ಕುಂದಾಪುರ (ಜನಧ್ವನಿ ವರದಿ) ಇತ್ತೀಚೆಗೆ ಬೆಂಗಳೂರಿನಿಂದ ಊರಿಗೆ ಮರಳಿದ ಯುವಕನೊಬ್ಬನಿಗೆ ಮನೆಯಲ್ಲೇ ಗೃಹ ಬಂಧನ ದಲ್ಲಿರಲು ಹೇಳಿದ ಆಶಾ ಕಾರ್ಯಕರ್ತೆ ಲಕ್ಷ್ಮೀ ಎಂಬವರಿಗೆ ಜೀವ ಬೆದರಿಕೆ ಒಡ್ಡಿದ ಘಟನೆ ವರದಿಯಾಗಿದ್ದು ಇದೀಗ ಈ ಯುವಕ ಮತ್ತು ಆತನ ಗೆಳೆಯನನ್ನೂ ಬಂಧಿಸಿ ಜೈಲಿಗಟ್ಟಲಾಗಿದೆ.

ಮದ್ದುಗುಡ್ಡೆ ನಿವಾಸಿಯಾಗಿರುವ ಸಂದೀಪ ಮೇಸ್ತ ಎಂಬಾತ ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ಊರಿಗೆ ಮರಳಿದ ಸುದ್ದಿ ಅರಿತ ಆಶಾ ಕಾರ್ಯಕರ್ತೆ ಆತನ ಮನೆಗೆ ತೆರಳಿ ಹೊರಗಡೆ ಎಲ್ಲೂ ಓಡಾಡದೆ ಮನೆಯಲ್ಲೇ ಇರುವಂತೆ ಸೂಚಿಸಿದ್ದು ಇದರಿಂದ ಕುಪಿತನಾದ ಸಂದೀಪ ತನ್ನ ಗೆಳೆಯ ಮಹೇಶ ಖಾರ್ವಿ ಎಂಬಾತನ ಜೊತೆ ಸೇರಿ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ ನೀಡಿದ್ದ, ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಆಶಾ ಕಾರ್ಯಕರ್ತೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಧೀಶರು ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸುನ್ನೀ ಕೋ-ಓಡಿನೇಶನ್ ವತಿಯಿಂದ ಎಮ್ ಎ ಗಫೂರ್ ರವರಿಗೆ ಸನ್ಮಾನ
ಉಡುಪಿಯಲ್ಲಿ : ಎಸ್ ವೈ ಎಸ್ ‘ಸೌಹಾರ್ದ ಸಂಚಾರ’
ನಮ್ಮ ನಾಡ ಒಕ್ಕೂಟ: ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಸಹಾಯಧನ ವಿತರಣೆ
ಎನ್.ಎನ್.ಓ ಉಡುಪಿ ಜಿಲಾ ಸಮಿತಿ: ಕಟ್ಟಡ ದಾನಿಗೆ ಸನ್ಮಾನ
ಉಡುಪಿ: ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಸಹಾಯಧನ ಹಸ್ತಾಂತರ
ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಪದಗ್ರಹಣ ಹಾಗೂ ಸನ್ಮಾನ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪರ್ಕಳ ಹಾಜಿ ಅಬ್ದುಲ್ಲಾ ಸಾಹೇಬರಿಗೆ ಸನ್ಮಾನ
ಖಿದ್ಮಾ ಫೌಂಡೇಶನ್ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಿದ ಎನ್.ಎನ್. ಓ ಉಡುಪಿ ಜಿಲ್ಲಾ ನಿಯೋಗ
ನಮ್ಮ ನಾಡ ಒಕ್ಕೂಟ, ಟೀಮ್ ಮಲೆನಾಡು ಹ್ಯೂಮನಿಟೇರಿಯನ್ ಟ್ರಸ್ಟ್- ಸಹಾಯಧನ ಹಸ್ತಾಂತರ