janadhvani

Kannada Online News Paper

ಕೆಸಿಎಫ್ ಶೋಲಾ ಸೆಕ್ಟರ್ ಜುಬೈಲ್ ವತಿಯಿಂದ ಬ್ರಹತ್ ಪ್ರತಿಭೋತ್ಸವ ಕಾರ್ಯಕ್ರಮ ಹಾಗೂ Inispire-19 ಪ್ರಚಾರ ಸಭೆಯು
ದಿ:29-11-2019’ರಂದು ಜುಬೈಲ್ ಕೆಸಿಎಫ್ ಅಡಿಟೋರಿಯಂ’ನಲ್ಲಿ ನಡೆಯಿತು. ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಜಿ ಎಂ ಎಸ್ ಶರೀಫ್ ಗಾಣೆಮಾರ್’ರವರು ವಹಿಸಿ ಸಯ್ಯಿದ್ ಕನ್ನಾವಂ ತಂಗಳ್’ರವರು ದುಆಗೈದು ಶುಭ ಹಾರೈಸಿ ರಫೀಖ್ ಸ’ಅದಿ ದೇಳಂಪಾಡಿಯವರ ಸಹಭಾಗಿತ್ವದಲ್ಲಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಲ್ಗೋಂಡವರನ್ನು ಶೋಲಾ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕುದ್ರಡ್ಕರವರು ಸ್ವಾಗತಿಸಿದರು.

ಕಾರ್ಯಕ್ರಮದ ಮುಖ್ಯ ಅಂಗವಾಗಿ ವಿವಿಧ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು, ಸೆಕ್ಟರ್ ಅಧೀನದಲ್ಲಿರುವ ಯುನಿಟ್’ಗಳ ಸದಸ್ಯರು ವಿವಿಧ ರೀತಿಯ ಕಲಾಸಾಹಿತ್ಯದಲ್ಲಿ ಸ್ಪರ್ಧಿಸಿ ಕಾರ್ಯಕ್ರಮಕ್ಕೆ ವಿಷೇಶವಾದ ಮೆರುಗನ್ನು ನೀಡಿದರು. ಸ್ಪರ್ಧಾರ್ತಿಗಳು ತಮ್ಮ ಪ್ರತಿಭೆಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾ ಕಾರ್ಯಕ್ರಮವನ್ನು ಆಕರ್ಷಣೀಯಮಯವಾಗಿಸಿದರು.

ಸ್ಪರ್ಧೆಯ ತೀರ್ಪುಗಾರರಾಗಿ ಜುಬೈಲ್’ನಲ್ಲಿ ಗೌರವಾನ್ವಿತ ಸ್ಥಾನದಲ್ಲಿರುವ ಹನೀಫ್ ಸ’ಅದಿ ಉಸ್ತಾದ್, ಕೆ ಸಿ ಎಫ್ ದಾಇ’ಯಾಗಿ ಕಾರ್ಯಚರಿಸುತ್ತಿರುವ ಉಮರುಲ್ ಫಾರುಖ್ ಬಾ’ಅಹ್ಸನಿ ಉಸ್ತಾದ್, ಐ.ಎನ್.ಸಿ ನಾಯಕ ಫಾರುಕ್ ಕಾಟಿಪಳ್ಳ,ಕೆ ಸಿ ಎಫ್ ರಾಷ್ಟ್ರೀಯ ಘಟಕದ ಚೆರ್ಮಾನ್ ಫೈಝಲ್ ಕ್ರಷ್ಣಾಪುರ, ಕೆಸಿಎಫ್ ಐ.ಎನ್.ಸಿ ಪ್ರಧಾನ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿಯವರು ಕಾರ್ಯನಿರ್ಹಿಸಿದರು.

