ಸತ್ಯವಿಶ್ವಾಸಿಯ ಅವಘಡ ಮರಣವು ಖೇದಕರವಲ್ಲ : ಝೈನುಲ್ ಉಲಮಾ

ಮಾಣಿ : ಅಲ್ ಮದ್ರಸತುಲ್ ಇರ್ಶಾದಿಯ್ಯಾ ಹಳೀರ ಇರ್ಶಾದ್ ನಗರ ಇದರ ವತಿಯಿಂದ “ಜಶ್ನೇ ಮೀಲಾದ್” ಮದ್ರಸಾ ಹಾಗೂ ದರ್ಸ್ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ಮಂಗಳವಾರ ಮಾಣಿ ದಾರುಲ್ ಇರ್ಶಾದ್ ನಲ್ಲಿ ನಡೆಯಿತು.

ಅಧ್ಯಾಪಕರಾದ ನಝೀರ್ ಅಹ್ಮದ್ ಅಮ್ಜದಿ ಸರಳಿಕಟ್ಟೆ ಸ್ವಾಗತ ಮಾಡಿದರು,ಸಂಸ್ಥೆಯ ಸಾರಥಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಮಾತನಾಡಿ ಸದಾ ಮರಣದ ನೆನಪಿನೊಂದಿಗೆ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಒಳಿತಿನ ಹಾದಿಯಲ್ಲಿರುವಾಗಿನ ಮರಣವು ಪುಣ್ಯಕರವಾಗಿದೆ ಸತ್ಯವಿಶ್ವಾಸಿಯು ಅವಘಡಗಳಲ್ಲಿ ಮರಣಹೊಂದಿದರೆ ಅದು ಖೇದಕರವಲ್ಲ ಅವನು ಈಮಾನಿನೊಂದಿಗೆ ಮರಣ ಹೊಂದುವ ಭಾಗ್ಯ ಲಭಿಸುವವನಾದ್ದುದ್ದರಿಂದ ಶಹೀದಿನ ಪುಣ್ಯ ಲಭಿಸುವ ಸಾಲಿಗೆ ಸೇರುತ್ತಾನೆ ಎಂದು ಹೇಳಿದರು.

ಅವರು ಕಾರ್ಯಕ್ರಮ ಉದ್ಘಾಟಿಸಿ ದುಆ ಗೈದು ಪ್ರಾಸ್ತಾವಿಕ ಭಾಷಣ ನಡೆಸಿಕೊಟ್ಟರು,ಮಕ್ಕಳ ಪ್ರತಿಭಾ ಕಾರ್ಯಕ್ರಮ ಹಾಗೂ ಬುರ್ದಾ ಮಜ್ಲಿಸ್ ನಡೆಯಿತು.

ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಶರೀಫ್ ಸಖಾಫಿ ಶುಭಹಾರೈಸಿದರು,ಕಾರ್ಯಕ್ರಮದಲ್ಲಿ ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಡಿ ಎಸ್ ಅಬ್ದುರ್ರಹ್ಮಾನ್ ಮದನಿ ಉಳ್ತೂರು,ಸದರ್ ಅಬ್ದುಸ್ಸಲಾಂ ಹನೀಫಿ ಕಬಕ,ಅಧ್ಯಕ್ಷ ಮೂಸಾ ಕರೀಂ ಮಾಣಿ,ಎಸ್ ವೈ ಎಸ್ ಮಾಣಿ ಸೆಂಟರ್ ನಾಯಕ ಯೂಸುಫ್ ಹಾಜಿ ಸೂರಿಕುಮೇರು, ದಾರುಲ್ ಇರ್ಶಾದ್ ಮುದರ್ರಿಸ್ ಯಾಕೂಬ್ ಸಅದಿ ಬೆಟ್ಟಂಪಾಡಿ,ಎಸ್ ವೈ ಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಇಂಡಿಯನ್ ಶಾಮಿಯಾನ ಮಾಲಕರಾದ ಅಶ್ರಫ್ ಮಾಣಿ,ಉದ್ಯಮಿ ಅಝೀಝ್ ಮಾಣಿ,ಅಬ್ಬಾಸ್ ಪಟ್ಲಕೋಡಿ,ಲತೀಫ್ ಸಅದಿ ಶೇರ,ಇನ್ನಿತರ ಹಲವಾರು ಉಲಮಾ ಉಮರಾ ನಾಯಕರುಗಳು ಭಾಗವಹಿಸಿದ್ದರು.

ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

Leave a Reply

Your email address will not be published. Required fields are marked *

error: Content is protected !!