ಝಕರಿಯಾ ಸ್ವಲಾಹಿ ವಾಹನ ಅಪಘಾತದಲ್ಲಿ ನಿಧನ

ಕಣ್ಣೂರು(ಕೇರಳ) ಜು.14: ಸಲಫಿ ಉಪನ್ಯಾಸಕರೂ, ಮುಜಾಹಿದ್ ನಾಯಕರಾದ ಡಾ.ಝಕರಿಯಾ ಸ್ವಲಾಹಿ(54) ವಾಹನ ಅಪಘಾತದಲ್ಲಿ ಮರಣ ಹೊಂದಿದರು.

ಇಂದು ಮಧ್ಯಾಹ್ನ ತಲಷ್ಶೇರಿ ಮನೇಕೆರೆಯಲ್ಲಿ ಅವರು ಸಂಚರಿಸುತ್ತಿದ್ದ ಸ್ಕೂಟರಿಗೆ ಬಸ್ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ರಕ್ಷಿಸಲಾಗಿಲ್ಲ.

ಮುಜಾಹಿದ್ ಸಂಘಟನೆಯ ಮೊದಲ ಭಿನ್ನತೆಯ ಬಳಿಕ ಕೆಎನ್ಎಂ ಅಧಿಕೃತ ಸಂಘಟನೆಯಲ್ಲಿ ಗುರುತಿಸಿಕೊಂಡು ಯುವಜನ ವಿಭಾಗಕ್ಕೆ ನೇತೃತ್ವ ನೀಡಿದರು. ಮತ್ತೆ ಯುವಜನ ನಾಯಕರೊಂದಿಗೆ ವಿಸ್ಡಂ ರೂಪೀಕರಿಸುವಲ್ಲಿ ಸಕ್ರಿಯರಾದರು. ಮತ್ತೆ ವಿಸ್ಡಂ ಗ್ಲೋಬಲ್ ವಿಷನ್ ನೇತಾರರೊಂದಿಗೆ ಅಭಿಪ್ರಾಯ ಭಿನ್ನತೆಯಿಂದ ಸ್ವತಂತ್ರರಾಗಿ ಕಾರ್ಯಾಚರಿಸುತ್ತಿದ್ದರು.

ಕೇರಳ ಸಲಫಿಗಳ ಹಲವು ಆಶಯಗಳಿಗೆ ಭಾಷಣ, ಲೇಖನಗಳ ಮೂಲಕ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರು.

ಪಾಲಕ್ಕಾಡ್ ಜಿಲ್ಲೆಯವರಾದ ಅವರು ಕಣ್ಣೂರಿನ ಕಡವತ್ತೂರಿನಲ್ಲಿ ವಾಸಿಸುತ್ತಿದ್ದರು. ಎಡವಣ್ಣ ಜಾಮಿಯಾ ನದ್ವಿಯ್ಯಾದಿಂದ ಪದವಿ ಪಡೆದು, ಅಲೀಘಡ್ ಮುಸ್ಲಿಂ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು.

ನಂತರ ಕಡವತ್ತೂರು ನುಸ್ರತುಲ್ ಇಸ್ಲಾಂ ಅರಬಿಕ್ ಕಾಲೇಜ್ ನಲ್ಲಿ ಅಧ್ಯಾಪಕರಾಗಿ ಸೇವೆ ಗೈಯುತ್ತಿದ್ದರು.

ಕೃಪೆ: ಸಿರಾಜ್ ಡೈಲಿ

Leave a Reply

Your email address will not be published. Required fields are marked *

error: Content is protected !!