janadhvani

Kannada Online News Paper

ಶರಣ್ ದ್ವೇಷ ಭಾಷಣ: ಮುಸ್ಲಿಮ್ ಒಕ್ಕೂಟ ನಿಯೋಗ ಆಯುಕ್ತರ ಭೇಟಿ-ದೂರು ದಾಖಲು

ಮಂಗಳೂರು: ಇತ್ತೀಚೆಗೆ ದ.ಕ.ಜಿಲ್ಲೆಯಲ್ಲಿ ನಡೆದ ಅಮಾಯಕ ಮುಸ್ಲಿಂ ಯುವಕರ ಹತ್ಯೆಯನ್ನು ಸಮರ್ಥಿಸಿ, ಪ್ರಚೋದನಕಾರಿ ಭಾಷಣ ಮಾಡಿದ ಶರಣ್ ಪಂಪ್ವೆಲ್ ವಿರುದ್ಧ ಮುಸ್ಲಿಮ್ ನಿಯೋಗದಿಂದ ದೂರು ದಾಖಲು.

ಇತ್ತೀಚೆಗೆ ಶರಣ್ ಪಂಪ್ವೆಲ್, ಸಭೆ ಒಂದರಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿ ಮುಸ್ಲಿಮ್ ಸಮುದಾಯದ ಹಲ್ಲೆ ಇತ್ಯಾದಿಗಳನ್ನು ಸಮರ್ಥಿಸಿ ಕೊಂಡಿದ್ದು, ಸಂಭಾವ್ಯ ಅಹಿತಕರ ಪರಿಣಾಮ ಸೃಷ್ಟಿಯಾಗುವ ಬಗ್ಗೆ ಇಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ನೇತೃತ್ವದ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಮತ್ತು ದೂರು ಸಲ್ಲಿಸಿತು.

ನಿಯೋಗದಲ್ಲಿ ಸದಸ್ಯರಾದ ಅಬ್ದುಲ್ ಜಲೀಲ್ (ಅದ್ದು )ಕೃಷ್ಣಾಪುರ , ಕರ್ನಾಟಕ ಮುಸ್ಲಿಮ್ ಜಮಾಅತ್ ರಾಜ್ಯ ನಾಯಕರಾದ ಅಶ್ರಫ್ ಕಿನಾರ, ಗಡಿನಾಡು ವಕ್ತಾರ ಸಿದ್ದೀಖ್ ತಲಪಾಡಿ, ವಕೀಲರಾದ ಸರ್ಫ್ರಾಜ್, ಸಾಮಾಜಿಕ ಕಾರ್ಯಕರ್ತ ಸೋಶಿಯಲ್ ಫಾರೂಕ್, ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಅಧ್ಯಕ್ಷರಾದ ಯಾಸೀನ್ ಕುದ್ರೋಳಿ, ಸಿಎಂ ಮುಸ್ತಫಾ, ಹಬೀಬುಲ್ಲಾ ಕಣ್ಣೂರು (ಕೆಪಿಸಿಸಿ ), ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್, ಮೊಹಮ್ಮದ್ ಸಾಲಿಹ್ ಬಜಪೆ, ಸಬ್ಬೀರ್ ತಲಪಾಡಿ ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com