janadhvani

Kannada Online News Paper

ಸೌದಿ ಅರೇಬಿಯಾದ ಹೊಸ ವಿಮಾನಯಾನ ಸಂಸ್ಥೆ ‘ರಿಯಾ’

ಸೌದಿಯಾ ಏರ್‌ಲೈನ್ಸ್ ನಂತರ 'ರಿಯಾ' ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಲಿದೆ

ರಿಯಾದ್: ವಾಯುಯಾನ ಉದ್ಯಮದಲ್ಲಿ ಭಾರಿ ಮುನ್ನಡೆ ಸಾಧಿಸುವ ಗುರಿ ಹೊಂದಿರುವ ಸೌದಿ ಅರೇಬಿಯಾದ ಹೊಸ ವಿಮಾನಯಾನ ಸಂಸ್ಥೆಗೆ ‘ರಿಯಾ’ ಎಂದು ಹೆಸರಿಡಲಾಗುವುದು ಎಂದು ವಿಮಾನಯಾನ ಮಾಧ್ಯಮ ವರದಿ ಮಾಡಿದೆ. ಸೌದಿಯಾ ಏರ್‌ಲೈನ್ಸ್ ನಂತರ ‘ರಿಯಾ’ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಲಿದೆ ಎಂದು ವರದಿಯಾಗಿದೆ.

ಹನ್ನೆರಡು ತಿಂಗಳ ಹಿಂದೆ ಸೌದಿ ಅರೇಬಿಯಾ ಸಾರ್ವಜನಿಕ ಹೂಡಿಕೆ ನಿಧಿಯ ಸಹಾಯದಿಂದ ಹೊಸ ವಿಮಾನಯಾನ ಕಂಪನಿಯನ್ನು ಪ್ರಾರಂಭಿಸುವ ಯೋಜನೆಯನ್ನು ಪ್ರಾರಂಭಿಸಿತು. ಆದರೆ ಇನ್ನೂ ಯಾವುದೇ ಹೆಸರು ಅಥವಾ ವಿವರಗಳನ್ನು ಬಿಡುಗಡೆ ಮಾಡಲಾಗಿರಲಿಲ್ಲ. ಕೆಲವು ಹಣಕಾಸು ಮಾಧ್ಯಮಗಳು ಮತ್ತು ಏರ್‌ಲೈನ್ ಉದ್ಯಮದ ಪೋರ್ಟಲ್‌ಗಳು ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಹೊಸ ಕಂಪನಿಯ ಹೆಸರು ‘RIA’ ಆಗಿರಲಿದೆ.

ರಿಯಾ ರಿಯಾದ್ ಮೂಲದ ಸೌದಿಯ ಎರಡನೇ ಅಧಿಕೃತ ವಿಮಾನಯಾನ ಸಂಸ್ಥೆಯಾಗಲಿದೆ.ಸೌದಿ ಅರೇಬಿಯಾದಲ್ಲಿ ಪ್ರಸ್ತುತ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಸೌದಿಯಾವು ಜಿದ್ದಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಸೌದಿಯ ಹೊಸ ಅಭಿವೃದ್ಧಿ ಯೋಜನೆಯಾದ ‘ವಿಷನ್ 2030’ ಭಾಗವಾಗಿ, ಈ ಕಂಪನಿಗೆ ಮುಂದಿನ 8 ವರ್ಷಕ್ಕೆ 100 ಬಿಲಿಯನ್ ರಿಯಾಲ್ ಡಾಲರ್‌ಗಳನ್ನು ವಿನಿಯೋಗಿಸಲಾಗುತ್ತದೆ.

ಸೌದಿ ಅರೇಬಿಯಾ 2030 ರ ವೇಳೆಗೆ 30 ಬಿಲಿಯನ್ ಪ್ರಯಾಣಿಕರನ್ನು ತಲುಪುವ ಗುರಿ ಹೊಂದಿದೆ. ಆದ್ದರಿಂದ, RIA ವಿಮಾನಗಳು ವಿವಿಧ ದೇಶಗಳ 150 ವಿಮಾನ ನಿಲ್ದಾಣಗಳಿಗೆ ಕಾರ್ಯನಿರ್ವಹಿಸಲಿದೆ. ಮುಂಬರುವ ದಿನಗಳಲ್ಲಿ, ರಿಯಾ ‘RIA’ ಮಧ್ಯಪ್ರಾಚ್ಯದಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಯಾಗಲಿದೆ. ರಿಯಾ ಹೊಸ ವಿಮಾನಗಳಿಗೆ ಆರ್ಡರ್ ಮಾಡಿರುವುದಾಗಿ ವರದಿಗಳಿವೆ.

error: Content is protected !! Not allowed copy content from janadhvani.com