದವುಗಳಲ್ಲಿ ಹಲವಾರು ಉದ್ಯೋಗಾವಕಾಶಗಳಿವೆ.ಇಂತಹ ಪೋಸ್ಟ್ ಗಳಲ್ಲಿ ತರಬೇತಿ ಪಡೆದ ದೇಶೀಯರನ್ನು ನೇಮಕಗೊಳಿಸಲಾಗುತ್ತದೆ.

ಟೆಲಿಕಾಂ ಮತ್ತು ಐಟಿ ವಲಯಗಳಲ್ಲಿ ಸ್ವದೇಶೀಯರ ಉಪಸ್ಥಿತಿಯು 43 ಶೇ. ಆಗಿ ಪರಿವರ್ತಿಸಲು ಸಾಧ್ಯವಾಗಿದ್ದು,ನ್ಯಾಷನಲ್ ಕನ್ವರ್ಷನ್ ಸ್ಕೀಮ್‌ನ ಭಾಗವಾಗಿ ಜಾರಿಗೊಳಿಸಲಾದ ವಿವಿಧ ಕಾರ್ಯಕ್ರಮಗಳ ಮೂಲಕ ಮೂಲ ನಿವಾಸಿಗಳಿಗೆ ಈ ವಲಯದಲ್ಲಿ ಉದ್ಯೋಗಗಳನ್ನು ಕಂಡುಕೊಳ್ಳಲು ಸಹಾಯಕವಾಗಿದೆ.
ಆದ್ದರಿಂದ, ಹೊಸ ಯೋಜನೆ ಟೆಲಿಕಾಂ ಮತ್ತು ಐಟಿ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳ್ಳಲಿದೆ ಎಂದು ಟೆಲಿಕಾಂ, ಐಟಿ ಸಚಿವ ಇಂಜಿನಿಯರ್ ಅಬ್ದುಲ್ಲಾ ಅಲ್-ಸವಾಹ ಹೇಳಿದರು. ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಇಲಾಖೆ ಸಚಿವ ಇಂಜಿನಿಯರ್ ಅಹ್ಮದ್ ಅಲ್-ಜಾಹ್ರಿ ಸಮೇತ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!