janadhvani

Kannada Online News Paper

KCF ಪ್ರತಿಭೋತ್ಸವಕ್ಕೆ ಪ್ರೌಢ ಸಮಾಪ್ತಿ

ದಮ್ಮಾಮ್ : ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ದಮ್ಮಾಮ್ ಝೋನ್ ಪ್ರತಿಭೋತ್ಸವ’23 ಕ್ಕೆ ದಮ್ಮಾಮ್ ಸೈಹಾತ್ತಿನಲ್ಲಿ ಪ್ರೌಢ ಸಮಾಪ್ತಿ.

“ಅರಳುವ ಕನಸು ಉತ್ಸಾಹದ ಬೆಳಕು” ಎಂಬ ಘೋಷ ವಾಕ್ಯದೊಂದಿಗೆ ಯೂನಿಟ್/ಸೆಕ್ಟರುಗಳಲ್ಲಿ ಪ್ರಾರಂಭ ಗೊಂಡ ಪ್ರತಿಭೋತ್ಸವ ಕಾರ್ಯಕ್ರಮವು ದಮ್ಮಾಮ್ ಝೋನ್ ಮಟ್ಟದಲ್ಲಿ ಪ್ರೌಢ ಸಮಾಪ್ತಿ ಗೊಂಡಿತು.

ಮೇ’19 ಶುಕ್ರವಾರ ಜುಮುಅ ನಂತರ ಸೈಹಾತ್ತಿನಲ್ಲಿ ಸ್ವಾಗತ ಸಮಿತಿ ಚೆಯರ್ಮೇನ್ ಆಬಿದ್ ಕೊಡಗು’ ರವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭ ಗೊಂಡ ಕಾರ್ಯಕ್ರಮದಲ್ಲಿ ಝೋನ್ ಅಧ್ಯಕ್ಷರಾದ ಫಾರೂಖ್ ಮುಸ್ಲಿಯಾರ್ ಕುಪ್ಪಟ್ಪಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಅಬ್ದುಲ್ ರಹೀಂ ಸಖಾಫಿ ಉದ್ಘಾಟಿಸಿದರು…

ನಂತರ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ದಮ್ಮಾಂ ಸೌತ್, ದಮ್ಮಾಮ್ ನಾರ್ತ್, ಅಲ್ ಖೋಬಾರ್, ಅಲ್ ಹಸ್ಸಾ ಸೆಕ್ಟರುಗಳಿಂದ ಝೋನ್ ಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಾತಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು..

ಉತ್ತಮ ಪೈಪೋಟಿ ನೀಡುವ ಮೂಲಕ ಎಲ್ಲಾ ಸೆಕ್ಟರುಗಳು ತಮ್ಮ ಕಲಾ ಮೂಲ್ಯವನ್ನು ಪ್ರದರ್ಶಿಸಿ ಕೊನೆಯಲ್ಲಿ ನೋರ್ತ್ ಸೆಕ್ಟರ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು..

ರಾಷ್ಟ್ರೀಯ ಪ್ರತಿಭೋತ್ಸವ ನಿರ್ವಹಣಾ ಸಮಿತಿ ಸದಸ್ಯ ನೌಶಾದ್ ತಲಪ್ಪಾಡಿ ಸ್ಪರ್ಧಾ ಕಾರ್ಯಕ್ರಮಗಳಿಗೆ ಚುಕ್ಕಾಣಿ ಹಿಡಿದು ಕಾರ್ಯಕ್ರಮವನ್ನು ನಿರೂಪಿಸಿದರು..

ಸ್ಪರ್ಧಾ ಕಾರ್ಯಕ್ರಮಗಳ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಝೋನ್ ಅಧ್ಯಕ್ಷರಾದ ಫಾರೂಖ್ ಮುಸ್ಲಿಯಾರ್ ಕುಪ್ಪಟ್ಪಿ ಅಧ್ಯಕ್ಷತೆ ವಹಿಸಿದರು..

ಝೋನ್ ಪ್ರಧಾನ ಕಾರ್ಯದರ್ಶಿ ತಮಿಮ್ ಕೂಳೂರು ಪ್ರಾಸ್ತಾವಿಕ ಭಾಷಣ ಮಾಡಿ
ರಾಷ್ಟ್ರೀಯ ಸಂಘಟನಾ ಇಲಾಖೆ ಅಧ್ಯಕ್ಷರಾದ ರಷೀದ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಬೂಬಕ್ಕರ್ ಹಾಜಿ ರೈಸ್ಕೋ (KCF IC)
N.S ಅಬ್ದುಲ್ಲ ಹಾಜಿ (KCF IC) ರಾಷ್ಟ್ರೀಯ ಸಮಿತಿ ಸದಸ್ಯರುಗಳಾದ ಫೈಸಲ್ ಕೆ’ಪುರ ಮೊಹಮ್ಮದ್ ಮಲೆಬೆಟ್ಪು. KCF ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರ್, ರಿಯಾದ್ ಝೋನ್ ನೇತಾರರಾದ ಇಲ್ಯಾಸ್ ಲತೀಫಿ, ಇಬ್ರಾಹಿಂ ತಲಪ್ಪಾಡಿ ಅಶ್ರಫ್ ಕೆ.ಎಂ.ಎಸ್
ಅಬ್ಬಾಸ್ ತೆನ್ನಲ (ಪ್ರಧಾನ ಕಾರ್ಯದರ್ಶಿ ICF ದಮ್ಮಾಮ್ ಸೆಂಟ್ರೆಲ್)
ಅನ್ವರ್ ಸ್ವಾದಿಖ್ (ಪ್ರಧಾನ ಕಾರ್ಯದರ್ಶಿ RSC ದಮ್ಮಾಮ್ ಝೋನ್)
ಝೈನುದ್ದೀನ್ ಅಹ್ಸನಿ (ICF ದಾಯಿ)
ಹಂಸ ಮಲಪ್ಪುರಂ (ICF ಸೆಂಟ್ರಲ್ ) ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇಬ್ರಾಹೀಂ ಚೋಕಾ ವಂದನಾರ್ಪಣೆ ನಿರ್ವಹಿಸಿದರು.

error: Content is protected !! Not allowed copy content from janadhvani.com