janadhvani

Kannada Online News Paper

ತಾಂತ್ರಿಕ ವಿವಿಗಳಲ್ಲಿ ಸರ್ಚ್ ಸಮಿತಿ ರಚನೆ ಗೆ ಮುಂದಾದ ಕೇರಳ ಸರಕಾರ- ವಿವಿ ಕುಲಾಧಿಪತಿ ರಾಜ್ಯಪಾಲರಿಗೆ ಸಡ್ಡು

ಎ ಪಿ ಜೆ ಅಬ್ದುಲ್ ಕಲಾಂ ತಾಂತ್ರಿಕ ವಿವಿಗಳಲ್ಲಿ ಉಪಕುಲಪತಿ ನೇಮಕ ಗೊಳಿಸಿಲು ಕೇರಳ ಸರಕಾರ ಮುಂದಾಗಿರುವುದಾಗಿ ವರದಿಯಾಗಿದೆ. ಕುಲಾಧಿಪತಿಗಳಾದ ರಾಜ್ಯಪಾಲರನ್ನು ಕಡೆಗಣಿಸಿ ಸರಕಾರವು ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ವಿಶ್ವವಿದ್ಯಾಲಯ ಕಾನೂನುಗಳ ತಿದ್ದುಪಡಿ ಮಸೂದೆ – 2021, 2022, ಕೇರಳ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ – 2022 ಸೇರಿದಂತೆ ಹಲವು ಮಸೂದೆಗಳನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ನಿರ್ದಿಷ್ಟವಾದ ಕಾರಣವನ್ನೂ ನೀಡದೇ, ಸಹಿಯೂ ಹಾಕದೇ ಇರುವುದು ಅಸಾಂವಿಧಾನಿಕ ಎಂದು ತೀರ್ಪು ನೀಡುವಂತೆ ಕೇರಳ ಸರ್ಕಾರ ಇತ್ತೀಚಿಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿತ್ತು .

ಉಪಕುಲಪತಿ ಯ ನೇಮಕ ಪ್ರಕ್ರಿಯೆಯಲ್ಲಿ ಸರಕಾರ ಪ್ರಮುಖ ಪಾತ್ರ ವಹಿಸಲು ಅವಕಾಶ ಕೊಡುವ ತಿದ್ದುಪಡಿ ಮಸೂದೆ ಗೆ
ರಾಷ್ಟ್ರ ಪತಿಯ ಅಂಕಿತ ಬೀಳದಿದ್ದರೂ ಅದೇ ಮಸೂದೆ ಯನುಸಾರ ಸರಕಾರವು ಸರ್ಚ್ ಕಮಿಟಿ ರಚನೆಗೆ ಆದೇಶ ಹೊರಡಿಸಿದೆ ಎಂದು ಕೆಲವು ಮಳಯಾಲಂ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವವಿದ್ಯಾನಿಲಯ, ಯುಜಿಸಿ ಮತ್ತು ಉನ್ನತ ಶಿಕ್ಷಣ ಪರಿಷತ್ತಿನ ಪ್ರತಿನಿಧಿಗಳನ್ನು ಶೋಧನಾ ಸಮಿತಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಡಿಜಿಟಲ್ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ತಾಂತ್ರಿಕ ವಿಶ್ವವಿದ್ಯಾಲಯದ ಹೆಚ್ಚುವರಿ ಪ್ರಭಾರವನ್ನು ನೀಡಲಾಗಿದೆ.

error: Content is protected !! Not allowed copy content from janadhvani.com