janadhvani

Kannada Online News Paper

ಯುಎಇ ವೀಸಾ : 15 ಸೆಕೆಂಡ್‌ಗಳಲ್ಲಿ ಪೂರ್ತಿಯಾಗುವ ಅತ್ಯಾಧುನಿಕ ಯೋಜನೆ ಯಶಸ್ವಿ

ಅಬುಧಾಬಿ: ಯುಎಇಯ ವೀಸಾಗಳನ್ನು ಪಡೆಯಲು ಸಲ್ಲಿಸುವ ಅರ್ಜಿಗಳು 15 ಸೆಕೆಂಡ್‌ಗಳಲ್ಲಿ ಪೂರ್ತಿಯಾಗುವ ಅತ್ಯಾಧುನಿಕ ಯೋಜನೆಯು ಯಶಸ್ವಿಯಾಗಿದೆ ಎಂದು ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಆ್ಯಂಡ್ ಫಾರಿನೆರ್ಸ್ ಅಫೇರ್ಸ್ (ಜಿ.ಡಿ.ಆರ್‌.ಎಪ್.ಎ.) ತಿಳಿಸಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಧಾರಿತವಾಗಿ ಕಾರ್ಯಾಚರಿಸುವ ಎಂಟ್ರಿ ಪರ್ಮಿಟ್ 50 ಪ್ಲಸ್‌ ಎನ್ನುವ ಯೋಜನೆಯ ಮೂಲಕ ರೆಕಾರ್ಡ್ ವೇಗದಲ್ಲಿ ಇಲೆಕ್ಟ್ರಾನ್ ವಿಸಾಗಳನ್ನು ಅನುಮತಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮಾನವ ಹಸ್ತಕ್ಷೇಪವನ್ನು ಆದಷ್ಟು ಕಡಿಮೆಗೊಳಿಸಿ ಪರಿಶೋಧನೆಗಳನ್ನು ಕಂಪ್ಯೂಟರೀಕರಣಗೊಳಿಸಿ ಈ ಯೋಜನೆ ಕಾರ್ಯಾಚರಿಸಲಿದೆ.

ಹೊಸ ಯೊಜನೆ ಜಾರಿಗೆ ಬಂದ ನಂತರ 50 ಲಕ್ಷ ಅರ್ಜಿಗಳನ್ನು ರೆಕಾರ್ಡ್ ವೇಗದಲ್ಲಿ ಇಷ್ಟರ ವರೆಗೆ ಕಾರ್ಯಗತಗೊಳಿಸಲಾಗಿದೆ. ಒಂದು ನಿಮಿಷ ಕೂಡ ಕಾಯಬೇಕಾದ ಅನಿವಾರ್ಯತೆ ಇಲ್ಲವಾದ ಕಾರಣ ಸರ್ವೀಸ್ ಸೆಂಟರ್‌ಗಳಲ್ಲಿನ ಒತ್ತಡ ಶೇ.99 ರಷ್ಟು ಕಡಿಮೆಯಾಗಿದೆ. ಜಿ.ಡಿ.ಆರ್.ಎಫ್.ನ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿಸಾ ಅನುಮತಿಸುವ ಮೊದಲು ದಾಖಲೆಗಳನ್ನು ಮಾನವರ ಸಹಾಯವಿಲ್ಲದೆ ಪರಿಶೋಧನೆಗೆ ಒಳಪಡಿಸಲಾಗುತ್ತದೆ. ಪೂರ್ಣಗೊಂಡ ಬಳಿಕ ತಕ್ಷಣ ಇಲೆಕ್ಟ್ರಾನ್ ವಿಸಾ ಲಭ್ಯವಾಗಲಿದೆ. ಕಳೆದ ಒಂದು ವರ್ಷದಿಂದ ಕಾರ್ಯಾಚರಿಸುವ ಯೋಜನೆ ಸಂಪೂರ್ಣ ಯಶಸ್ವಿಯಾಗಿಯಾಗಿದೆ ಎಂದು ಜಿ.ಡಿ.ಆರ್.ಎಫ್.ಎ. ಡೈರೆಕ್ಟರ್ ಮೇಜರ್ ಜನರಲ್ ಮುಹಮ್ಮದ್ ಅಹ್ಮದ್ ಅಲ್ ಮರಿ ಹೇಳಿದ್ದಾರೆ. ಮಾನವರಿಗಿಂತ ಅಚ್ಚುಕಟ್ಟಾಗಿ ದಾಖಲೆಗಳನ್ನು ಪರಿಶೀಲಿಸಿ ತೀರ್ಪು ನೀಡುವ 50 ಪ್ಲಸ್ ಯೋಜನೆ ಮೂಲಕ ಯುಎಇಗೆ ಐವತ್ತು ವರ್ಷಗಳನ್ನು ದಾಟಿ ಸಂಚರಿಸಲು ಸಾಧ್ಯವಾಯಿತು ಎಂದವರು ನುಡಿದರು.

error: Content is protected !! Not allowed copy content from janadhvani.com