janadhvani

Kannada Online News Paper

ಗಲ್ಫ್ ವಲಯಕ್ಕೆ ಟಿಕೆಟ್ ದರದಲ್ಲಿ 400 ಶೇಕಡಾ ಹೆಚ್ಚಿಸಿದ ವಿಮಾನ ಕಂಪನಿಗಳು

ಕಲ್ಲಿಕೋಟೆ: ವಿಮಾನ ಕಂಪನಿಗಳು ಗಲ್ಫ್ ವಲಯಕ್ಕೆ ಟಿಕೆಟ್ ದರದಲ್ಲಿ 400 ಶೇಕಡಾ ಹೆಚ್ಚಿಸಿದೆ. ರಜಾದಿನಗಳಲ್ಲಿ ಏರಿಸಲಾಗುವ ದರಗಳ ಹೊರತಾಗಿ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳಿಗೆ ಏರ್ಪಡಿಸಲಾದ ನಿಷೇಧದ ಮರೆಯಲ್ಲಿ ವಿಮಾನ ಕಂಪೆನಿಗಳು ಪ್ರಯಾಣಿಕರನ್ನು ಪೇಚಿಗೀಡು ಮಾಡಿದೆ.

ರಜಾದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗುವ ಕಾರಣ ದರಗಳನ್ನು ಹೆಚ್ಚಿಸುವುದು ವಿಮಾನಯಾನ ಸಂಸ್ಥೆಗಳು ಸಾಮಾನ್ಯವಾಗಿ ಮಾಡುವ ಉಪಾಯವಾಗಿದೆ. ಆದಾಗ್ಯೂ ಖಾಸಗಿ ವಿಮಾನಯಾನ ಕಂಪೆನಿಗಳ ಹೊರತಾಗಿ ಏರ್ ಇಂಡಿಯಾ ಕೂಡ ದರವನ್ನು ಏರಿಸಿದ್ದು, ಪ್ರಯಾಣಿಕರು ಕಷ್ಟಪಡುವಂತಾಗಿದೆ.

ಕಳೆದ ವಾರವಿದ್ದ ಟಿಕೆಟ್ ದರದ ನಾಲ್ಕುಪಟ್ಟು ಹೆಚ್ಚು ಪಾವತಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಏರ್ ಇಂಡಿಯಾ ಖಾಸಗಿ ಕಂಪೆನಿಗಳನ್ನು ಮೀರಿಸಿದ್ದು, ದರ ಏರಿಸಿದ ಕಾರಣದಿಂದಾಗಿ ಹೆಚ್ಚಿನ ಏರ್ ಇಂಡಿಯಾ ವಿಮಾನಗಳ ಸೀಟ್‌ಗಳು ಖಾಲಿ ಉಳಿದಿದೆ ಎಂಬ ಆರೋಪವಿದೆ.

ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳ ನಿಷೇಧವು ಏರುತ್ತಿರುವ ದರಗಳಿಗೆ ಮುಖ್ಯ ಕಾರಣವಾಗಿದೆ ಎನ್ನಲಾಗುತ್ತಿದ್ದು, ಈ ವಾದವನ್ನು ಪ್ರಶ್ನಿಸಲಾಗಿದೆ. ಅಂತಹ ವಿಮಾನಗಳು ಹಾರಾಟ ಮಾಡದ ವಲಯದಲ್ಲೂ ದರವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ದರವು ಇನ್ನಷ್ಟು ಏರುವ ಸಾಧ್ಯತೆಯಿದೆ.

error: Content is protected !! Not allowed copy content from janadhvani.com