ಉಡುಪಿ :ಟೀಮ್ ಮಲೆನಾಡು ಹ್ಯೂಮೆನೀಟೇರಿಯನ್ ಟ್ರಸ್ಟ್ (ರಿ) ಬೆಳ್ವೆ ಹೆಬ್ರಿ ತಾಲೂಕು ಉಡುಪಿ ಜಿಲ್ಲೆ ವತಿಯಿಂದ ಹಾಗೂ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ ಮಲ್ಪೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ವಿದ್ಯಾಭ್ಯಾಸ ಮುಂದುವರೆಸಲು ಸಹಾಯಧನ ಹಸ್ತಾಂತರ ನೀಡುವ ಕಾರ್ಯಕ್ರಮ ಸಾಸ್ತಾನ ಸಾಗರ್ ಪ್ಲಾಜಾ ಸಭಾ ಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಟೀಮ್ ಮಲೆನಾಡು ಹ್ಯೂಮೆನೀಟೇರಿಯನ್ ಟ್ರಸ್ಟ್ (ರಿ) ಬೆಳ್ವೆ , ಹಾಗೂ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಮುಸ್ತಾಕ್ ಅಹಮದ್ ಬೆಳ್ವೆ ವಹಿಸಿದ್ದರು.ಜಿಲ್ಲಾ ವಕ್ಫ್ ಸಮಿತಿ ಮಾಜಿ ಅದ್ಯಕ್ಷ , ಎನ್.ಎನ್ . ಓ ಉಡುಪಿ ಜಿಲ್ಲಾ ಖಚಂಚಿ ನಕ್ವಾ ಯಾಹ್ಯ ಸಹಾಯಧನ ನೀಡಿದರು.ಎನ್.ಎನ್.ಓ ಸೆಂಟ್ರಲ್ ಸಮಿತಿಯ ಸಂಘಟನಾ ಕಾರ್ಯದರ್ಶಿ ಹಾಗೂ ಟೀ. ಎಂ.ಹೇಚ್. ಟ್ರಸ್ಟಿ ಹುಸೈನ್ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. .ಎನ್.ಎನ್.ಓ ಕುವೈಟ್ ಅಧ್ಯಕ್ಷ ಆಶ್ರಫ್ ಹಂಗಾರಕಟ್ಟೆ. ಟೀ.ಎಂ.ಹೇಚ್.ಟ್ರಸ್ಟಿಗಳಾದ ಪಿರು ಸಾಹೇಬ್, ಅರಾಫತ್ ಅಲ್ಬಾಡಿ,ನಮ್ಮ ನಾಡ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷರಗಳದ ಶಾಕಿರ್ ಹವಂಜೆ, ಸಾದಿಕ್ ಉಸ್ತಾದ್, ಬ್ರಹ್ಮಾವರ ಘಟಕದ ಉಸ್ತುವಾರಿ ಅಬ್ದುಲ್ ಮುನಾಫ್ ಹಂಗಾರಕಟ್ಟೆ. ಜಿಲ್ಲಾ ಜೊತೆ ಕಾರ್ಯದರ್ಶಿ ಸುಹನ್ ಸಾಸ್ತಾನ, ಜಿಲ್ಲಾ ಸಮಿತಿಯ ಸದಸ್ಯರಾದ ಹಾರುನ್ ರಶೀದ್,ಬ್ರಹ್ಮಾವರ ಘಟಕ ಅಧ್ಯಕ್ಷ ತಾಜುದ್ದಿನ್, ಉಡುಪಿ ಘಟಕದ ಅಧ್ಯಕ್ಷ ನಝೀರ್ ನೇಜರ್.ಸಾಗರ್ ಪ್ಲಾಜಾ ಮಾಲಕ ಬಿಲಾಲ್ ಹಾಗೂ ಮುಂತಾದವರು ಉಪಸ್ತಿದರಿದ್ದರು.