Inispire-2019 ಇದರ ಪ್ರಚಾರಾತ್ಮಕ ವಿಶಯವಾಗಿ ಮಾತನಾಡಿದ ಐ.ಎನ್.ಸಿ ಪ್ರಧಾನ ಕಾರ್ಯದರ್ಶಿಯಾದಂತಹ ಕಮರುದ್ದೀನ ಗೂಡಿನಬಳಿಯವರು ಸಮುದಾಯದ ಅಭಿವೃದ್ಧಿಯನ್ನು ಪರಿಗಣಿಸಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವಾಗ ಹೈವೆ ಬದಿಯ ಮಂಗಳೂರಿನ ಮುಖ್ಯ ದ್ವಾರದತ್ತ ಬರುವಂತಹ ಕೆಸಿಎಫ್’ನ ಬಹು ದೊಡ್ಡ ಯೋಜನೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. INC ನಾಯಕ ಫಾರುಖ್ ಕಾಟಿಪಳ್ಳರವರು ಕೆಸಿಎಫ್ ಶೋಲಾ ಸೆಕ್ಟರ್ ಜುಬೈಲ್ ಇದರ ಪ್ರತಿಭೋತ್ಸವ ಕಾರ್ಯಕ್ರಮದ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಹಾಗೆಯೇ ಫೈಝಲ್ ಕ್ರಷ್ಣಾಪುರ ಮತ್ತು ಇನ್ನಿತರ ಗಣ್ಯರು ಮಾತನಾಡಿದರು. ಈ ವೇದಿಕೆಯಲ್ಲಿ ಗಣ್ಯ ವ್ಯಕ್ತಿಗಳಾದಂತಹ ಹನೀಫ್ ಸ’ಅದಿ ಉಸ್ತಾದ್, ಕೆಸಿಎಫ್ ನಾಯಕ ಅಝೀಝ್ ಸ’ಅದಿ ಉಸ್ತಾದ್, ದಮಾಮ್ ಝೋನ್’ನ ಪ್ರಧಾನ ಕಾರ್ಯದರ್ಶಿ ಶಮೀಉಲ್ಲಾಹ್ ಗೂಡಿನಬಳಿ, ಸಂಘಟನಾ ವಿಭಾಗದ ಚೆರ್ಮಾನ್ ನಿಸಾರ್ ಗೂಡಿನಬಳಿ ಮತ್ತು ಶೋಲ ಸೆಕ್ಟರ್’ನ ಸಂಘಟನಾ ವಿಭಾಗದ ಚೆರ್ಮಾನ್ ಶರೀಫ್ ಗಾಣೆಮಾರ್ ಉಪಸ್ಥಿತಿಯಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಝಿಯಾದ್ ಮಾಸ್ಟರ್ ಅತ್ಯುತ್ತಮವಾಗಿ ನೆರವೇರಿಸಿಕೊಟ್ಟರು.

ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾರ್ತಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೆಯೇ ಪ್ರತಿಭೋತ್ಸದ ಚಾಂಪಿಯನ್’ಶಿಪನ್ನು ಪಾಂಡ ಯುನಿಟ್ ಪಡೆದುಕೊಂಡರೆ ದ್ವಿತೀಯ ಮಟ್ಟದ ರನ್ನರ್ ಚಾಂಪಿಯನ್’ಶಿಪನ್ನು ಶಿಫ ಯುನಿಟ್ ತನ್ನದಾಗಿಸಿಕೊಂಡಿತು.

ಕಾರ್ಯಕ್ರಮದಲ್ಲಿ ಕೆಸಿಎಫ್ ದಮಾಮ್ ಝೋನ್ ವತಿಯಿಂದ ದಿ: 20-Dec-2019 ನಡೆಸಲ್ಪಡುವ “ಪ್ರತಿಭೋತ್ಸವ ಮತ್ತು Inispire-2019 Mega Community Gathering”ಕಾರ್ಯಕ್ರಮಕ್ಕೆ ಸರ್ವರನ್ನು ಆಹ್ವಾನಿಸಲಾಯಿತು.

ಕೊನೆಯಲ್ಲಿ ಅಝೀಝ್ ಸ’ಅದಿ ಉಸ್ತಾದರು ದುಆ ಗೈದು ಹೈದರ್ ಗಾಣೆಮಾರ್’ರವರು ಸಭೆಯಲ್ಲಿ ಹಾಜರಾದವರಿಗೆ ಮತ್ತು ಗಣ್ಯಾತಿ ಗಣ್ಯರಿಗೆ ಧನ್ಯವಾದವನ್ನು ಸಲ್ಲಿಸಿದರು.

error: Content is protected !!
%d bloggers like this: