ಕೆಸಿಎಫ್ ನೇತೃತ್ವದಲ್ಲಿ ನೌಶೀದ್ ಕೃಷ್ಣಾಪುರ ಅಂತ್ಯಕ್ರಿಯೆ

ದಮ್ಮಾಮ್ ನಲ್ಲಿ ಆದಿತ್ಯವಾರದಂದು ಅಪಘಾತಕ್ಕೀಡಾಗಿ ಮರಣ ಹೊಂದಿದ ಕೃಷ್ಣಾಪುರ ನಿವಾಸಿ ಜುಬೈಲ್ ಕೆಸಿಎಫ್ ಸದಸ್ಯ ನೌಶೀದ್ ಕೃಷ್ಣಾಪುರ ರವರ ಮಯ್ಯಿತ್ ದಫನ ಕಾರ್ಯವನ್ನು ಜುಬೈಲ್ ಮಸ್ಜಿದ್ ಖಬರ್ ಸ್ಥಾನದನಲ್ಲಿ ಬುಧವಾರ ಮಗ್ರಿಬ್ ನಮಾಜಿನ ಬಳಿಕ ನಡೆಸಲಾಯಿತು.

ಅಪಘಾತವಾದ ತಕ್ಷಣವೇ ಅದಕ್ಕೆ ಬೇಕಾದ ಕಾರ್ಯಗಳು ಮತ್ತು ದಾಖಲೆ ಪತ್ರಗಳನ್ನು ಸರಿಪಡಿಸುವಲ್ಲಿ ಕೆ.ಸಿ.ಎಫ್ ಸೌದಿ ಅರೇಬಿಯಾ ಸಾಂತ್ವನ ವಿಭಾಗದ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟು, ಕೆ.ಸಿ.ಎಫ್ ದಮ್ಮಾಂ ಝೋನ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಬಾಷಾ ಗಂಗಾವಳಿ, ಅಹ್ಮದ್ ನುಮಾನ್ ,ಎಕ್ಸ್‌ಪರ್ಟೈಸ್ ನ ಆಸಿಫ್ ,ಅಬ್ದುಲ್ ಹಮೀದ್ ಕೃಷ್ಣಾಪುರ ಫೈಝಲ್ ಕೃಷ್ಣಾಪುರ ,, ಕೆ.ಸಿ.ಎಫ್ ಕಾರ್ಯಕರ್ತರು, ಕುಟುಂಬ ಸದಸ್ಯರು ಹಾಗೂ ಹಲವು ಸಂಘಟನೆಯ ನಾಯಕರು ಸಹಕರಿಸಿದರು.

ಮಯ್ಯತ್ ದಫನ ಕಾರ್ಯದಲ್ಲಿ ಕೆಸಿಎಫ್( ಐಎನ್ಸಿ) ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ ,ಉಮ್ಮರ್ ಫಾರೂಕ್ ಬಹಸನಿ, ,ಮತ್ತು ಹಲವು ಸಂಘಟನೆ ಗಳ ನಾಯಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!