ಅಬುಧಾಬಿ: ಏರ್ ಇಂಡಿಯಾ ಎಕ್ಸ್ ಪ್ರೆಸ್ ತನ್ನ ಟಿಕೆಟ್ ದರದಲ್ಲಿ ಭಾರೀ ರಿಯಾಯಿತಿಗಳನ್ನು ಘೋಷಿಸಿದೆ.
ಯುಎಇನಿಂದ ಭಾರತಕ್ಕೆ ವಿವಿಧ ಶ್ರೇಣಿಯ ಸೇವೆಗಳಿಗೆ ಪರಿಮಿತ ಕಾಲದವರೆಗೆ ದರದಲ್ಲಿ ರಿಯಾಯಿತಿಯನ್ನು ಘೋಷಿಸಲಾಗಿದೆ.
ಆ ಮೂಲಕ ದುಬೈನಿಂದ ಮಂಗಳೂರು, ಮುಂಬೈ, ದೆಹಲಿ,ಪುಣೆ ಮತ್ತು ಕೇರಳದ ನಾಲ್ಕು ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವವರು ರಿಯಾಯಿತಿ ದರವನ್ನು ಪಡೆಯಬಹುದಾಗಿದೆ.
ಕೇರಳಕ್ಕೆ ಪಾವತಿಸಬೇಕಾದ ಅತೀ ಕಡಿಮೆ ದರ 260 ದಿರ್ಹಂ ಆಗಿದೆ. ಪ್ರವಾಸಿಗರು ಈ ದರದಲ್ಲಿ ಕೋಝಿಕ್ಕೋಡ್, ಕೊಚ್ಚಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಿಗೆ ಪ್ರಯಾಣ ಬೆಳೆಸಬಹುದಾಗಿದೆ.
399 ದಿರ್ಹಂ ದರವನ್ನು ಶಾರ್ಜಾದಿಂದ ಕಣ್ಣೂರ್‌ಗೆ ನಿಗದಿಪಡಿಸಲಾಗಿದೆ.255 ದಿರ್ಹಂ ಕನಿಷ್ಠ ದರದಲ್ಲಿ ಷಾರ್ಜಾದಿಂದ ಮುಂಬೈಗೆ ಪ್ರಯಾಣಿಸಬಹುದಾಗಿದೆ .
ಟಿಕೆಟ್ಗಳನ್ನು ಈ ತಿಂಗಳ 15 ರವರೆಗೆ ರಿಯಾಯಿತಿ ದರದಲ್ಲಿ ಬುಕ್ ಮಾಡಬಹುದು. ಇದು ಜನವರಿ 15 ರಿಂದ 26 ರವರೆಗೆ ಅನ್ವಯವಾಗುತ್ತದೆ.